Advertisement
ನಗರದ ಜಿಲ್ಲಾಪಂಚಾಯಿತಿ ಸಭಾಂಗಣದಲ್ಲಿ ಭಾರತ ಚುನಾವಣಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಅಂಗವಿಕಲರ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಸಾರ್ವತ್ರಿಕ ಲೋಕಸಭಾ ಚುನಾವಣೆ ಅಂಗವಾಗಿ ಅಂಗವಿಕಲರು ಮತ್ತು ವಿಶೇಷ ಮತದಾರರಿಗೆ ಶುಕ್ರವಾರ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಮತ್ತು ವಿದ್ಯುನ್ಮಾನ ಮತಯಂತ್ರ ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಸಾಮನ್ಯ ಜನರು ಚುನಾವಣೆಯಲ್ಲಿ ಯಾವುದೇ ತೊಂದರೆ ಇಲ್ಲದೆ ಭಾಗವಹಿಸಬೇಕು. ಜಿಲ್ಲಾದ್ಯಂತ 30 ಸಾವಿರ ವಿಶೇಷ ಮತದಾರರಿದ್ದು ಅದರಲ್ಲಿ 15 ಸಾವಿರ ಜನರನ್ನು ಗುರುತಿಸಿ ಮತದಾನಕ್ಕೆ ಒಳಪಡಿಸಿದ್ದೇವೆ. 18 ವರ್ಷ ಮೇಲ್ಪಟ್ಟ ಎಲ್ಲರೂ ಮತದಾನದಲ್ಲಿ ಭಾಗವಹಿಸಬೇಕು. ಬೇರೆಯವರ ಸಹಕಾರವಿಲ್ಲದೆ ಮತದಾನ ಮಾಡಬೇಕು. ಅದಕ್ಕಾಗಿ ಕೇಲವು ಸ್ಥಳಗಳನ್ನು ಗುರುತಿಸಲಾಗಿದೆ ಎಂದರು.
ಅಂಗವಿಲಕರು ಇದ್ದು ಅಂತವರಿಗೆ ಮಾಹಿತಿ ನೀಡಿದರೆ ಅವರಿಗೆ ಮತದಾನ ಮಾಡಲು ವಾಹನಗಳ ವ್ಯವಸ್ಥೆ ಮಾಡಲಾಗುವುದು. ಚುನಾವಣಾ ಆಯೋಗಕ್ಕೆ ವಾಹನಗಳ ವ್ಯವಸ್ಥೆ ಮಾಡಲು ಪತ್ರ ಬರೆಯಲಾಗಿದೆ. ಆಶಾ ಕಾರ್ಯಕರ್ತರನ್ನು ಬಳಸಿಕೊಳ್ಳಲು ಯೋಚನೆ ಮಾಡುತ್ತಿದ್ದೇವೆ. ಕಣ್ಣಿನ ತೊಂದರೆ ಇರುವವರಿಗೆ ಆದಷ್ಟು ಸಹಾಯ ಮಾಡಲಾಗುತ್ತದೆ. ಗ್ರಾಮೀಣ ಭಾಗದ ಎಲ್ಲ ಜನರು ಮತದಾನ ಮಾಡಬೇಕು. ಕಳೆದ ಬಾರಿಗಿಂತ ಹೆಚ್ಚು ಮತ ಪ್ರಮಾಣ ಹೆಚ್ಚಿಸಬೇಕು. ಮತದಾನ ಪ್ರತಿಯೊಬ್ಬರ ಹಕ್ಕು
ಅದನ್ನು ಚಲಾಯಿಸಬೇಕು. ಅಂಗವಿಕಲರಿಗೆ ಬೇಕಾಗುವ ವ್ಯವಸ್ಥೆ ಮಾಡಲು ಮಾಹಿತಿ ನೀಡಬೇಕು ಎಂದು ಮನವಿ ಮಾಡಿದರು.
Related Articles
ಮತದಾರರ ಪಟ್ಟಿಯಲ್ಲಿ ಆದಷ್ಟು ಬೇಗ ಸೇರಿಸಲು ಶ್ರಮ ವಹಿಸಬೇಕು. ಪ್ರಜಾಪ್ರಭುತ್ವದಲ್ಲಿ ಅಂಗವಿಕಲರಿಗೆ ಹೆಚ್ಚಿನ ವ್ಯವಸ್ಥೆ ಮಾಡಿ ಮುನ್ನಲೆಗೆ ತರುವ ಕೆಲಸ ಮಾಡಲಾಗುತ್ತಿದೆ. ಹಿರಿಯ ನಾಗರಿಕರು ಮತ ಪರಿಶೀಲಿಸಿಕೊಳ್ಳಬೇಕು. 1950 ಉಚಿತ ಸಹಾಯವಾಣಿ ಮೂಲಕ ಮಾಹಿತಿ ಪಡೆಯಬಹುದು ಎಂದರು. ಜಿಲ್ಲಾ ಅಂಗವಿಕಲರ ಇಲಾಖೆಯ ಮತ್ತು ಸ್ವೀಪ್ ಸಮಿತಿ ನೋಡಲ್ ಅಧಿ ಕಾರಿ ಜೆ. ವೈಶಾಲಿ, ತಾಪಂ ಇಒ ಕೃಷ್ಣನಾಯ್ಕ ಇದ್ದರು.
Advertisement