ಪಂಜಾಬ್: ಆಮ್ ಆದ್ಮಿ ಪಕ್ಷದ (ಎಎಪಿ) 32 ಶಾಸಕರು ತಮ್ಮ ಸಂಪರ್ಕದಲ್ಲಿದ್ದಾರೆ ಎಂದು ಪಂಜಾಬ್ ಕಾಂಗ್ರೆಸ್ ನಾಯಕ ಪರ್ತಾಪ್ ಸಿಂಗ್ ಬಾಜ್ವಾ ಮಂಗಳವಾರ ಹೇಳಿಕೊಂಡಿದ್ದಾರೆ.
ಈ ಕುರಿತು ಹೇಳಿಕೆ ನೀಡಿದ ಬಾಜ್ವಾ ತನ್ನ ಆಮ್ ಆದ್ಮಿ ಪಕ್ಷದ ನಾಯಕರು ನನ್ನ ಸಂಪರ್ಕದಲ್ಲಿದ್ದು ಜೊತೆಗೆ ಮಂದಿಯ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಪಕ್ಷಕ್ಕೆ ಮತ ಹಾಕದಂತೆ ಜನರಲ್ಲಿ ಮನವಿ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ.
ಪಂಜಾಬ್‌ನಲ್ಲಿ ಕಾಂಗ್ರೆಸ್ 18 ಸ್ಥಾನಗಳನ್ನು ಹೊಂದಿದೆ ಎಂದು ಪ್ರತಿಪಾದಿಸಿದ ಬಾಜ್ವಾ, 32 ಎಎಪಿ ಶಾಸಕರ ಬೆಂಬಲದೊಂದಿಗೆ ತಮ್ಮ ಪಕ್ಷವು ರಾಜ್ಯದಲ್ಲಿ ಆಡಳಿತಾರೂಢ ಸರ್ಕಾರವನ್ನು ಉರುಳಿಸಬಹುದು ಎಂದು ಹೇಳಿಕೆ ನೀಡಿದ್ದಾರೆ.
ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಬಾಜ್ವಾ ಅವರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ್ದಾರೆ. ಬಾಜ್ವಾ ಅವರನ್ನು “ಬಿಜೆಪಿ-ಸಂಯೋಜಿತ ನಾಯಕ” ಎಂದು ಉಲ್ಲೇಖಿಸಿದ ಮಾನ್, “ಹೈಕಮಾಂಡ್ ಜೊತೆ ಮಾತನಾಡಲು” ಅವರಿಗೆ ಸವಾಲು ಹಾಕಿದರು.
ಟ್ವೀಟ್ ನಲ್ಲಿ “ಬಾಜ್ವಾ , ನೀವು ಪಂಜಾಬ್‌ನ ಚುನಾಯಿತ ಸರ್ಕಾರವನ್ನು ಒಡೆಯುವ ಬಗ್ಗೆ ಮಾತನಾಡುತ್ತಿದ್ದೀರಿ. ಮುಖ್ಯಮಂತ್ರಿ ಆಗುವ ನಿಮ್ಮ ಆಸೆಯನ್ನು ಕಾಂಗ್ರೆಸ್ ಕೊಂದಿದೆ ಎಂದು ನನಗೆ ಗೊತ್ತು.. ನಾನು ಪಂಜಾಬ್‌ನ 3 ಕೋಟಿ ಜನರ ಪ್ರತಿನಿಧಿಯೇ ಹೊರತು ಕುರ್ಚಿಯ ತ್ರಿಶೂಲವಲ್ಲ.. ಧೈರ್ಯವಿದ್ದರೆ ಹೈಕಮಾಂಡ್ ಜೊತೆ ಮಾತನಾಡಿ ಎಂದು ಮಾನ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: Karwar; ಶೀಘ್ರದಲ್ಲೇ ಕಾರವಾರ ಬಳಿ ಹೆದ್ದಾರಿ ಟನಲ್ ಪುನರಾರಂಭ ಸಾಧ್ಯತೆ