Advertisement

ಕೇರಳದಲ್ಲಿಂದು 31,445 ಕೋವಿಡ್ ಕೇಸ್|ಮೂರು ತಿಂಗಳ ಬಳಿಕ ಗರಿಷ್ಠ ಪ್ರಕರಣ

08:20 PM Aug 25, 2021 | Team Udayavani |

ತಿರುವನಂತಪುರ: ಮೂರು ತಿಂಗಳ ಬಳಿಕ ಕೇರಳದಲ್ಲಿ ಕೋವಿಡ್ ಪ್ರಕರಣ ಒಂದೇ ದಿನ 30 ಸಾವಿರದ ಗಡಿ ದಾಡಿದೆ. ಇಂದು (ಆ.25) ಸಂಜೆ ಬಿಡುಗಡೆಯಾಗಿರುವ ವರದಿಗಳ ಪ್ರಕಾರ 31,445 ಹೊಸ ಪ್ರಕರಣಗಳು ವರದಿಯಾಗಿದ್ದು, ಸೋಂಕಿನಿಂದ 215 ಜನರು ಮೃತಪಟ್ಟಿದ್ದಾರೆ.

Advertisement

ಈ ಹಿಂದೆ ಮೇ 20 ರಂದು ಕೇರಳದಲ್ಲಿ ದೈನಂದಿನ ಸೋಂಕಿತರ ಸಂಖ್ಯೆ 30 ಸಾವಿರ ದಾಟಿತ್ತು. ಇದೀಗ ಒಂದೇ ದಿನ 31,445 ಪ್ರಕರಣಗಳು ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ವರದಿಗಳ ಪ್ರಕಾರ ಪಾಸಿಟಿವಿಟಿ ದರ ಶೇ 19 ದಾಟಿದೆ.

ಓಣಂ ಹಬ್ಬದ ಬಳಿಕ ಪಾಸಿಟಿವಿಟಿ ದರ ಶೇ 20 ದಾಟಬಹುದು ಎಂದು ವೈದ್ಯಕೀಯ ತಜ್ಞರು ಅಭಿಪ್ರಾಯಪಟ್ಟಿದ್ದರು. ಬಕ್ರೀದ್‌ ಸಂದರ್ಭದಲ್ಲಿ ಕೆಲವು ದಿನಗಳ ಮಟ್ಟಿಗೆ ಕೋವಿಡ್ ನಿರ್ಬಂಧಗಳನ್ನು ಸಡಿಲಿಸಲಾಗಿತ್ತು. ಜುಲೈ ಕೊನೆಗೆ ಪ್ರತಿ ದಿನ ಕೋವಿಡ್ ಪ್ರಕರಣಗಳ ಸಂಖ್ಯೆ 20 ಸಾವಿರ ಗಡಿ ದಾಟಲು ಆರಂಭವಾಗಿತ್ತು.ಬುಧವಾರ ಸಂಜೆಗೆ ಕೊನೆಗೊಂಡ 24 ಗಂಟೆಗಳ ಅವಧಿಯಲ್ಲಿ 20,271 ಸೋಂಕಿತರು ಚೇತರಿಸಿಕೊಂಡಿದ್ದು, ಈವರೆಗೆ ಒಟ್ಟು 36,92,628 ಮಂದಿ ಗುಣಮುಖರಾದಂತಾಗಿದೆ.

ಸದ್ಯ ಕೇರಳದಲ್ಲಿ 1,70,292 ಸಕ್ರಿಯ ಪ್ರಕರಣಗಳಿವೆ. 24 ಗಂಟೆ ಅವಧಿಯಲ್ಲಿ 1,65,273 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಈವರೆಗೆ ಒಟ್ಟು 3,06,19,046 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಎರ್ನಾಕುಲಂನಲ್ಲಿ ಅತಿಹೆಚ್ಚು, ಅಂದರೆ 4,048 ಪ್ರಕರಣಗಳು ದೃಢಪಟ್ಟಿವೆ. ಉಳಿದಂತೆ, ತ್ರಿಶೂರ್‌ನಲ್ಲಿ 3,865, ಕೋಯಿಕ್ಕೋಡ್‌ನಲ್ಲಿ 3,680, ಮಲಪ್ಪುರಂನಲ್ಲಿ 3,502, ಪಾಲಕ್ಕಾಡ್‌ನಲ್ಲಿ 2,562, ಕೊಲ್ಲಂನಲ್ಲಿ 2,479, ಕೊಟ್ಟಾಯಂನಲ್ಲಿ 2,050, ಕಣ್ಣೂರಿನಲ್ಲಿ 1,930, ಆಲಪ್ಪುಳದಲ್ಲಿ 1,874, ತಿರುವನಂತಪುರದಲ್ಲಿ 1,700, ಇಡುಕ್ಕಿಯಲ್ಲಿ 1,166, ಪತ್ತನಂತಿಟ್ಟದಲ್ಲಿ 1,008, ವಯನಾಡ್‌ನಲ್ಲಿ 962 ಪ್ರಕರಣಗಳು ವರದಿಯಾಗಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next