Advertisement

33 ಕೋಟಿ ವೆಚ್ಚದಲ್ಲಿ ಕಾಮಗಾರಿ

06:06 AM Jun 19, 2020 | Lakshmi GovindaRaj |

ಮಾಗಡಿ: ಅಂದಾಜು 33 ಕೋಟಿ ರೂ. ವೆಚ್ಚದಲ್ಲಿ ಸುಮಾರು 28 ಕಿ.ಮೀ. ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಶಾಸಕ ಎ.ಮಂಜುನಾಥ್‌ ಭೂಮಿ ಪೂಜೆ ನೆರವೇರಿಸಿ ದರು. ತಾಲೂಕಿನ ಆಗಲಕೋಟೆ ಹ್ಯಾಂಡ್‌ಪೋಸ್ಟ್‌ನಲ್ಲಿ ರಸ್ತೆ ಕಾಮಗಾರಿಗೆ  ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ರಾಮನಗರದಿಂದ ಜಾಲಮಂಗಲದ ಕೊಟ್ಟಗಾರಹಳ್ಳಿವರೆಗೆ ಮೊದಲ ಪ್ಯಾಕೇಜ್‌ ಮುಗಿದಿದೆ.

Advertisement

ಕೊಟ್ಟಗಾರಹಳ್ಳಿ, ಆಗಲಕೋಟೆ ಮಾರ್ಗವಾಗಿ ಕಾಳಾರಿ ರಸ್ತೆಯಿಂದ ಕುದೂರಿನ  ಸುಗ್ಗನಹಳ್ಳಿವರೆಗೂ ರಸ್ತೆ ಅಗಲೀಕರಣಗೊಳಿಸಿ ದ್ವಿಪಥ ರಸ್ತೆಯ ಡಾಂಬರೀಕರಣ ಗೊಳಿಸಲು ಅಗತ್ಯ ಕ್ರಮಕೈಗೊಳ್ಳಲಾಗಿದೆ. ರಸ್ತೆ ಬದಿಯ ಗ್ರಾಮೀಣ ಜನರು ರಸ್ತೆ ಅಗಲೀಕರಣ, ಡಾಂಬರೀಕರಣ ಹಾಗೂ ಚರಂಡಿ ನಿರ್ಮಾಣಕ್ಕೆ ಸಹಕಾರ  ನೀಡಬೇಕು. ರೈತರು ಸಂಚರಿಸುವ ಜಾಗದ ಚರಂಡಿ ಮೇಲೆ ಕಾಂಕ್ರೀಟ್‌ ಸ್ಲಾಬ್‌ ಹಾಕಲಾಗುವುದು.

ಕಾವೇರಿ ಕನಸ್ಟ್ರಕ್ಷನ್ಸ್‌ಗೆ ಗುತ್ತಿಗೆ ನೀಡಲಾಗಿದೆ. ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಕೈಗೊಳ್ಳಲಿದ್ದಾರೆ. ಮೂರು ತಿಂಗಳಲ್ಲಿ ಕಾಮಗಾರಿ  ಪೂರ್ಣಗೊಳಿಸಲಿದ್ದಾರೆ. ರಂಗನೇಹಳ್ಳಿ ರಸ್ತೆ, ಕೊಂಡಹಳ್ಳಿಯಿಂದ ತೂಬಿನಕೆರೆವರೆಗೆ ಹಾಗೂ ಕಾಳಾರಿ ರಸ್ತೆಯಿಂದ ಜಾನಿಗೆರೆ ರಸ್ತೆಗೆ ಇನ್ನೊಂದು ವಾರದಲ್ಲಿ ಕಾಮಗಾರಿಗೆ ಚಾಲನೆ ನೀಡುವುದಾಗಿ ಭರವಸೆ ನೀಡಿದರು.

ಜೆಡಿಎಸ್‌ ರಾಜ್ಯ  ಉಪಾಧ್ಯಕ್ಷ ಕೆ.ಕೃಷ್ಣಮೂರ್ತಿ, ಸಾತನೂರು ಗ್ರಾಪಂ ಅಧ್ಯಕ್ಷ ಡಿ.ಸಿ,.ಮೂರ್ತಿ, ಜುಟ್ಟನಹಳ್ಳಿ ಜಯ ರಾಮು, ಎಪಿಎಂಸಿ ನಿರ್ದೇಶಕ ಕೆ.ಟಿ.ಮಂಜುನಾಥ್‌, ಮಾರೇಗೌಡ, ರಂಗಸ್ವಾಮಿ, ತಮ್ಮಣ್ಣಗೌಡ, ಶಿವಲಿಂಗ ಯ್ಯ, ಕೆಡಿಪಿ ಸದಸ್ಯ ಅಶೋಕ್‌,  ಡಿ.ಜಿ.ಕುಮಾರ್‌, ರಾಮಣ್ಣ, ಶಿವರಾಮಯ್ಯ, ದೇವರಾಜು, ಗಂಗರಾಜು,ಎ.ಸಿ. ಗಂಗಣ್ಣ, ಗಿರಿಗೌಡ, ಸಂಜೀವ ಮೂರ್ತಿ,ಯೋಗಣ್ಣ, ರವಿಕುಮಾರ್‌, ವೆಂಕಟೇಶ್‌ ಎಇಇ ರಾಮಣ್ಣ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next