ನವದೆಹಲಿ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ 300 ಕೋಟಿ ರೂ. ಮೌಲ್ಯದ ಅಕ್ರಮ ಆರೋಪ ಸಂಬಂಧ ಅಪರಿಚಿತ ಅಧಿಕಾರಿಗಳ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿದೆ.
ದೇಶಾದ್ಯಂತ ಹಾಗೂ ವಿದೇಶದಲ್ಲೂ ಮೈಸೂರು ಮೂಲದ ಕೆಎಸ್‌ಒಯು ನಿಯಮ ಉಲ್ಲಂ ಸಿ ಸಹಯೋಗ ಸಂಸ್ಥೆಗಳನ್ನು ತೆರೆದಿತ್ತು ಎಂದು ಎಫ್ಐಆರ್‌ನಲ್ಲಿ ಉಲ್ಲೇಖೀಸಲಾಗಿದೆ.
“ಈ ಸಹಯೋಗ ಸಂಸ್ಥೆಗಳು ಪ್ರವೇಶ ಶುಲ್ಕ, ಪರೀಕ್ಷಾ ಶುಲ್ಕ ಸೇರಿ ವಿದ್ಯಾರ್ಥಿಗಳಿಂದ ಸಂಗ್ರಹಿಸಿದ್ದ ಶುಲ್ಕವನ್ನು ಈ ಸಹಯೋಗ ಸಂಸ್ಥೆಗಳು ಕೆಎಸ್‌ಒಯು ಗೆ ಭರಿಸುತ್ತಿದ್ದವು. ಆದರೆ ಆಡಿಟ್‌ನಲ್ಲಿ, 2013-14 ಮತ್ತು 2014-15 ಹಣಕಾಸು ವರ್ಷದಲ್ಲಿ ಈ ಸಹಯೋಗ ಸಂಸ್ಥೆಗಳು ಭರಿಸಿರುವ 50 ಕೋಟಿ ರೂ. ನಾಪತ್ತೆಯಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ಅದೇ ರೀತಿ ಆಡಿಟ್‌ನಲ್ಲಿ, 2009-10ರಿಂದ 2012-2013 ಹಣಕಾಸು ವರ್ಷಗಳಲ್ಲಿ ವಿದ್ಯಾರ್ಥಿಗಳಿಂದ ಸಂಗ್ರಹಿಸಿದ್ದ ಶುಲ್ಕದಲ್ಲಿ 250 ಕೋಟಿ ರೂ. ಕಾಣೆಯಾಗಿದೆ. ಇದಕ್ಕೆ ಸೂಕ್ತ ದಾಖಲೆಗಳಿಲ್ಲ. ಒಟ್ಟು 300 ಕೋಟಿ ರೂ.ಗಳ ಅಕ್ರಮ ನಡೆದಿದ್ದು, ಈ ಕುರಿತು ಪ್ರಕರಣ ದಾಖಲಿಸಲಾಗಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಕ್ರಮ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಇತ್ತೀಚಿಗೆ ಕೆಎಸ್‌ಒಯು ನಿರ್ದೇಶಕರ ಮಂಡಳಿಯು, ಸಿಬಿಐ ತನಿಖೆಗೆ ಒತ್ತಾಯಿಸಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪ್ರಕರಣವನ್ನು ಸಿಬಿಐಗೆ ವಹಿಸಿದೆ.