Advertisement

ಚಿನ್ನ ಖರೀದಿಗೆ 3 ದಾರಿ

11:50 PM Apr 24, 2020 | Sriram |

ಅಕ್ಷಯ ತೃತೀಯ ಬರುವುದು ಪ್ರತೀ ವರ್ಷ ಯುಗಾದಿಯ ನಂತರದ ಎರಡನೆಯ ಮಾಸದಲ್ಲಿ. ಅಂದರೆ ವೈಶಾಖ ಮಾಸದ ಮೂರನೇ ದಿನ, ಜ್ಯೋತಿಷ್ಯದ ಲೆಕ್ಕಾಚಾರದಲ್ಲಿ ತದಿಗೆ (ತೃತೀಯ)ಯಂದು. ಈ ದಿನ ಏನೇ ಮಾಡಿದರೂ ಅಕ್ಷಯ ವಾಗುತ್ತದೆ ಎಂಬ ನಂಬಿಕೆಯಿಂದ ಭಾರತೀಯರು, ವಿಶೇಷವಾಗಿ ಚಿನ್ನ ಕೊಳ್ಳುತ್ತಾರೆ. ಈ ಬಾರಿ ಚಿನ್ನದಂಗಡಿಗಳಿಗೆ ಬಾಗಿಲು, ಅಂತರ್ಜಾಲದಲ್ಲಿಯೇ ಕೊಳ್ಳಬೇಕು. ಹಾಗಾಗಿ ಯಾವ್ಯಾವ ಮಾದರಿಯಲ್ಲಿ ಕೊಳ್ಳಬಹುದು ಎಂಬ ಕಿರು ಮಾಹಿತಿ ಇದು.

Advertisement

ನೈಜ ಚಿನ್ನದ ಖರೀದಿ
ವಿವಿಧ ಕಂಪನಿಗಳ ಅಂತರ್ಜಾಲ ತಾಣಗಳ ಮೂಲಕ ಚಿನ್ನಾಭರಣಗಳು, ಚಿನ್ನದ ಗಟ್ಟಿ, ಪದಕಗಳನ್ನು ಖರೀದಿಸಬಹುದು. ಒಮ್ಮೆ ದಿಗ್ಬಂಧನ ತೆರವಾದರೆ ನೇರವಾಗಿ ಅದೇ ಆಭರಣ ಪಡೆಯಬಹುದು.

ಗೋಲ್ಡ್‌ ಇಟಿಎಫ್
ಸ್ಟಾಕ್‌ ಎಕ್ಸ್‌ಚೇಂಜ್‌ಗಳಲ್ಲಿ ಹೇಗೆ ವಿವಿಧ ಕಂಪನಿಗಳ ಷೇರಿನ ಪಟ್ಟಿಯಿರುತ್ತದೋ, ಹಾಗೆಯೇ ಮ್ಯೂಚುವಲ್‌ ಫ‌ಂಡ್‌ ಕಂಪನಿಗಳ ಪಟ್ಟಿಯೂ ಇರುತ್ತದೆ. ಇಲ್ಲಿ ಬರೀ ಚಿನ್ನದ ಮೇಲೆ ಮಾತ್ರ ಹೂಡಿಕೆ ಮಾಡಲು ಅವಕಾಶ ನೀಡುವ ಕಂಪನಿಗಳೂ ಇರುತ್ತವೆ. ಇವಕ್ಕೆ ಗೋಲ್ಡ್‌ ಎಕ್ಸ್‌ಚೇಂಜ್‌ ಟ್ರೇಡೆಡ್‌ ಫ‌ಂಡ್ಸ್‌ (ಗೋಲ್ಡ್‌ ಇಟಿಎಫ್) ಎನ್ನುತ್ತಾರೆ. ಇಲ್ಲಿ ನೀವು ಚಿನ್ನದ ಮೇಲೆ ಹೂಡಿಕೆ ಮಾಡಬಹುದು. ಅದಕ್ಕಾಗಿ ಡಿಮ್ಯಾಟ್‌ ಖಾತೆ ಬೇಕಾಗುತ್ತದೆ (ಮಾಹಿತಿಗೆ ಬ್ಯಾಂಕ್‌ ಸಂಪರ್ಕಿಸಿ). ಆದರೆ ಇಲ್ಲಿ ಮೂಲ ಚಿನ್ನ ಸಿಗುವುದಿಲ್ಲ. ಬದಲಿಗೆ ನಿರ್ದಿಷ್ಟ ಮೌಲ್ಯದ ಚಿನ್ನದ ಒಪ್ಪಂದ ಪತ್ರವಿರುತ್ತದೆ. ಒಂದುವೇಳೆ ಈ ರೀತಿಯ ಚಿನ್ನದ ಪತ್ರವನ್ನು ಮಾರಲು ಬಯಸಿದರೆ, ನಿಮಗೆ ಹಣ ಸಿಗುತ್ತದೆ, ಚಿನ್ನ ಸಿಗುವುದಿಲ್ಲ.

ಸಾವರಿನ್‌ ಬಾಂಡ್‌
ಆರ್‌ಬಿಐ ಮೂಲಕ ಕೇಂದ್ರ ಸರ್ಕಾರ ಸಾವರಿನ್‌ ಚಿನ್ನದ ಬಾಂಡ್‌ ಗಳನ್ನು ಬಿಡುಗಡೆ ಮಾಡಿದೆ. ಇವನ್ನೂ ಸ್ಟಾಕ್‌ಎಕ್ಸ್‌ ಚೇಂಜ್‌ಗಳ ಮೂಲಕವೇ ಪಡೆದು ಕೊಳ್ಳಬೇಕು. ಇವುಗಳನ್ನು ಸಾಲ ಪಡೆಯು ವುದಕ್ಕೂ ಬಳಸಬ ಹುದು. ಇಲ್ಲಿ ಕನಿಷ್ಠ 1 ಗ್ರಾಮ್‌ ಚಿನ್ನದ ಬಾಂಡ್‌ ಖರೀದಿಸಬೇಕು.


2021: 10 ಗ್ರಾಂ ಚಿನ್ನಕ್ಕೆ 82,000 ರೂ.
ನಿಮಗೆ ಚಿನ್ನ ಖರೀದಿಸಬೇಕೆಂಬ ಇಚ್ಛೆಯಿದ್ದು, ದರ ಕಡಿಮೆಯಾಗಲಿ ಎಂದು ಕಾಯುತ್ತಿದ್ದೀರಾ? ಹಾಗಾದರೆ, ವಿಳಂಬ ಮಾಡದೇ ಈಗಲೇ ಖರೀದಿ ಸುವುದು ಒಳಿತು. ಏಕೆಂದರೆ, 2021ರ ಅಂತ್ಯದ ಹೊತ್ತಿಗೆ ಚಿನ್ನದ ದರ 10 ಗ್ರಾಂಗೆ 82 ಸಾವಿರ ರೂ.ಗೆ ಏರಿಕೆಯಾಗಲಿದೆಯಂತೆ! ಹೀಗೆಂದು ಬ್ಯಾಂಕ್‌ ಆಫ್ ಅಮೆರಿಕ ಸೆಕ್ಯೂರಿಟೀಸ್‌ ಹೇಳಿದೆ. ಕಳೆದ ಒಂದೂವರೆ ವರ್ಷದಲ್ಲಿ ಶೇ.75ರಷ್ಟು ಹೆಚ್ಚಳವಾಗಿರುವ ಚಿನ್ನದ ದರ ಮುಂದಿನ 18 ತಿಂಗಳಲ್ಲಿ ಮತ್ತೆ ಶೇ.76ರಷ್ಟು ಜಿಗಿತ ಕಾಣಲಿದೆ ಎಂದು ಚಿನಿವಾರ ಮಾರುಕಟ್ಟೆ ವಿಶ್ಲೇಷಕರು ಅಂದಾಜಿಸಿದ್ದಾರೆ. ರೂಪಾಯಿ ದರದಲ್ಲಿ ಹೇಳುವುದಾದರೆ, ಒಂದು ಔನ್ಸ್‌ಗೆ 3 ಸಾವಿರ ಡಾಲರ್‌ ಎಂದರೆ, 10 ಗ್ರಾಂಗೆ 82 ಸಾವಿರ ರೂ. ಎಂದರ್ಥ. ಪ್ರಸ್ತುತ ಷೇರುಗಳು ಬಗ್ಗೆ ಭರವಸೆ ಕಳೆದು ಕೊಳ್ಳುತ್ತಿರುವ ಹೂಡಿಕೆದಾರರು, ಮುಂದೆ ಚಿನ್ನದಲ್ಲಿ ಹೂಡಿಕೆ ಮಾಡುವರು ಎಂದೂ ತಜ್ಞರು ವಿಶ್ಲೇಷಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next