Advertisement
ಯಮುನೆ ದಡದಲ್ಲಿ ಪ್ರವಾಹ ಭೀತಿ: ಭಾರೀ ಮಳೆಯಿಂದಾಗಿ ಯಮುನಾ ನದಿ, ಅಪಾಯಮಟ್ಟ ಮೀರಿ ಹರಿಯುತ್ತಿದೆ. ಹಾಗಾಗಿ, ಆ ನದಿಯು ಸಾಗುವ ದಿಲ್ಲಿ, ಹರ್ಯಾಣ, ಪಂಜಾಬ್ ಹಾಗೂ ಉತ್ತರ ಪ್ರದೇಶ ರಾಜ್ಯಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ದಿಲ್ಲಿಯಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿರುವ ಹಿನ್ನೆಲೆಯಲ್ಲಿ, 2,120 ನಿರಾಶ್ರಿತರ ಶಿಬಿರಗಳನ್ನು ತೆರೆಯ ಲಾಗಿದ್ದು, ರಾಜ್ಯದ ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರು ಶಿಬಿರಗಳಿಗೆ ತೆರಳುವಂತೆ ಅಲ್ಲಿನ ಸಿಎಂ ಅರವಿಂದ್ ಕೇಜ್ರಿ ವಾಲ್, ಜನರಲ್ಲಿ ಮನವಿ ಮಾಡಿದ್ದಾರೆ.
Related Articles
Advertisement
ಮೇಘಸ್ಫೋಟಕ್ಕೆ 17 ಬಲಿ: ಉತ್ತರ ಪ್ರದೇಶದ ಕಾಶಿ ಜಿಲ್ಲೆಯ ಮೋರಿ ಬ್ಲಾಕ್‌ನಲ್ಲಿ ಮೇಘಸ್ಫೋಟ ಉಂಟಾಗಿ, 17 ಜನರು ಸಾವಿಗೀಡಾಗಿದ್ದಾರೆ. 18 ಜನರು ನಾಪತ್ತೆ ಯಾಗಿದ್ದು, ಅವರಿಗಾಗಿ ಶೋಧ ನಡೆದಿದೆ. ಜಲಾವೃತ ಪ್ರದೇಶಗಳಿಂದ ಇಬ್ಬರನ್ನು ಡೆಹ್ರಾಡೂನ್‌ಗೆ ಏರ್‌ಲಿಫ್ಟ್ ಮಾಡಲಾಗಿದೆ. ಶಾಲೆಗಳಿಗೆ ಅನಿರ್ದಿಷ್ಟಾವಧಿ ರಜೆ ಘೋಷಿಸಿಲಾಗಿದೆ. ಉತ್ತರ ಪ್ರದೇಶದಲ್ಲಿ ಹರಿಯುತ್ತಿರುವ ಗಂಗಾ, ಯಮುನಾ, ಘಾಗ್ರಾ ನದಿಗಳು ಉಕ್ಕಿ ಹರಿಯುತ್ತಿದ್ದು, ಗಂಗಾ ನದಿಯು ಬದೌನ್, ಗರ್ಮುಕ್ತೇಶ್ವರ, ನರೌದಾ, ಫರುಕಾಬಾದ್‌ನಲ್ಲಿ ಅಪಾಯ ಮಟ್ಟ ಮೀರಿ ಹರಿಯುತ್ತಿದೆ.
ಮೀನುಗಾರರ ರಕ್ಷಣೆಜಮ್ಮು ಜಿಲ್ಲೆಯಲ್ಲಿ ತಾವಿ ನದಿಯ ಪ್ರವಾಹದ ನಡುವ ಸಿಲುಕಿದ್ದ ನಾಲ್ವರು ಮೀನುಗಾರರನ್ನು ಭಾರತೀಯ ವಾಯುಪಡೆಯ (ಐಎಎಫ್) ಸಿಬಂದಿ, ಯಶಸ್ವಿ ಕಾರ್ಯಾಚರಣೆ ಮೂಲಕ ಏರ್‌ಲಿಫ್ಟ್ ಮಾಡಿದ್ದಾರೆ. ಮೀನುಗಾರರು ನದಿಯ ನಡುವೆ ಸಿಲುಕಿದ ವಿಚಾರ ಮಧ್ಯಾಹ್ನ 12 ಗಂಟೆಗೆ ಐಎಎಫ್ಗೆ ಲಭ್ಯವಾಗಿತ್ತು. ಕೇವಲ ಅರ್ಧ ಗಂಟೆಯಲ್ಲಿ ಸ್ಥಳಕ್ಕೆ ತಲುಪಿದ ವಾಯುಪಡೆ ಸಿಬಂದಿ, ಯಶಸ್ವಿಯಾಗಿ ಅವರನ್ನು ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ದಿತು ಎಂದು ಜಮ್ಮುವಿನಲ್ಲಿ ವಾಯುಪಡೆಯ ಕಾರ್ಯಾಚರಣೆಗಳ ಉಸ್ತುವಾರಿ ಹೊತ್ತಿರುವ ಸಂದೀಪ್ ಸಿಂಗ್ ತಿಳಿಸಿದ್ದಾರೆ.