Advertisement
ಎ ಪಟ್ಟಿ: ಶಿಕ್ಷಕರ ವರ್ಗಾವಣೆಗೆ ನಡೆದ ಕೌನ್ಸಿಲಿಂಗ್ ಪ್ರಕ್ರಿಯೆಯಲ್ಲಿ ಎ ಪಟ್ಟಿಯಲ್ಲಿದ್ದ ಸಹ ಶಿಕ್ಷಕರ ಪೈಕಿ 29 ಮಂದಿ ಕನ್ನಡ ಸಾಮಾನ್ಯ ಶಿಕ್ಷಕರು ಇದ್ದು, ಆ ಪೈಕಿ 28 ಮಂದಿ ಸ್ಥಳ ಆಯ್ಕೆಗೊಂಡು ವರ್ಗಾವಣೆಗೊಂಡಿ ದ್ದಾರೆ.
Related Articles
Advertisement
ಮುಖ್ಯ ಶಿಕ್ಷಕರು 32 ಮಂದಿ ಪೈಕಿ ಕೇವಲ 13 ಮಂದಿ ಮಾತ್ರ ವರ್ಗಾವಣೆಗೊಂಡರೆ ಅರ್ಜಿ ಸಲ್ಲಿಸಿದ್ದ 36 ಮಂದಿ ದೈಹಿಕ ಶಿಕ್ಷಕರ ಪೈಕಿ 02 ಮಾತ್ರ ವರ್ಗಾವಣೆಗೊಂಡಿದ್ದಾರೆ. ಈ ಬಾರಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆಗೆ ಕೌನ್ಸಿಲಿಂಗ್ ನಡೆಯಿತು. ಯಾವುದೇ ಗೊಂದಲಗಳಿಗೆ ಅವಕಾಶ ಇಲ್ಲದೇ ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆ ಮುಕ್ತಾಯಗೊಂಡಿದೆ.
ಕೇಂದ್ರ ಕಚೇರಿಯಲ್ಲಿ ಪ್ರೌಢ ಶಿಕ್ಷಕರ ವರ್ಗಾ: ಜಿಲ್ಲಾ ಕೇಂದ್ರದಲ್ಲಿ ಕೇವಲ ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆಗೆ ಮಾತ್ರ ಕೌನ್ಸಿಲಿಂಗ್ ನಡೆದ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಉಳಿದಂತೆ ಪ್ರೌಢ ಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ವಿಭಾಗೀಯ ಮಟ್ಟದಲ್ಲಿ ನಡೆಯಲಿದೆ.
ಪ್ರೌಢ ಶಾಲಾ ಶಿಕ್ಷಕರ ವರ್ಗಾವಣೆಯಲ್ಲಿ ಕಡ್ಡಾಯ ವರ್ಗಾವಣೆ ವಿರೋಧಿಸಿ ಈಗಾಗಲೇ ಶಿಕ್ಷಕರು ಪ್ರತಿ ಭಟನೆ ನಡೆಸಿದ್ದಾರೆ. ಆದರೂ ಜಿಲ್ಲೆಯ ಬಾಗೇಪಲ್ಲಿ ತಾಲೂಕಿಗೆ ಸುಮಾರು 30 ಕ್ಕೂ ಹೆಚ್ಚು ಪ್ರೌಢ ಶಾಲಾ ಶಿಕ್ಷಕರನ್ನು ಕಡಾಯ ವರ್ಗಾವಣೆ ಮೂಲಕ ವರ್ಗಾ ವಣೆ ಮಾಡಲಾಗಿದ್ದು, ಬಾಗೇಪಲ್ಲಿ ತಾಲೂಕಿನಲ್ಲಿ ಸ್ವಲ್ಪ ಮಟ್ಟಿಗೆ ಶಿಕ್ಷಕರ ಕೊರತೆ ನೀಗಲಿದೆ.