Advertisement

iPhone: ದೇಶದಲ್ಲಿ ಸಿದ್ಧಗೊಂಡ ಐಫೋನ್‌ ರಫ್ತು ಶೇ.30ರಷ್ಟು ಹೆಚ್ಚಳ

11:31 PM Oct 29, 2024 | Team Udayavani |

ನವದೆಹಲಿ: ಭಾರತದಲ್ಲಿ ಆ್ಯಪಲ್‌ ಸಂಸ್ಥೆಯು ಐಫೋನ್‌ಗಳ ರಫ್ತು ಹೆಚ್ಚಿಸಿದ್ದು, ಈ ವರ್ಷ ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ 49,800 ಕೋಟಿ ರೂ.ಗಳಷ್ಟು (6 ಬಿಲಿಯನ್‌ ಡಾಲರ್‌) ಮೌಲ್ಯದ ಐಫೋನ್‌ಗಳನ್ನು ರಫ್ತು ಮಾಡಲಾಗಿದೆ.

Advertisement

ಇದು ಕಳೆದ ವರ್ಷಕ್ಕಿಂತ ಶೇ.30ರಷ್ಟು ಹೆಚ್ಚಳವಾಗಿದ್ದು, ದೇಶದಲ್ಲಿ ಐಫೋನ್‌ ತಯಾರಿಕೆಯು ವೇಗವಾಗಿ ಸಾಗುತ್ತಿದೆ. ಜತೆಗೆ 2024ರಲ್ಲಿ ರಫ್ತು 83,000 ಕೋಟಿ ರೂ.ನಷ್ಟು ತಲುಪುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next