Advertisement

3 ವರ್ಷದ ಪುಟಾಣಿ ಮೇಲೆ ಲೈಂಗಿಕ ದೌರ್ಜನ್ಯ; ಕಾಮುಕ ಅರೆಸ್ಟ್

07:12 PM Feb 20, 2017 | Sharanya Alva |

ಬೆಂಗಳೂರು: 3 ವರ್ಷದ ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರತ್ ಹಳ್ಳಿ ಪೊಲೀಸರು ಆರೋಪಿ ನರ್ಸರಿ ಶಾಲೆಯ ಸೂಪರ್ ವೈಸರ್ ವಿರುದ್ಧ ಫೋಕ್ಸೊ ಕಾಯ್ದೆಯಡಿ ದೂರು ದಾಖಲಿಸಿ ಬಂಧಿಸಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

Advertisement

ಮಾರತ್ ಹಳ್ಳಿಯ ನರ್ಸರಿ ಶಾಲೆಗೆ ಹೋಗಿ ವಾಪಸಾಗಿದ್ದ ಮಗು ಅಳುತ್ತಿರುವುದನ್ನು ಗಮನಿಸಿ ಪೋಷಕರು ವಿಚಾರಿಸಿದಾಗ ಲೈಂಗಿಕ ದೌರ್ಜನ್ಯ ನಡೆದಿರುವ ಅಂಶ ಬೆಳಕಿಗೆ ಬಂದಿತ್ತು. ನಂತರ ಪೋಷಕರು ಶಾಲೆಗೆ ತೆರಳಿ ಪ್ರಾಂಶುಪಾಲರಿಗೆ ಮಾಹಿತಿ ನೀಡಿದ್ದರು. ಈ ಸಂದರ್ಭದಲ್ಲಿ ಬಾಲಕಿ ಆರೋಪಿ ಸೂಪರ್ ವೈಸರ್ ನ ಗುರುತು ಪತ್ತೆ ಹಚ್ಚಿದ್ದಳು. ಆದರೆ ಪ್ರಾಂಶುಪಾಲರು ಪೊಲೀಸರಿಗೆ ದೂರು ನೀಡಿರಲಿಲ್ಲವಾಗಿತ್ತು ಎಂದು ಪೋಷಕರು ಆರೋಪಿಸಿದ್ದಾರೆ.

ಈಗ ಬಾಲಕಿಯ ಪೋಷಕರು ಮಾರತ್ ಹಳ್ಳಿ ಪೊಲೀಸರಿಗೆ ದೂರು ನೀಡಿದ್ದು, ಅದರಂತೆ ಎಫ್ಐಆರ್ ದಾಖಲಿಸಿ, ಆರೋಪಿ ಸೂಪರ್ ವೈಸರ್ ನನ್ನು ಬಂಧಿಸಿದ್ದಾರೆ. ಅಲ್ಲದೇ ಪ್ರಾಂಶುಪಾಲೆ ವೀಣಾ ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿರುವುದಾಗಿ ವರದಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next