Advertisement

ಮಳೆಗೆ 350 ಹೆಕ್ಟೇರ್‌ ಒಣ ದ್ರಾಕ್ಷಿ ಹಾನಿ

06:09 PM Apr 11, 2021 | Team Udayavani |

ಕೋಹಳ್ಳಿ: ಅಥಣಿ ತಾಲೂಕಿನಲ್ಲಿ ಶುಕ್ರವಾರ ಸಂಜೆ ಸುರಿದ ಅಕಾಲಿಕ ಮಳೆಯಿಂದ ಶೇಡ್‌ಗಳಲ್ಲಿ ಹಾಕಿದಒಣದ್ರಾಕ್ಷಿ (ಮನೂಕ) ಹಾಳಾಗಿದ್ದು. ಶನಿವಾರ ಸ್ಥಳಕ್ಕೆತೋಟಗಾರಿಕೆ ಇಲಾಖೆ ಅಧಿ ಕಾರಿ ಅಕ್ಷಯಕುಮಾರ ಉಪಾಧ್ಯಾಯ ಭೇಟಿ ನೀಡಿ ಹಾನಿ ಬಗ್ಗೆ ಮಾಹಿತಿ ಪಡೆದರು.

Advertisement

ನಂತರ ಮಾತನಾಡಿದ ಅವರು, ಅಥಣಿ ತಾಲೂಕಿನಲ್ಲಿ ಸುಮಾರು 3000 ಹೆಕ್ಟೇರ್‌ ಪ್ರದೇಶದಲ್ಲಿ ದ್ರಾಕ್ಷಿಬೆಳೆಯಲಾಗುತ್ತಿದೆ. ಅದರಲ್ಲಿ ತಾಲೂಕಿನ ಪೂರ್ವಭಾಗದ ಕೋಹಳ್ಳಿ, ಕಕಮರಿ, ರಾಮತೀರ್ಥ, ಅರಟಾಳ, ಕೊಟ್ಟಲಗಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಶುಕ್ರವಾರಸಂಜೆ ಸುರಿದ ಭಾರಿ ಬಿರುಗಾಳಿ ಸಹಿತ ಮಳೆಗೆ ಈ ಎಲ್ಲಗ್ರಾಮಗಳ ಒಟ್ಟು 350 ಹೆಕ್ಟೇರ್‌ ಪ್ರದೇಶದ ಒಣದ್ರಾಕ್ಷಿ(ಮನೂಕ) ತೊಯ್ದು ನಾಶವಾಗಿ ಲಕ್ಷಾಂತರ ರೂ. ಹಾನಿಯಾಗಿದೆ ಎಂದರು.

ಮಾರುಕಟ್ಟೆಯಲ್ಲಿ ಒಣದ್ರಾಕ್ಷಿ ಕೆಜಿಗೆ 150 ರಿಂದ 200ರವರೆಗೆ ಮಾರಾಟವಾಗುತ್ತಿದೆ. ಆದರೆ ಶುಕ್ರವಾರ ಸಂಜೆ ಸುರಿದ ಬಾರಿ ಅಕಾಲಿಕ ಮಳೆಯಿಂದ ಒಣದ್ರಾಕ್ಷಿಯಗುಣಮಟ್ಟ ಹಾಳಾಗಿದೆ. ಇದರಿಂದ ಇದರ ಬೆಲೆಮಾರುಕಟ್ಟೆಯಲ್ಲಿ 80 ರೂ, ದಿಂದ 100 ರೂ, ವರೆಗೂ ಮಾತ್ರ ಮಾರಾಟವಾಗುತ್ತದೆ ಎನ್ನುತ್ತಾರೆ ರೈತರು.

ಪರಿಹಾರ ನೀಡಿ : ಈ ಭಾಗದ ಅನೇಕ ರೈತರು ದ್ರಾಕ್ಷಿ ಬೆಳೆಗೆ 2018-19 ಸಾಲಿನ ಹಿಂಗಾರು ಹಂಗಾಮಿನಲ್ಲಿ ಹವಾಮಾನ ಆಧಾರಿತ ಬೆಳೆ ವಿಮೆ ಮಾಡಿಸಿದ್ದರು.ಆದರೆ ರೈತರಿಗೆ ವಿಮಾ ಕಂಪನಿಯವರು ಈವರೆಗೆಹಾನಿ ಪರಿಹಾರ ನೀಡಿಲ್ಲ. ಈಗ ಅಧಿಕಾರಿಗಳು ಹಾನಿಸರ್ವೇ ಮಾಡಿ 2019-20ರ ಸಾಲಿನ ವಿಮೆ ಪರಿಹಾರಬೇಗನೆ ಒದಗಿಸಬೇಕೆಂಬುದು ಈ ಭಾಗದ ರೈತರ ಆಗ್ರಹವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next