ಅಯೋಧ್ಯೆ: ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಅರ್ಚಕರ ಹುದ್ದೆಗಾಗಿ 3,000 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ.
ಹುದ್ದೆ ಖಾಲಿ ಇರುವುದಾಗಿ ಶ್ರೀ ರಾಮಮಂದಿರ ತೀರ್ಥಕ್ಷೇತ್ರ ಟ್ರಸ್ಟ್ ಜಾಹೀರಾತು ನೀಡಿದ ಹಿನ್ನೆಲೆಯಲ್ಲಿ ಅರ್ಜಿಗಳು ಸಲ್ಲಿಕೆಯಾಗಿವೆ. ಆ ಪೈಕಿ 200 ಅಭ್ಯರ್ಥಿಗಳನ್ನು ಮೆರಿಟ್ ಆಧಾರದಲ್ಲಿ ಸಂದರ್ಶನದ ಸುತ್ತಿಗೆ ಆಯ್ಕೆ ಮಾಡಿರುವುದಾಗಿ ಟ್ರಸ್ಟ್ ತಿಳಿಸಿದೆ.
ಆಯ್ಕೆಯಾಗಿರುವ ಅಭ್ಯರ್ಥಿಗಳನ್ನು ಕರಸೇವಕಪುರದಲ್ಲಿರುವ ವಿಶ್ವಹಿಂದೂ ಪರಿಷತ್‌ನ ಕೇಂದ್ರ ಕಚೇರಿಯಲ್ಲಿ ಬೃಂದಾವನದ ಧರ್ಮಬೋಧಕರಾದ ಜಯಕಾಂತ್ ಮಿಶ್ರಾ ಹಾಗೂ ಅಯೋಧ್ಯೆಯ ಮಹಂತರುಗಳಾದ ಮಿಥಿಲೇಶ್ ನಂದಿನಿ ಶರಣ್ ಮತ್ತು ಸತ್ಯನಾರಾಯಣ ದಾಸ್ ಅವರನ್ನೊಳಗೊಂಡ ತ್ರಿಸದಸ್ಯ ಸಮಿತಿಯು ಸಂದರ್ಶಿಸಲಿದೆ. ನಂತರ 20 ಮಂದಿಯನ್ನು ಅರ್ಚಕರಾಗಿ ಆಯ್ಕೆ ಮಾಡಲಿದೆ.