Advertisement

ಚಾ.ನಗರ: ಪ್ರತಿ 100 ಕೋವಿಡ್‌ ಪರೀಕ್ಷೆಗೆ 30 ಪಾಸಿಟಿವ್‌

05:30 PM May 13, 2021 | Team Udayavani |

 ಕೆ.ಎಸ್‌. ಬನಶಂಕರ ಆರಾ

Advertisement

ಚಾಮರಾಜನಗರ: ಜಿಲ್ಲೆಯಲ್ಲಿ ಕೋವಿಡ್‌ -19 ಪಾಸಿಟಿವಿಟಿ ದರ ಕಳೆದ ಒಂದು ವಾರದ ಸರಾಸರಿಯಂತೆ ಶೇ. 31.1 ಇದೆ. ಸಾವುಗಳ ದರ ಶೇ.1.48 ಇದೆ. ಅಂದರೆ ಜಿಲ್ಲೆಯಲ್ಲಿ ಕೋವಿಡ್‌ ಪರೀಕ್ಷೆ ಮಾಡಿಸಿದ 100 ಮಾದರಿಗಳ ಪೈಕಿ 31 ಮಾದರಿಗಳ ವರದಿ ಪಾಸಿಟಿವ್‌ ಬರುತ್ತಿದೆ. ಹಾಗೆಯೇ ಇದು ವರೆಗೆ ಪಾಸಿಟಿವ್‌ ಆಗಿರುವ ರೋಗಿಗಳಲ್ಲಿ ಸತ್ತವರ ಮರಣ ದರ ಶೇ.1.48 ಅಂದರೆ, ಪ್ರತಿ 200 ರೋಗಿಗಳಿಗೆ ಮೂವರು ಮೃತಪಟ್ಟಿದ್ದಾರೆ.

ಜಿಲ್ಲೆಯಲ್ಲಿ 3 ದಿನಗಳ ಹಿಂದಿನ ವರೆಗೆ ಪ್ರತಿ ನಿತ್ಯದ ಪರೀಕ್ಷೆಯ ಪ್ರಮಾಣ 2,000 ದಿಂದ 2,500 ರವರೆಗೆ ಇತ್ತು. ಉದಾಹರಣೆಗೆ ಮೇ 9ರಂದು 2,553 ಮಾದರಿಗಳನ್ನು ಪರೀಕ್ಷಿಸಲಾಗಿತ್ತು. ಆಗ 910 ಮಾದರಿಗಳು ಪಾಸಿಟಿವ್‌ ಆಗಿದ್ದವು. ಮೇ 10ರಂದು 2,286 ಮಾದರಿಗಳನ್ನು ಪರೀಕ್ಷಿಸಲಾಗಿತ್ತು. ಅಂದು 669 ಪ್ರಕರಣ ದೃಢಪಟ್ಟಿತ್ತು. ಆದರೆ, ಕಳೆದ 2 ದಿನಗಳ ಪರೀಕ್ಷೆಯ ಪ್ರಮಾಣ ಕಡಿಮೆ ಮಾಡ ಲಾಗಿದೆ. ಮೇ 11ರಂದು 1,645 ಮಾದರಿ ಗಳನ್ನು ಪರೀಕ್ಷೆ ಮಾಡಲಾಗಿದೆ. ಇದರಲ್ಲಿ 367 ಪಾಸಿಟಿವ್‌ ಆಗಿವೆ. ಮೇ 12ರಂದು 1,160 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಹೀಗಾಗಿ ಪಾಸಿಟಿವ್‌ ಪ್ರಕರಣಗಳ ಸಂಖ್ಯೆಯೂ ಕಡಿಮೆಯಾಗಿದೆ. ಅಂದರೆ 534 ಪ್ರಕರಣ ದೃಢಪಟ್ಟಿದೆ. ಈ ಅಂಕಿ ಅಂಶ ಗಮನಿಸಿ ದಾಗ ಜಿಲ್ಲೆಯಲ್ಲಿ 2500ರ ವರೆಗೆ ನಡೆಯುತ್ತಿದ್ದ ಪರೀಕ್ಷಾ ಮಾದರಿಗಳನ್ನು 15,00ಕ್ಕೆ ಸೀಮಿತ ಗೊಳಿಸಲಾಗಿದೆ.

ಬುಧ ವಾರ ಕೇವಲ 1,160 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಪರೀಕ್ಷಾ ಪ್ರಮಾಣ ಕಡಿಮೆ ಯಾದರೆ ಸೋಂಕಿತರ ಪತ್ತೆ ಹಚ್ಚುವಿಕೆ ಕಡಿಮೆ ಯಾಗಿ, ಸೋಂಕು ಇನ್ನಷ್ಟು ಹರಡಲು ಕಾರಣ ವಾಗುತ್ತದೆ ಎಂದು ತಜ್ಞರೇ ಹೇಳಿದ್ದಾರೆ.

ಪ್ರಕರಣ ಹೆಚ್ಚಲು ಕಾರಣ: ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣ ಗಳು ಹೆಚ್ಚಲು ಈ ಬಾರಿ ಕೋವಿಡ್‌ ಕೇರ್‌ ಸೆಂಟರ್‌ಗಳನ್ನು ಬೇಗ ಆರಂ ಭಿಸದಿದ್ದುದೇ ಪ್ರಮುಖ ಕಾರಣ. ಮೊದಲ ಅಲೆ ಯಲ್ಲಿ ತೆರೆಯಲಾಗಿದ್ದ ಕೋವಿಡ್‌ ಕೇರ್‌ ಸೆಂಟರ್‌ಗಳನ್ನು ಆಗಲೇ ಮುಚ್ಚಲಾಗಿತ್ತು. ಎರಡನೇ ಅಲೆ ಆರಂಭವಾದಾಗ ಕೋವಿಡ್‌ ಕೇರ್‌ ಸೆಂಟರ್‌ಗಳನ್ನು ಜಿಲ್ಲಾಡಳಿತ ಆರಂಭ ಮಾಡಲಿಲ್ಲ. ಸೋಂಕಿತರನ್ನು ಹೋಂ ಐಸೋಲೇಷನ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ಕಳಹಿಸಲಾಯಿತು. ಗ್ರಾಮೀಣ ಪ್ರದೇಶ ಗಳಲ್ಲಿ ಜನರು ಹೋಂ ಐಸೋಲೇಷನ್‌ ನಿಯಮ ಗಳನ್ನು ಗಾಳಿಗೆ ತೂರಿದ್ದರಿಂದಾಗಿ ಪ್ರಕರಣಗಳು ತೀವ್ರಗತಿಯಲ್ಲಿ ಹೆಚ್ಚುತ್ತಾ ಹೋದವು.

Advertisement

ಕೈಗೊಂಡ ಕ್ರಮಗಳು: ಪ್ರಕರಣಗಳ ಸಂಖ್ಯೆ ಹೆಚ್ಚಾದ ಬಳಿಕ, ಇದೀಗ ಕೋವಿಡ್‌ ಕೇರ್‌ ಸೆಂಟರ್‌ ತೆರೆಯಲಾಗಿದೆ. ಚಾಮರಾಜನಗರದ ಮುಕ್ತ ವಿಶ್ವವಿದ್ಯಾಲಯ ಕಟ್ಟಡ, ಸರ್ಕಾರಿ ವೈದ್ಯಕೀಯ ಕಾಲೇಜು, ಮಾದಾಪುರದ ಮೊರಾರ್ಜಿ ವಸತಿ ಶಾಲೆಗಳಲ್ಲಿ ಕೋವಿಡ್‌ ಕೇರ್‌ ಕೇಂದ್ರ ಆರಂಭಿಸಲಾಗಿದೆ. ಕೊಳ್ಳೇಗಾಲ ತಾಲೂಕಿನ ತಿಮ್ಮರಾಜಿಪುರ ಕಿತ್ತೂರುರಾಣಿ ಚೆನ್ನಮ್ಮ ವಸತಿ ಶಾಲೆ, ಹನೂರಿನ ಆರ್‌ ಎಸ್‌ ದೊಡ್ಡಿ ಮೊರಾರ್ಜಿ ವಸತಿ ಶಾಲೆ, ಗುಂಡ್ಲುಪೇಟೆ ತಾಲೂಕಿನ ವೀರನಪುರ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳಲ್ಲಿಯೂ ಕೋವಿಡ್‌ ಕೇರ್‌ ಕೇಂದ್ರ ಪ್ರಾರಂಭಿಸಲಾಗಿದೆ. ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ ಆಕ್ಸಿಜನ್‌ ಕೊರತೆಯಾಗದಂತೆ ನೋಡಿಕೊಳ್ಳಲು ಐಎಫ್ ಎಸ್‌ ಅಧಿಕಾರಿ ಏಡುಕೊಂಡಲು ಅವ ರನ್ನು ನೋಡೆಲ್‌ ಅಧಿಕಾರಿಯಾರಿಯಾಗಿ ನೇಮಿಸಲಾಗಿದೆ. ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ ಒಟ್ಟು 205 ಹಾಸಿಗೆಗಳಿದ್ದು, 40 ಸಾಮಾನ್ಯ ಹಾಸಿಗೆಗಳು, 115 ಆಕ್ಸಿಜನೇಟೆಡ್‌ ಬೆಡ್‌, 50 ಐಸಿಯು ಗಳಿವೆ. 50 ಐಸಿಯು ಬೆಡ್‌ಗಳಲ್ಲಿ 32ಕ್ಕೆ ವೆಂಟಿಲೇಟರ್‌ಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next