Advertisement

Fraud: ಇಂಗ್ಲೆಂಡ್‌ನಿಂದ ಪಾರ್ಸೆಲ್‌ ಬಂದಿದೆ ಎಂದು ಮಹಿಳೆಗೆ 32.73 ಲಕ್ಷ ವಂಚನೆ

01:30 PM Oct 15, 2023 | Team Udayavani |

ಬೆಂಗಳೂರು: ಇಂಗ್ಲೆಂಡ್‌ನಿಂದ ನಿಮ್ಮ ಹೆಸರಿನಲ್ಲಿ ಬಂದಿರುವ ಪಾರ್ಸೆಲ್‌ವೊಂದ ರಲ್ಲಿ 40 ಸಾವಿರ ಯು.ಕೆ.ಪೌಂಡ್ಸ್‌ ಇದೆ ಎಂದು ಕಸ್ಟಮ್ಸ್‌ ಅಧಿಕಾರಿಗಳ ಸೋಗಿನಲ್ಲಿ ಮಹಿಳೆಯೊಬ್ಬರಿಂದ ಸೈಬರ್‌ ಕಳ್ಳರು ಬರೋಬ್ಬರಿ 32.73 ಲಕ್ಷ ರೂ. ಲಪಟಾಯಿಸಿದ್ದಾರೆ.

Advertisement

ವಿಜಯನಗರದ ನಿವಾಸಿ ಗೀತಾ (34) ವಂಚನೆಗೊಳಗಾದವರು.

ಗೀತಾ ಅವರ ಮೊಬೈಲ್‌ಗೆ ಇತ್ತೀಚೆಗೆ ಸಂದೇಶವೊಂದು ಬಂದಿತ್ತು. ನಾವು ಕಸ್ಟಮ್ಸ್‌ ಅಧಿಕಾರಿಗಳಾಗಿದ್ದು, ನಿಮ್ಮ ವಿಳಾಸಕ್ಕೆ ಇಂಗ್ಲೆಂಡ್‌ನಿಂದ ಪಾರ್ಸೆಲ್‌ವೊಂದು ಬಂದಿದೆ. ಇದರಲ್ಲಿ 40 ಸಾವಿರ ಯು.ಕೆ. ಪೌಂಡ್‌ ಇದೆ. ಕಸ್ಟಮ್ಸ್‌ ಕ್ಲಿಯರೆನ್ಸ್‌ ಶುಲ್ಕ ಪಾವತಿಸಿ ಇದನ್ನು ಪಡೆದುಕೊಳ್ಳಿ ಎಂದು ನಂಬಿಸಿದ್ದರು. ಇವರನ್ನು ಗೀತಾ ಸಂಪರ್ಕಿಸಿದಾಗ ನಾವು ಹೇಳುವ ಬ್ಯಾಂಕ್‌ ಖಾತೆಗೆ ಕಸ್ಟಮ್ಸ್‌ ಶುಲ್ಕ ಪಾವತಿಸುವಂತೆ ಸೂಚಿಸಿ ಹಂತ-ಹಂತವಾಗಿ 32.73 ಲಕ್ಷ ರೂ. ಜಮೆ ಮಾಡಿಸಿಕೊಂಡಿದ್ದರು. ಗೀತಾ ಈ ಬಗ್ಗೆ ಪರಿಶೀಲಿಸಿದಾಗ ಇದು ಸೈಬರ್‌ ಕಳ್ಳರ ಕೈ ಚಳಕ ಎಂಬುದು ಗೊತ್ತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next