Advertisement

31ನೇ ಅಖಿಲ ಭಾರತ ಕೊಂಕಣಿ ಪರಿಷದ್‌ ಅಧಿವೇಶನಕ್ಕೆ ಚಾಲನೆ

04:11 PM Jan 07, 2018 | Team Udayavani |

ಮುಂಬಯಿ: ಇತಿಹಾಸವುಳ್ಳ ಕೊಂಕಣಿ ಭಾಷೆಗೆ ಉಜ್ವಲ ಭವಿಷ್ಯವಿದೆ. ಆದ್ದರಿಂದ ಮಾತೃಭಾಷೆ ಕೊಂಕಣಿಯನ್ನು  ಜೀವಂತವಾಗಿರಿಸಿಕೊಳ್ಳಬೇಕು. ನಮ್ಮಲ್ಲಿನ ಪ್ರತಿಭೆಗಳನ್ನು ಭಾಷೆಯ ಮೂಲಕ ವಿನಿಯೋಗಿಸಿ ಜೀವನ ರೂಪಿಸಬೇಕು. ಈ ಭಾಷೆ ನಮ್ಮನ್ನು ಸಮಾಜದಲ್ಲಿ ಪ್ರಜ್ವಲಿಸುವಂತೆ ಮಾಡಿದೆ. ಕೊಂಕಣಿಯನ್ನು ಮಾತೃಭಾಷೆ ಕರುಣಿಸಿದ್ದಕ್ಕಾಗಿ ಭಗವಂತನಿಗೆ ಸ್ತುತಿಸಿ ಭಾಷೆಯನ್ನು ಉಳಿಸಿ ಬೆಳೆಸೋಣ. ಕೊಂಕಣಿ ಭಾಷೆ ಮನೆಭಾಷೆ ಆಗಿರದೆ ಮನದ ಭಾಷೆ ಜೊತೆಗೆ ಜೀವನ ಭಾಷೆಯನ್ನಾಗಿಸಿಕೊಳ್ಳಬೇಕು. ಆಗ ಮಾತ್ರ  ಭವಿಷ್ಯತ್ತಿನ ಪೀಳಿಗೆ ಈ ಭಾಷೆಯನ್ನೇ ಹೊಂದಿಕೊಂಡು ಬಾಳುವಂತಾಗುತ್ತದೆ ಎಂದು ರಾಯನ್‌ ಅಂತಾರಾಷ್ಟ್ರೀಯ ಶೈಕ್ಷಣಿಕ ಸಮೂಹದ ಆಡಳಿತ ನಿರ್ದೇಶಕಿ ಮೇಡಂ ಗ್ರೇಸ್‌ ಪಿಂಟೋ  ಹೇಳಿದರು.

Advertisement

ಜ. 6ರಂದು ಅಪರಾಹ್ನ ದಾದರ್‌ ಪಶ್ಚಿಮದ ಶಿವಾಜಿಪಾರ್ಕ್‌  ಮಹಾರಾಷ್ಟ್ರ ರಾಜ್ಯ ಭಾರತ್‌ ಸ್ಕೌಟ್‌-ಗೈಡ್ಸ್‌ ಸಭಾಗೃಹದಲ್ಲಿ ಕೊಂಕಣಿ ಭಾಷಾ ಮಂಡಳ್‌ ಮಹಾರಾಷ್ಟ್ರ ಆಯೋಜಿಸಿದ್ದ 31 ನೇ ಅಖೀಲ ಭಾರತ ಕೊಂಕಣಿ ಪರಿಷದ್‌ನ್ನು ಉದ್ಘಾಟಿಸಿ ಅವರು ಮಾತನಾಡಿದರು.  ನಾಡಿನ ಹೆಸರಾಂತ ಕೊಂಕಣಿ ಸಾಹಿತಿ ಪಯ್ಯನ್ನೂರು ರಮೇಶ್‌ ಪೈ ಅವರ ಅಧ್ಯಕ್ಷತೆಯಲ್ಲಿ ದ್ವಿದಿನಗಳಲ್ಲಿ ಆಯೋಜಿಸಿರುವ ಸಮ್ಮೇಳನದಲ್ಲಿ  ಗೌರವ ಅತಿಥಿಗಳಾಗಿ ಆಲೆxàಲ್‌ ಎಜುಕೇಶನ್‌ ಟ್ರಸ್ಟ್‌ ಮತ್ತು ಮೋಡೆಲ್‌ ಬ್ಯಾಂಕಿನ ಕಾರ್ಯಾಧ್ಯಕ್ಷ ಆಲ್ಬರ್ಟ್‌ ಡಬ್ಲೂ.ಡಿಸೋಜಾ, ಚಿತ್ರನಟಿ ವರ್ಷಾ ಉಸಾYಂವ್ಕರ್‌ ಉಪಸ್ಥಿತರಿದ್ದರು. ಆಲ್ಬರ್ಟ್‌ ಡಿ’ಸೋಜಾ ಅವರು ಸ್ಮರಣ ಸಂಚಿಕೆ “ಅಸ್ಮಿತಾಯ್‌’ ಅನಾವರಣಗೊಳಿಸಿದರು. ವರ್ಷ ಉಸ್ಗಾಂವ್‌ಕರ್‌  ಅವರು ಗೋಪಿನಾಥ್‌ ಕಾಮತ್‌, ಎ. ಪಿ. ಬಾನು ಪ್ರಕಾಶ್‌, ಕೃಷ್ಣ ಕಾರ್ವಾರ್‌, ಮಾಯಾ ಅನಿಲ್‌ ಕರಂಟೆ ಅವರ ಕೃತಿಗಳನ್ನು ಬಿಡುಗಡೆ ಗೊಳಿಸಿದರು.

ಚಿತ್ರನಟಿ ವರ್ಷಾ ಉಸಾವ್ಕರ್‌ ಅವರು ಮಾತನಾಡಿ, ತಾಯಿಯಷ್ಟೇ ನಾನು ಮಾತೃಭಾಷೆಯನ್ನು ಪ್ರೀತಿಸುತ್ತೇನೆ. ಕೊಂಕಣಿಯಲ್ಲಿ ಪ್ರೇಮವಿದ್ದು ಸಂಸ್ಕೃತಿಯೊಂದಿಗೆ ಏಕತೆ ಮೂಡಿಸಿದೆ. ಆದ್ದರಿಂದ ಮಾತೃಭಾಷೆ ನೈಸರ್ಗಿಕವಾಗಿ ಬಳಕೆಯಾಗಬೇಕು. ಪ್ರಾದೇಶಿಕ ಕೊಂಕಣಿಯಲ್ಲಿ ವಿಪುಲವಾದ ಸಾಹಿತ್ಯವಿದ್ದು ಇದರ ಸದ್ಬಳಕೆ ಆದಾಗ ಭಾಷೆ ತನ್ನಷ್ಟಕ್ಕೆ ಬೆಳೆಯುವುದು. ಭಾಷೆಯಿಂದಲೇ ನಮ್ಮ ಅಸ್ಮಿತೆ ಗುರುತಿಸಲ್ಪಡುವುದು ಎಂದ‌ು ಅಭಿಪ್ರಾಯಪಟ್ಟರು.

ಅಖೀಲ ಭಾರತ ಕೊಂಕಣಿ ಪರಿಷದ್‌ನ ಅಧ್ಯಕ್ಷ ಗೋಕುಲ್‌ದಾಸ್‌ ಪ್ರಭು ಪ್ರಸ್ತಾವನೆಗೈದು,  ಹಿರಿಯರ ಚಳುವಳಿ, ತ್ಯಾಗ, ಮಾರ್ಗದರ್ಶನದಿಂದ ಇಂತಹ ಅಧಿವೇಶನಗಳು ನಡೆಯುತ್ತಿವೆ. ಮುಂಬಯಿಗರು ಈ ಮೊದಲ ಎಲ್ಲಾ ಅಧಿವೇಶನಗಳನ್ನು ಯಶಸ್ವಿಗೊಳಿಸಿದ್ದಾರೆ. ಆದ್ದರಿಂದಲೇ ಭಾಷೆ, ಸಂಸ್ಕೃತಿ, ಸಾಹಿತ್ಯ ಎಲ್ಲೆಡೆ ಪಸರಿಸಲ್ಪಟ್ಟಿದೆ. ಭಾಷಾ ಉಳಿವಿನ ಪ್ರಯತ್ನ ಇಂತಹ ಅಧಿವೇಶನದಿಂದಾಗಿದೆ ಎಂದರು.

ಭಾಷಾ ಮಂಡಳ್‌ನ ಕಾರ್ಯಾಧ್ಯಕ್ಷ ಹೆನ್ರಿ ಲೊಬೋ, ಕೋಶಾಧಿಕಾರಿ ಸಹ ಕಾರ್ಯದರ್ಶಿ ಪಾಸ್ಕಲ್‌ ಲೋಬೊ, ಜೊತೆ ಕಾರ್ಯದರ್ಶಿ ಜೋನ್‌ ಆರ್‌.ಪಿರೇರಾ, ಜೊತೆ ಕೋಶಾಧಿಕಾರಿ ವಾಲೆ°àಸ್‌ ರೇಗೊ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಪಿ. ಎನ್‌. ಶ್ಯಾನ್‌ಭಾಗ್‌, ಬೆಟ್ಟಿ ನಾಜ್‌ ಫೆರ್ನಾಂಡಿಸ್‌, ಸ್ಟೇನ್ಲಿ ಡಾಯಸ್‌, ರುಜಾØರಿಯೋ ಕೆ. ಫೆರ್ನಾಂಡಿಸ್‌, ಸಿಪ್ರೀಯನ್‌ ಅಲುºಕರ್ಕ್‌,  ಅನಂತ್‌ ಅಮ್ಮೇಂಬಳ್‌, ಲಿಯೋ ಫೆರ್ನಾಂಡಿಸ್‌ ಜೆರಿಮೆರಿ, ವಿವಿಧ ಉಪ ಸಮಿತಿಗಳ ಮುಖ್ಯಸ್ಥರು, ವಿನ್ಸೆಂಟ್‌ ಮಥಾಯಸ್‌, ಆ್ಯಂಟನಿ ಸಿಕ್ವೇರಾ, ನ್ಯಾಯವಾದಿ  ಪಿಯೂಸ್‌ ವಾಸ್‌, ಕಮಲಾಕ್ಷ ಜಿ. ಸರಾಫ್‌, ಲಾರೆನ್ಸ್‌ ಕುವೆಲ್ಲೊ, ಬಸ್ತಿ ವಾಮನ ಶೆಣೈ.  ಜಿಯೋ ಅಗ್ರಾರ್‌, ವಿಲ್ಸನ್‌ ಕಟೀಲ್‌, ಬಿ. ದೇವದಾಸ್‌ ಪೈ ಮಂಗಳೂರು ಸೇರಿದಂತೆ ರಾಷ್ಟ್ರದಾದ್ಯಂತದ ನೂರಾರು  ಗಣ್ಯರು ಪ್ರತಿನಿಧಿಗಳಾಗಿ ಪಾಲ್ಗೊಂಡಿದ್ದರು.
ಭಾಷಾ ಮಂಡಳ್‌ನ ಗೌರವ ಪ್ರಧಾನ ಕಾರ್ಯದರ್ಶಿ ಲೋರೆನ್ಸ್‌ ಡಿ’ಸೋಜಾ ಕಮಾನಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜೆರಿ ಬೊಂದೆಲ್‌ ಹಾಗೂ ವಿ. ಡಿಸಿಲ್ವಾ ಬಳಗದವರು ಸ್ವಾಗತ ಗೀತೆ ಹಾಡಿದರು. ಭಾಷಾ ಮಂಡಳ್‌ನ ಅಧ್ಯಕ್ಷ ಜೋನ್‌ ಡಿಸಿಲ್ವಾ ಸ್ವಾಗತಿಸಿದರು.  ವಾಲ್ಟರ್‌ ಡಿಸೋಜಾ ಜೆರಿಮೆರಿ, ಜೋನ್‌ ಜಿ. ಮೆಂಡೋನ್ಸಾ, ಬೆನೆಡಿಕ್ಟಾ ರೆಬೆಲ್ಲೊ, ಗ್ಲೆನಾx ಅಲ್ಮೇಡಾ, ಫೆಲಿಕ್ಸ್‌ ಡಿಸೋಜಾ ಮಲ್ವಾಣಿ, ಜೋಸೆಫ್‌ ಡಿಸೋಜಾ ಜೆರಿಮೆರಿ, ಬೆಟ್ಟಿ ನಾಜ್‌Ø ಮತ್ತು ಜುಲಿಯಾನ ಮಸ್ಕರೆನ್ಹಾಸ್‌ ಅವರು  ಅತಿಥಿಗನ್ನು ಗೌರವಿಸಿದರು.  ಸಿರಿಲ್‌ ಕ್ಯಾಸ್ತೆಲಿನೋ, ವೆರೋನಿಕಾ ನೊರೋನ್ಹಾ ಮತ್ತು ಜೋನ್‌ ಮಸ್ಕರೇನ್ಹಾಸ್‌  ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಅಖೀಲ ಭಾರತೀಯ ಕೊಂಕಣಿ ಪರಿಷದ್‌ನ  ಗೌರವ  ಪ್ರಧಾನ ಕಾರ್ಯದರ್ಶಿ ಸುಫಲ ಗಾಯೊ¤ಂಡೆ ವಂದಿಸಿದರು.
ಡಾ| ಸಿ. ಎನ್‌. ಶೆಣೈ  ಅಧ್ಯಕ್ಷತೆಯಲ್ಲಿ “ಮುಂಬಯಿ ಮತ್ತು ಮುಂಬಯಿ ಕೊಂಕಣಿಗ‌ರ ಅನ್ಯೋನ್ಯ ಕೊಡುಗೆ’ ವಿಷಯದಲ್ಲಿ 1ನೇ ವಿಚಾರಗೋಷ್ಠಿ ಹಾಗೂ ವಲೇರಿಯನ್‌ ಕ್ವಾಡ್ರಸ್‌ ಅಧ್ಯಕ್ಷತೆ ಯಲ್ಲಿ ಪ್ರಥಮ ಕವಿಗೋಷ್ಠಿ ನಡೆಯಿತು. ಸಾಂಸ್ಕೃತಿಕ ವೈವಿಧ್ಯ ನಡೆಯಿತು.     

Advertisement

ಕೊಂಕಣಿ ಭಾಷೆ ಯಾವುದೇ ಪಂಗಡಕ್ಕೆ ಸೇರಿದ್ದಲ್ಲ. ಇದು ಜಾಗತಿಕ ಭಾಷೆಯಾಗಿದೆ. ಪರಸ್ಪರ ಸಹೋದರತ್ವವನ್ನು ರೂಪಿಸಿ ಬೆಳೆದ ಭಾಷೆ ಇದಾಗಿದೆ. ಇಲ್ಲೂ ಮತಭೇದ ಕಾಣುವಂತಿದ್ದರೆ ಅದು ಸ್ವಾಭಾವಿಕ. ವಿಚಾರ ಮಂಡನೆ ಪ್ರತಿಯೋರ್ವ ವ್ಯಕ್ತಿಯ ಹಕ್ಕು. ಇಂತಹ ಪರಿಷದ್‌ಗಳ ಮೂಲಕ ಒಂದಾದಾಗ ನಾವು  ಏಕತೆಯನ್ನು ಮೈಗೂಡಿಸಲು ಸಾಧ್ಯ. ಮಾತೃಭಾಷೆ ಉಳಿದರೆ ಎಲ್ಲದರ ಉಳಿವು. ಆದ್ದರಿಂದ ಭಾಷೆಯನ್ನು ಕೇವಲ ಮಾತೃಭಾಷೆಯನ್ನಾಗಿಸದೆ  ವಾಚನ, ಸಾಹಿತ್ಯ ಕಾರ್ಯಕ್ರಮಗಳೊಂದಿಗೆ ರಚನಾತ್ಮಕ ಭಾಷೆಯಾಗಿ ಉಳಿಸಿಕೊಳ್ಳಬೇಕು. ಆವಾಗಲೇ ಕೊಂಕಣಿ ವಿಶಾಲವಾಗಿ ಬೆಳೆಯುತ್ತದೆ 
– ಪಯ್ಯನ್ನೂರು ರಮೇಶ್‌ (ಕೊಂಕಣಿ ಸಾಹಿತಿ).

ಏಕತೆ ಕಾಣಲು ಇಂತಹ ಸಮ್ಮೇಳನಗಳು ಅವಶ್ಯವಾಗಿದೆ. ಸುಮಾರು ಎರಡು ದಶಕಗಳ ಬಳಿಕ ಮುಂಬಯಿಯಲ್ಲಿ ಈ ಸಮ್ಮೇಳನ ನಡೆಯುತ್ತಿರುವುದು ಮುಂಬಯಿಗರ ಭಾಗ್ಯವೇ ಸರಿ.  ನಾವು ನಮ್ಮ ಭಾಷೆ ರುಚಿ, ನೃತ್ಯಗಳನ್ನು ಜೀವಂತವಾಗಿರಿಸಿದರೆ ಬದುಕು ಸಮೃದ್ಧಿಗೊಳ್ಳುವುದು. ಕೊಂಕಣಿಗರು ಸಮಾಜ ಮತ್ತು ದೇಶ ಕಟ್ಟುವಲ್ಲಿ ಪರಿಣಿತರು. ಆದುದರಿಂದ ಯುವ ಜನಾಂಗವು ಕೊಂಕಣಿಯನ್ನು ಜೀವಾಳವಾಗಿರಿಸಿ ಬಲಿಷ್ಠ ಭಾಷೆಯನ್ನಾಗಿಸಬೇಕು 
–  ಆಲ್ಬರ್ಟ್‌ ಡಬ್ಲೂÂ.ಡಿಸೋಜಾ ( ಕಾರ್ಯಾಧ್ಯಕ್ಷರು : ಆಲೆxàಲ್‌ ಎಜ್ಯುಕೇಶನ್‌ ಟ್ರಸ್ಟ್‌ ಮತ್ತು ಮೋಡೆಲ್‌ ಬ್ಯಾಂಕ್‌).

ಚಿತ್ರ-ವರದಿ : ರೋನ್ಸ್‌  ಬಂಟ್ವಾಳ್‌

Advertisement

Udayavani is now on Telegram. Click here to join our channel and stay updated with the latest news.

Next