ಉಡುಪಿ: ಶ್ರೀಕೃಷ್ಣ ಮಠದಲ್ಲಿ ಎರಡು ವರ್ಷಗಳಿಗೊಮ್ಮೆ ನಡೆಯುವ ಎಂಟು ಮಠಗಳ ಪರ್ಯಾಯಗಳ 31ನೇ ಚಕ್ರದ ಕೊನೆಯ ಪರ್ಯಾಯ ನಡೆಯುತ್ತಿದ್ದು ಮುಂದಿನ ಜ. 18ರಂದು 32ನೇ ಚಕ್ರ ಶ್ರೀ ಪಲಿಮಾರು ಮಠದ ಪರ್ಯಾಯದೊಂದಿಗೆ ಆರಂಭವಾಗಲಿದೆ. ಇದಕ್ಕೆ ಶುಕ್ರವಾರ ಪಲಿಮಾರು ಮಠದ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಸ್ವಾಗತ ಸಮಿತಿಯನ್ನು ಘೋಷಿಸಲಾಯಿತು.
ಆಶೀರ್ವಚನ ನೀಡಿದ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು, ಪರ್ಯಾಯೋತ್ಸವಕ್ಕೆ ಎಲ್ಲರೂ ಸಹಕಾರ ನೀಡಬೇಕೆಂದರು.
ಸಚಿವ ಪ್ರಮೋದ್ ಮಧ್ವರಾಜ್ ಅವರು ಮಾತನಾಡಿ, ರಥಬೀದಿಯ ಸುತ್ತಮುತ್ತ ಒಳಚರಂಡಿ ವ್ಯವಸ್ಥೆಯನ್ನು ಸರಿಪಡಿಸಲಾಗಿದೆ. ಜಿಲ್ಲಾಡಳಿತ ಪೂರ್ಣ ಸಹಕಾರ ನೀಡಲಿದೆ ಎಂದರು.
ಧರ್ಮಸ್ಥಳ ಕ್ಷೇತ್ರದಿಂದ ಪೂರ್ಣ ಸಹಕಾರ ನೀಡುವುದಾಗಿ ಹಷೇìಂದ್ರ ಕುಮಾರ್ ಭರವಸೆ ನೀಡಿದರು. ಶಾಸಕ ವಿನಯಕುಮಾರ ಸೊರಕೆ, ಮೂಡಬಿದಿರೆ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ| ಮೋಹನ ಆಳ್ವ, ಕಟೀಲಿನ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ, ಮಾಜಿ ಶಾಸಕ ಕೆ. ರಘುಪತಿ ಭಟ್, ಮಂಗಳೂರು ಶಾರದಾ ವಿದ್ಯಾಲಯದ ಅಧ್ಯಕ್ಷ ಪ್ರೊ| ಎಂ.ಬಿ.ಪುರಾಣಿಕ್, ಉದ್ಯಮಿ ಗುರ್ಮೆ ಸುರೇಶ ಶೆಟ್ಟಿ, ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಉದ್ಯಮಿ ಚೆನ್ನೈಯ ರಾಮಪ್ರಸಾದ ಭಟ್, ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಬಾಲಾಜಿ ರಾಘವೇಂದ್ರ ಆಚಾರ್ಯ ಮೊದಲಾದವರು ಮಾತನಾಡಿ ಶುಭ ಕೋರಿದರು.
ಮಠದ ದಿವಾನ್ ವೇದವ್ಯಾಸ ತಂತ್ರಿ ಸ್ವಾಗತಿಸಿ ವ್ಯವಸ್ಥಾಪಕ ಬಲರಾಮ ಭಟ್ ವಂದಿಸಿದರು. ವಿ| ವಂಶಿ ಕೃಷ್ಣಾಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.
ಸ್ವಾಗತ ಸಮಿತಿ
ಗೌರವಾಧ್ಯಕ್ಷರು: ಡಾ| ಡಿ. ವೀರೇಂದ್ರ ಹೆಗ್ಗಡೆ, ಪ್ರಧಾನ ಮಾರ್ಗದರ್ಶಕರು: ಪ್ರಮೋದ್ ಮಧ್ವರಾಜ್, ಡಾ| ಮೋಹನ ಆಳ್ವ, ಶೋಭಾ ಕರಂದ್ಲಾಜೆ, ಜಿ. ಶಂಕರ್, ಸಂಚಾಲಕರು: ಹರಿ ಆಸ್ರಣ್ಣ, ಹೆರಂಜೆ ಕೃಷ್ಣ ಭಟ್, ರತ್ನಕುಮಾರ್, ಭುವನೇಂದ್ರ ಕಿದಿಯೂರು, ಮನೋಹರ ಶೆಟ್ಟಿ, ಚೆನ್ನೈ ರಾಮಪ್ರಸಾದ ಭಟ್, ಕಾರ್ಯಾಧ್ಯಕ್ಷರು: ರಾಘವೇಂದ್ರ ಆಚಾರ್ಯ, ಮುಖ್ಯ ಕಾರ್ಯದರ್ಶಿಗಳು: ಲಕ್ಷ್ಮೀನಾರಾಯಣ ರಾವ್ ಮಟ್ಟು, ಕೆ.ಎಸ್.ಪದ್ಮನಾಭ ಭಟ್, ಪ್ರಹ್ಲಾದ್ ಪಿ.ಆರ್., ಖಜಾಂಚಿ: ರಮೇಶ ರಾವ್ ಬೀಡು. ವಿಸ್ತೃತ ಮತ್ತು ಉಪಸಮಿತಿಗಳ ಪಟ್ಟಿಯನ್ನು ಮುಂದೆ ಬಿಡುಗಡೆಗೊಳಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.