ಕೊಟ್ಟಿಗೆಹಾರ: ಮೂರು ವರ್ಷದ ಪುಟ್ಟ ಬಾಲೆ ಆರ್ವಿ ಎಸ್ ಅಪಾರ ನೆನೆಪಿನ ಶಕ್ತಿಯಿಂದಾಗಿ ಇಂಡಿಯಾ ಬುಕ್ ಆಪ್ ರೆಕಾರ್ಡ್ ಗೆ ಆಯ್ಕೆಯಾಗಿದ್ದಾಳೆ.
ಆನ್‌ಲೈನ್ ಮೂಲಕ 12 ಬಣ್ಣಗಳು, 9 ಆಕಾರಗಳು, 13 ಹಣ್ಣುಗಳು,
19 ವಿವಿಧ ವಾಹನಗಳು, 15 ತರಕಾರಿಗಳು,
37 ಪ್ರಾಣಿಗಳು, ಕನ್ನಡ ಮತ್ತು ಹಿಂದಿ ಅಂಕೆಗಳು, ಇಂಗ್ಲೀಷ್ ಸಂಖ್ಯೆಗಳು, ಕನ್ನಡ ಮತ್ತು ಇಂಗ್ಲೀಷ್ ವರ್ಣಮಾಲೆಗಳು, ಏಳು ಇಂಗ್ಲೀಷ್ ಪದ್ಯಗಳು, ದ್ವಿಭಾಷೆಯಲ್ಲಿ ದಿನಗಳು ಮತ್ತು ತಿಂಳುಗಳ ಹೆಸರು ನಿರರ್ಗಳವಾಗಿ ಹೇಳುವ ಮೂಲಕ ಹಾಗೂ
7 ಪ್ರಾಣಿಗಳ ಅನುಕರಣೆ ಮಾಡುವ ಮೂಲಕ ಪ್ರತಿಭೆ ಬೆಳಗಿಸಿ ವಿಜೇತಳಾಗಿದ್ದಾಳೆ.
ಪ್ರತಿಭಾವಂತ ಬಾಲೆ ಎಸ್. ಆರ್ವಿ ಬಣಕಲ್‌ನ ಕೂಡಹಳ್ಳಿಯ ಕೆ.ಎಸ್.ಶಾಶ್ವತ್ ಹಾಗೂ ಸ್ಮಿತಾ ದಂಪತಿಯ ಪುತ್ರಿಯಾಗಿದ್ದು, ಇವಳ ಹೆಸರು ಈಗ ‘ಇಂಡಿಯಾ ಬುಕ್ ಆಫ್ ರೆಕಾರ್ಡ್’ ನಲ್ಲಿ ಸೇರಿರುವುದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.
ಮಗಳು ವರ್ಷ ತುಂಬಿದಾಗಲೇ ಮಗಳು ಚೂಟಿಯಾಗಿದ್ದು ಏನೇ ಹೇಳಿದರೂ ನೆನಪಿಡುವ ಗುಣ ಹೊಂದಿದ್ದರಿಂದ ಅವಳಿಗೆ ಅಭ್ಯಾಸ ನೀಡಿದ್ದೇ. ಇದು ಅವಳಿಗೆ ಪ್ರಶಸ್ತಿ ದೊರೆಯಲು ಕಾರಣವಾಯಿತು ಎಂದು ಅವರು ಹೇಳಿದ್ದಾರೆ.
ಬಾಲ್ಯದಲ್ಲೇ ಪ್ರಶಸ್ತಿಯ ಗರಿಯನ್ನು ಮುಡಿಗೇರಿಸಿಕೊಂಡಿರುವುದು ಸಂತಸ ತಂದಿದೆ ಎಂದು ಆರ್ವಿಯ ತಾಯಿ ಸ್ಮಿತಾ ಶಾಶ್ವತ್ ತಿಳಿಸಿದ್ದಾರೆ.