Advertisement
ಬೀರೂರು ಪಟ್ಟಣದ ಗುರುಭವನದಲ್ಲಿ ಶುಕ್ರವಾರ ಶಿಕ್ಷಣ ಇಲಾಖೆ ಹಾಗೂ ಬೀರೂರು ಶೈಕ್ಷಣಿಕ ವಲಯದ ಶಿಕ್ಷಕರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ 61 ನೇ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬೀರೂರು ಶೈಕ್ಷಣಿಕ ವಲಯವನ್ನು ಮಲೆನಾಡು ಭಾಗದಿಂದ ಶಿಕ್ಷಣ ಇಲಾಖೆ ಹೊರಗಿಟ್ಟಿದ್ದರ ಪರಿಣಾಮ ಅನೇಕ ಶಿಕ್ಷಕರಿಗೆ ಇದು ತೊಡಕಾಗಿತ್ತು. ಇದನ್ನು ಸರಿಪಡಿಸುವಂತೆ ಶಿಕ್ಷಣ ಇಲಾಖೆ ಸಚಿವರು ಹಾಗೂ ಆಯುಕ್ತರಿಗೆ ಮನವಿ ನೀಡಿದ ಹಿನ್ನೆಲೆಯಲ್ಲಿ ಇಂದು ಮಲೆನಾಡು ಭಾಗ ಎಂದು ಇಲಾಖೆ ಘೋಷಿಸಿದ ಪರಿಣಾಮ ಇಂದು ಈ ಭಾಗದ ಶಿಕ್ಷಕರಿಗೆ ಬೇರೆಡೆ ನಿಯುಕ್ತಿಯಾಗದಂತೆ ಸಹಕಾರಿಯಾಗಿದೆ ಎಂದರು.
ಹೋರಾಟದ ಫಲವಾಗಿ ರಾಜ್ಯ ಸರ್ಕಾರಿ ನೌಕರರಿಗೆ ಸರ್ಕಾರ ಅಕ್ಟೋಬರ್ ತಿಂಗಳಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 7ನೇ ವೇತನ ಆಯೋಗವನ್ನು ಘೋಷಣೆ ಮಾಡಿದ್ದು ಮುಂದಿನ ಜನವರಿಯಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಬರಲಿದೆ ಎಂಬ ಭರವಸೆ ನೀಡಿದರು. ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಮಾತನಾಡಿ, ಸಮಾಜದ ಅಭಿವೃದ್ಧಿ ಹಾಗೂ ವಿದ್ಯಾರ್ಥಿಗಳನ್ನು ಮುಖ್ಯವಾಹಿನಿಗೆ ತರುವಲ್ಲಿ ಹಾಗೂ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಶಿಕ್ಷಕರ ಸೇವೆ ಶ್ಲಾಘನೀಯ. ಶಿಕ್ಷಕರು ಮಕ್ಕಳಿಗೆ ಜೀವನ ನಿರ್ವಹಿಸುವ ಶಿಕ್ಷಣವನ್ನು ನೀಡಬೇಕು. ಹಿಂದೆ ಗುರುಕುಲದ ಶಿಕ್ಷಣ ಅದ್ಭುತವಾಗಿತ್ತು. ಅದರಂತೆ ನಮ್ಮ ಕಾಲದ ಶಿಕ್ಷಣದಲ್ಲಿ ಗುರು ಹಿರಿಯರನ್ನು ಗೌರವಿಸುವ, ಸಮಾಜಕ್ಕೆ ಮಾದರಿಯಾಗಿದ್ದರು ಎಂದರು.
Related Articles
ರಮೇಶ್ ಮತ್ತಿತರರು ಇದ್ದರು.
Advertisement