Advertisement

ಸಂಘಗಳು ನಾಡು-ನುಡಿಯ ಅಭಿವೃದ್ಧಿಗೆ ಬದ್ಧವಾಗಬೇಕು 

12:30 PM Feb 01, 2019 | |

ಮುಂಬಯಿ: ಸಂಘ-ಸಂಸ್ಥೆಗಳನ್ನು ಸ್ಥಾಪಿಸುವುದರಿಂದ ನಮ್ಮ ತುಳು-ಕನ್ನಡಿಗರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆ ನಿರ್ಮಾಣವಾಗುವುದಲ್ಲದೆ, ನಮ್ಮ ಕರ್ನಾಟಕದ ಭವ್ಯ ಸಂಸ್ಕೃತಿ, ಪರಂಪರೆಯನ್ನು ಮರಾಠಿ ಮಣ್ಣಿನಲ್ಲಿ  ಮುಂದುವರಿಸಲು ಒಂದು ಅವಕಾಶ ಸಿಗುತ್ತದೆ. ಈ ಮೂಲಕ ಮಕ್ಕಳು ಪಾಶ್ಚಾತ್ಯ ಸಂಸ್ಕೃತಿಯನ್ನು ಅನುಸರಿಸುವುದನ್ನು ಬಿಟ್ಟು ನಮ್ಮ ಸಂಸ್ಕೃತಿಯನ್ನು ಉಳಿಸಿ-ಬೆಳೆಸಿಕೊಳ್ಳುವ ಸಂದರ್ಭ ದೊರಕಿದಂತಾಗುತ್ತದೆ. ಈ ಉದ್ದೇಶದಿಂದ ವಸಾಯಿ ಪರಿಸರದಲ್ಲಿ ಜಾತಿಯ ಭೇದಭಾವ ಇಲ್ಲದೆ ಎಲ್ಲ ಸಂಘ-ಸಂಸ್ಥೆಗಳು ಒಗ್ಗಟ್ಟಿನಿಂದ ಕೆಲಸ ಮಾಡಿ ಎಲ್ಲ ತುಳು-ಕನ್ನಡಿಗರಿಗೆ ವೇದಿಕೆ ನಿರ್ಮಿಸುವ ಮೂಲಕ ನಾಡು-ನುಡಿಯ ಅಭಿವೃದ್ಧಿಗೆ ಕಂಕಣ ಬದ್ಧವಾಗಬೇಕು ಎಂದು ಸಮಾಜ ಸೇವಕ ಡಾ| ವಿರಾರ್‌ ಶಂಕರ್‌ ಶೆಟ್ಟಿ  ಹೇಳಿದರು.

Advertisement

ಜ. 27ರಂದು ವಸಾಯಿ ಪಶ್ಚಿಮದ ಸಾಯಿನಗರ ರಂಗಮಂಟಪದಲ್ಲಿ ನಡೆದ ವಸಾಯಿ ಕರ್ನಾಟಕ ಸಂಘದ 33ನೇ ವಾರ್ಷಿ ಕೋತ್ಸವ ಸಂಭ್ರಮದಲ್ಲಿ ಉಪಸ್ಥಿತರಿದ್ದು ಮಾತನಾಡಿದ ಅವರು, ಸಂಘ-ಸಂಸ್ಥೆಗಳು ಬೇರೆ ಬೇರೆ ಯಾಗಿದ್ದರೂ ಸಮಾಜಪರ  ಚಿಂತನೆಯೊಂದಿಗೆ  ಕನ್ನಡಿಗರ ಉದ್ಧಾರದ ಬಗ್ಗೆ ಯೋಚಿಸುವಂತಾಗಬೇಕು. ವೈಶಿಷ್ಟéಪೂರ್ಣ ಕಾರ್ಯವೈಖರಿಯಿಂದ ಇಂದು ವಸಾಯಿ ಪರಿಸರದಲ್ಲಿ ಉನ್ನತ ಮಟ್ಟದ ಕನ್ನಡ ಸಂಸ್ಥೆಯಾಗಿ ಬೆಳೆದ ವಸಾಯಿ ಕರ್ನಾಟಕ ಸಂಘವು ಎಲ್ಲರ ಪ್ರೀತಿ, ಗೌರವಕ್ಕೆ ಪಾತ್ರವಾಗಿದೆ. ಸಂಘದ ಸಂಸ್ಥಾಪಕರಾದ ಉದ್ಯಮಿ ಗೋಪಾಲ ಶೆಟ್ಟಿ ಅವರ ಧ್ಯೇಯೋದ್ದೇಶ ಸಂಘದ ಮುಖಾಂತರ ಈಡೇರುತ್ತಿರುವುದು ಅಭಿನಂದನೀಯ. ಹಲವಾರು ಹಿರಿಯರ ಮಾರ್ಗದರ್ಶನದಲ್ಲಿ ಬೆಳೆದ  ಈ ಸಂಸ್ಥೆಗೆ ವಿಶ್ವನಾಥ ಶೆಟ್ಟಿ ಹಾಗೂ ದಿ| ಕರ್ನಿರೆ ಶ್ರೀಧರ ಶೆಟ್ಟಿ ಅವರ ಯೋಗದಾನ ಮಹ ತ್ತರವಾಗಿದೆ. ಸಂಘವು  ನಾಡಿನ  ಕಲೆ, ಸಂಸ್ಕೃತಿ, ಸಂಸ್ಕಾರ, ಪರಂಪರೆ, ಆಚಾರ-ವಿಚಾರಗಳನ್ನು ಉಳಿಸಿ-ಬೆಳೆಸಲು ಅರ್ಥಪೂರ್ಣ ಕಾರ್ಯಕ್ರಮ ಗಳನ್ನು ಇನ್ನಷ್ಟು ಆಯೋಜಿಸುವುದರ ಮೂಲಕ ಯುವಪೀಳಿಗೆಯನ್ನು ಸಂಘದ ಕಡೆಗೆ ಆಕರ್ಷಿಸುವಂತಾಗಬೇಕು  ಎಂದು ನುಡಿದರು.

ಗೌರವ ಅತಿಥಿಯಾಗಿ ಆಗಮಿಸಿದ ವಿರಾರ್‌-ನಲಸೋಪರ ಕರ್ನಾಟಕ ಸಂಸ್ಥೆಯ ಅಧ್ಯಕ್ಷ ಸದಾಶಿವ ಕರ್ಕೇರ ಅವರು ಮಾತನಾಡಿ, ಕರ್ನಾಟಕ ಸಂಸ್ಕೃತಿಯನ್ನು ಕರ್ಮಭೂಮಿಯಲ್ಲಿ ಜೀವಂತವಾಗಿಸುವ ಕಾರ್ಯ ಇಂದು ತುಳು-ಕನ್ನಡಿಗ ಸಂಸ್ಥೆಗಳಿಂದ ನಡೆಯುತ್ತಿದೆ. ಜಾತಿ, ಮತ ಭೇದಭಾವ ಇಲ್ಲದೆ ಕನ್ನಡಾಂಬೆಯ ಸೇವೆಯನ್ನು ಮಾಡುತ್ತಿರುವ  ಈ ಸಂಸ್ಥೆಯು ಸಮಾಜಪರ ಚಟುವಟಿಕೆಗಳಲ್ಲಿ ಭಿನ್ನತೆಯನ್ನು ಕಾಯ್ದುಕೊಳ್ಳಬೇಕೇ ಹೊರತು ಭಿನ್ನಮತವನ್ನಾಗಿ ಪರಿವರ್ತಿಸಿಕೊಳ್ಳಬಾರದು. ಹಿರಿಯರ ಶತಮಾನದ ತ್ಯಾಗದ ಮನೋಭಾವನೆಯನ್ನು ಅರ್ಥೈಸಿಕೊಂಡು, ಆತ್ಮಸಾಕ್ಷಿಗೆ ಧಕ್ಕೆ ಬಾರದಂತೆ ಸಾಮಾಜಿಕವಾಗಿ ಬಾಳಿ, ವಸಾಯಿ ಪರಿಸರದ ಕನ್ನಡಿಗರ ಆಶೋತ್ತರಗಳಿಗೆ ಸ್ಪಂದಿಸಬೇಕು. ಆಗ ಮಾತ್ರ ಸಂಸ್ಥೆಯು ಅಭಿವೃದ್ಧಿಯತ್ತ ಸಾಗಲು ಸಾಧ್ಯ ಎಂದು ನುಡಿದರು.

ಕಟೀಲು ಶ್ರೀ ಯಕ್ಷಕಲಾ ವೇದಿಕೆ ಚಾರಿಟೆಬಲ್‌ ಟ್ರಸ್ಟ್‌ನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಜರಿಮರಿ ಶ್ರೀ ಉಮಾಮಹೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಎಸ್‌. ಎನ್‌. ಉಡುಪ ಅವರು, ತುಳುನಾಡಿನವರ ಏಳ್ಗೆಗಾಗಿ ಶ್ರಮಿಸಿ, ಸಂಘದ ಅಧ್ಯಕ್ಷರಾಗಿ, ಕಲಾ ಪೋಷಕರಾಗಿ ಸೇವೆ ಸಲ್ಲಿಸುತ್ತಿದ್ದ ದಿ| ಕರ್ನಿರೆ ಶ್ರೀಧರ ಶೆಟ್ಟಿ ಅವರ ನೆನಪಿನಲ್ಲಿ ಸ್ಥಾಪನೆಗೊಂಡ  ಈ ಯಕ್ಷಗಾನ ಕಲಾವೇದಿಕೆಯನ್ನು ಸಂಘವು ಸದಾ ಕಾಲ ಉಳಿಸಿ ಬೆಳೆಸಬೇಕು. ಸರ್ವಾಂಗ ಸುಂದರ ಕಲೆಯಾದ ಯಕ್ಷಗಾನಕ್ಕೆ ಈ ಸಂಸ್ಥೆಯಿಂದ ಇನ್ನಷ್ಟು ಪ್ರೋತ್ಸಾಹ ದೊರೆಯುವಂತಾಗಲಿ. ಮುಖ್ಯವಾಗಿ ಮಕ್ಕಳನ್ನು ಯಕ್ಷಗಾನದೆಡೆಗೆ ಆಕರ್ಷಿಸುವಂತಹ ಕಾರ್ಯ ಸಂಸ್ಥೆಯಿಂದ ಇನ್ನಷ್ಟು ನಡೆಯಲಿ. ಯಕ್ಷಗಾನವು ಎಳೆಯ ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಬೆಳೆಸುವುದರೊಂದಿಗೆ ಸನಾತನ ಧರ್ಮವನ್ನು ಉದ್ಧೀಪನಗೊಳಿಸುವ ಕಾರ್ಯ ಮಾಡುತ್ತದೆ. ಈ ನಿಟ್ಟಿನಲ್ಲಿ ಸಂಘವು ಕಲೆ, ಕಲಾವಿದರಿಗೆ ಸಹಕರಿಸುವಂತಾಗಲಿ  ಎಂದು ಹಾರೈಸಿದರು.

ಸಂಘದ ಮಹಿಳಾ ಸದಸ್ಯೆಯರು ಪ್ರಾರ್ಥನೆಗೈದರು. ಗಣ್ಯರು ದೀಪಪ್ರಜ್ವಲಿಸಿ ಸಮಾರಂಭಕ್ಕೆ ಚಾಲನೆ ನೀಡಿದರು. ಸಂಘದ ಗೌರವಾಧ್ಯಕ್ಷ ವಿಶ್ವನಾಥ ಪಿ. ಶೆಟ್ಟಿ ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿದರು. ಅಧ್ಯಕ್ಷ ಒ. ಪಿ. ಪೂಜಾರಿ, ಇತರ ಪದಾಧಿಕಾರಿಗಳಾದ ಪಾಂಡು ಎಲ್‌. ಶೆಟ್ಟಿ, ವಿಶ್ವನಾಥ ಪಿ. ಶೆಟ್ಟಿ, ದೇವೇಂದ್ರ ಬಿ. ಬುನ್ನನ್‌, ಭಾಸ್ಕರ ಶೆಟ್ಟಿ ಅವರು ಅತಿಥಿಗಳನ್ನು ಗೌರವಿಸಿದರು. ಈ ಸಂದರ್ಭದಲ್ಲಿ ಯಕ್ಷಕಲಾ ಪೋಷಕ, ದಿ| ಕರ್ನಿರೆ ಶ್ರೀಧರ ಶೆಟ್ಟಿ ಸಂಸ್ಮರಣಾರ್ಥಕವಾಗಿ ಕಟೀಲು ಶ್ರೀ ಯಕ್ಷಕಲಾ ವೇದಿಕೆಯನ್ನು ಜರಿಮರಿ ಶ್ರೀ ಉಮಾಮಹೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಎಸ್‌. ಎನ್‌. ಉಡುಪ ಅವರು ಉದ್ಘಾಟಿಸಿದರು.
ವೇದಿಕೆಯಲ್ಲಿ ಉಪಾಧ್ಯಕ್ಷರಾದ ಪಾಂಡು ಎಲ್‌. ಶೆಟ್ಟಿ, ಕೋಶಾಧಿಕಾರಿ ಭೋಜ ಟಿ. ಅಂಚನ್‌, ಜತೆ ಕೋಶಾಧಿಕಾರಿ ವಿಜಯ ಎಂ. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಮೋಹಿನಿ ಎಸ್‌. ಮಲ್ಪೆ, ಕಾರ್ಯದರ್ಶಿ ಜಯ ಅಶೋಕ್‌ ಶೆಟ್ಟಿ, ಸಲಹಾ ಸಮಿತಿಯ ಕಾರ್ಯಾಧ್ಯಕ್ಷ ಭಾಸ್ಕರ ಕೆ. ಶೆಟ್ಟಿ, ಕಾರ್ಯಕ್ರಮ ಸಮಿತಿಯ ಕಾರ್ಯಾಧ್ಯಕ್ಷ ದೇವೇಂದ್ರ ಬುನ್ನನ್‌, ಸದಸ್ಯತನ ನೋಂದಣಿ ಸಮಿತಿಯ ಕಾರ್ಯಾಧ್ಯಕ್ಷ ರಾಮಚಂದ್ರ ಡಿ. ಹೆಗ್ಡೆ ಉಪಸ್ಥಿತರಿದ್ದರು.

Advertisement

ದಾನಿಗಳಾಗಿ ಸಹಕರಿಸಿದ ಮಹನೀಯರನ್ನು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳನ್ನು ಗೌರವಿಸಲಾಯಿತು. ಪ್ರಾರಂಭದಲ್ಲಿ ಸ್ಥಳೀಯ ವಿವಿಧ ಸಂಘಟನೆಗಳ ಸದಸ್ಯರಿಂದ, ವಸಾಯಿ ಕರ್ನಾಟಕ ಸಂಘದ ಸದಸ್ಯರಿಂದ, ಮಕ್ಕಳಿಂದ ವಿವಿಧ ಮನೋರಂಜನ ಕಾರ್ಯಕ್ರಮಗಳು ನಡೆದವು.
ಕಾರ್ಯಕಾರಿ ಹಾಗೂ ಉಪಸಮಿತಿಯ ಸರ್ವ ಸದಸ್ಯರು, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಪರಮಾನಂದ ಸಾಲ್ಯಾನ್‌ ರಚಿಸಿ, ಕರುಣಾಕರ ಶೆಟ್ಟಿ ಕಾಪು ನಿರ್ದೇಶನದಲ್ಲಿ ಬಿಲ್ಲವರ ಅಸೋಸಿಯೇಶನ್‌ ವಸಾಯಿ ಸ್ಥಳೀಯ ಸಮಿತಿಯ ಕಲಾವಿದರಿಂದ ಒಂಜಿ ಸಿರಿ ರಡ್‌ಬೊಂಡ ಸತ್ಯಕಥೆಯಾಧಾರಿತ ತುಳು ಜಾನಪದ ನಾಟಕ ಪ್ರದರ್ಶನಗೊಂಡಿತು. ಜತೆ ಕಾರ್ಯದರ್ಶಿ ವಿಜಯ ಪಿ. ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಮಹಿಳಾ ವಿಭಾಗ, ಯುವ ವಿಭಾಗದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.  

ನನ್ನ ಅಧ್ಯಕ್ಷತೆಯ ಅವಧಿಯಲ್ಲಿ  ಜರಗಿದ ವಿವಿಧ ಕಾರ್ಯಕ್ರಮಗಳ ಬಗ್ಗೆ ಸಂತುಷ್ಟಗೊಂಡಿದ್ದೇನೆ. ಈ ಸಂದರ್ಭದಲ್ಲಿ ಸಹಕರಿಸಿದ ಎಲ್ಲ ಪದಾಧಿಕಾರಿಗಳಿಗೆ ಅಭಿನಂದನೆಗಳು. ಪ್ರಸಕ್ತ ವಾರ್ಷಿಕ ಕಾರ್ಯಕ್ರಮಗಳು ಅತ್ಯಂತ ಅದ್ದೂರಿಯಾಗಿ ಜರಗಿದ್ದು, ಸ್ಥಳೀಯ ತುಳು-ಕನ್ನಡಿಗರು ವಿಶೇಷ ರೀತಿಯಲ್ಲಿ  ಪ್ರೋತ್ಸಾಹ ನೀಡಿ ಸಹಕರಿಸಿದ್ದಾರೆ. ಸಂಘದ ಅಧೀನದಲ್ಲಿರುವ ಕರ್ನಾಟಕ ಕೋ- ಆಪರೇಟಿವ್‌ ಕ್ರೆಡಿಟ್‌ ಸೊಸೈಟಿಯು ಬಲಿಷ್ಟ ಹಣಕಾಸು ಸಂಸ್ಥೆಯಾಗಿ ಬೆಳೆಯುತ್ತಿದ್ದು, ಇದರಲ್ಲೂ ಕನ್ನಡಿಗರ ಪಾತ್ರ ಮಹತ್ತರವಾಗಿದೆ. ಸೊಸೈಟಿಯ ವಿವಿಧ ಸಮಾಜಪರ ಯೋಜನೆಗಳ ಸದುಪಯೋಗವನ್ನು ತುಳು-ಕನ್ನಡಿಗರು ಪಡೆದುಕೊಳ್ಳಬೇಕು. ವಸಾಯಿ ಪರಿಸರದಲ್ಲಿ  ಈ ಸಂಸ್ಥೆಯು ತನ್ನದೇ ಆದ ಕಾರ್ಯಚಟುವಟಿಕೆಗಳಿಂದ ಜನಮನ್ನಣೆಯನ್ನು ಪಡೆದಿದೆ. ಮುಂದೆಯೂ ವಿಭಿನ್ನ 
ಕಾರ್ಯಕ್ರಮಗಳಿಂದ ಈ ಸಂಸ್ಥೆ ಉನ್ನತ ಮಟ್ಟದ ಸಂಸ್ಥೆಯಾಗಿ ಬೆಳೆಯುವಲ್ಲಿ ಎಲ್ಲರ ಸಹಕಾರ, ಪ್ರೋತ್ಸಾಹ ಸದಾಯಿರಲಿ. ನಾವೆಲ್ಲರೂ ಸಂಸ್ಥೆಯನ್ನು ಒಗ್ಗಟ್ಟು  ಮತ್ತು ಒಮ್ಮತದಿಂದ ಇನ್ನಷ್ಟು ಅಭಿವೃದ್ಧಿಯತ್ತ ಸಾಗಿಸೋಣ.
ಒ. ಪಿ. ಪೂಜಾರಿ, ಅಧ್ಯಕ್ಷರು, ವಸಾಯಿ ಕರ್ನಾಟಕ ಸಂಘ

ಚಿತ್ರ-ವರದಿ : ರಮೇಶ್‌ ಉದ್ಯಾವರ

Advertisement

Udayavani is now on Telegram. Click here to join our channel and stay updated with the latest news.

Next