Advertisement

ಅಶ್ಲೀಲ ಸಿನಿಮಾ ನಿರ್ಮಾಣ ಆರೋಪ : ನಟಿ ನಂದಿತಾ ದತ್ ಬಂಧನ

01:28 PM Aug 01, 2021 | Team Udayavani |

ಕೋಲ್ಕತ್ತ: ನೀಲಿ ಚಿತ್ರ ನಿರ್ಮಾಣ ಆರೋಪದ ಮೇಲೆ ಬಂಗಾಳಿ ನಟಿ, ರೂಪದರ್ಶಿ ನಂದಿತಾ ದತ್ತ ಹಾಗೂ ಅವರ ಮ್ಯಾನೇಜರ್‌ ಮಾಣಿಕ್‌ ಘೋಷ್‌ನನ್ನು ಪೊಲೀಸರು ಬಂಧಿಸಿದ್ದಾರೆ. ನ್ಯಾನ್ಸಿ ಭಾಬಿ ಎಂದು ಫೇಮಸ್​ ಆಗಿದ್ದ ನಂದಿತಾ ದತ್ತ ಅವರ ಮೇಲೆ ಗಂಭೀರ ಆರೋಪಗಳು ಕೇಳಿಬಂದಿವೆ.

Advertisement

ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್‌ ಕುಂದ್ರಾ ಅಶ್ಲೀಲ ಚಿತ್ರ ನಿರ್ಮಾಣ ಪ್ರಕರಣದಲ್ಲಿ ಬಂಧಿತನಾಗಿರುವ ಬೆನ್ನಲ್ಲೇ ಪಶ್ಚಿಮ ಬಂಗಾಳದಲ್ಲಿ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ನಂದಿತಾ ದತ್ತ ಅಶ್ಲೀಲ ಚಿತ್ರಗಳನ್ನು ನಿರ್ಮಾಣ ಮಾಡಿ ಅವುಗಳನ್ನು ಓಟಿಟಿ ಮೂಲಕ ಪ್ರಸಾರ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ. ಈ ಸಂಬಂಧ ಜುಲೈ 26ರಂದು ಇಬ್ಬರು ಯುವತಿಯರು ದೂರು ನೀಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ರೂಪದರ್ಶಿಯೊಬ್ಬರನ್ನು ಬಲವಂತವಾಗಿ ನೀಲಿ ಚಿತ್ರ ದಂಧೆಗೆ ನೂಕಿದ ಆರೋಪ ನಂದಿತಾ ಮೇಲಿದೆ. ಯುವತಿಯನ್ನು ಬೆದರಿಸಿ, ಆಕೆಯ ನಗ್ನ ಚಿತ್ರವನ್ನು ನಂದಿತಾ ಅಪ್​ಲೋಡ್​ ಮಾಡಿದ್ದಾರೆ. ಯುವತಿಯ ಸ್ನೇಹಿತನನ್ನು ಅವರು ಬಲವಂತದಿಂದ ಕೆಲಸಕ್ಕೆ ಇಟ್ಟುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಯುವತಿ ನೀಡಿದ ದೂರಿನ ಆಧಾರದ ಮೇಲೆ ನಂದಿತಾ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ನಂದಿತಾಗೆ ಮ್ಯಾನೇಜರ್‌ ಆಗಿರುವ ಮಾಣಿಕ್‌ ಘೋಷ್‌ ಕೂಡ ನೀಲಿ ಚಿತ್ರಗಳ ನಿರ್ಮಾಣದಲ್ಲಿ ಪಾಲುದಾರನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಕೋಲ್ಕತ್ತದ ಹೊರ ವಲಯದ ಬಂಗಲೆಗಳನ್ನು ಬಾಡಿಗೆಗೆ ಪಡೆದು ಅಲ್ಲಿ ನೀಲಿ ಚಿತ್ರಗಳ ವಿಡಿಯೊಗಳನ್ನು ಚಿತ್ರೀಕರಿಸಲಾಗುತ್ತಿತ್ತು. ಇದಕ್ಕಾಗಿ ರೂಪದರ್ಶಿಗಳ ಹಾಗೂ ಸಿನಿಮಾಗಳ ಅವಕಾಶಕ್ಕಾಗಿ ಕಾಯುತ್ತಿರುವ ಹೊಸ ಪ್ರತಿಭಗೆಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದರು. ಈ ಪ್ರಕರಣ ಸಂಬಂಧ ತೀವ್ರ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

Advertisement

ಇನ್ನು ಓಟಿಟಿ ಪ್ಲಾಟ್​ಫಾರ್ಮ್​ನ ಹಲವು ಅಡಲ್ಟ್​ ಸಿನಿಮಾಗಳಲ್ಲಿ ನಂದಿತಾ ದತ್ತ ಕಾಣಿಸಿಕೊಂಡಿದ್ದರು. ಅವರ ಜೊತೆ ರಾಜ್ ಕುಂದ್ರಾಗೆ ಏನಾದರೂ ಸಂಬಂಧ ಇತ್ತಾ ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ. ನಟಿ ಗೆಹನಾ ವಸಿಷ್ಠ್​ ಕೂಡ ಅಶ್ಲೀಲ ಸಿನಿಮಾ ದಂಧೆಯಲ್ಲಿ ತೊಡಗಿಕೊಂಡಿದ್ದರು ಎಂಬ ಆರೋಪ ಇದೆ. ಈ ಸಂಬಂಧ ವಿಚಾರಣೆ ನಡೆಯುತ್ತಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next