Advertisement

ಕಾಂಗ್ರೆಸ್‌ನ 3 ಟ್ರಸ್ಟ್‌ಗಳಿಗೆ ತನಿಖೆಯ ಬಿಸಿ

03:39 AM Jul 09, 2020 | Sriram |

ಹೊಸದಿಲ್ಲಿ: ಕಾಂಗ್ರೆಸ್‌ ನಾಯಕರ ನೇತೃತ್ವದ ಮೂರು ಟ್ರಸ್ಟ್‌ಗಳ ವಿರುದ್ಧ ತನಿಖೆಗೆ ಕೇಂದ್ರ ಸರಕಾರ ನಿರ್ಧರಿಸಿದ್ದು, ಇದಕ್ಕಾಗಿ ಅಂತರ್‌ ಸಚಿವಾಲಯ ಸಮಿತಿ ರಚಿಸಲಾಗಿದೆ.

Advertisement

ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಮುಖ್ಯಸ್ಥರಾಗಿರುವ ರಾಜೀವ್‌ ಗಾಂಧಿ ಫೌಂಡೇಶನ್‌ಗೆ ಚೀನ ಮೊದ ಲಾದ ದೇಶಗಳಿಂದ ಅಪಾರ ಪ್ರಮಾಣ ದಲ್ಲಿ ಅಕ್ರಮ ದೇಣಿಗೆ ಹರಿದು ಬಂದ ಆರೋಪಗಳ ಹಿನ್ನೆಲೆಯಲ್ಲಿ ಸರಕಾರ ತನಿಖೆಗೆ ಮುಂದಾ ಗಿದೆ ಎಂದು ಕೇಂದ್ರ ಗೃಹ ಇಲಾಖೆ ಬುಧವಾರ ತಿಳಿಸಿದೆ.

ಹಲವು ಕಾಯ್ದೆಗಳಡಿ ತನಿಖೆ
ರಾಜೀವ್‌ ಗಾಂಧಿ ಫೌಂಡೇಶನ್‌, ರಾಜೀವ್‌ ಗಾಂಧಿ ಚಾರಿಟೆಬಲ್‌ ಟ್ರಸ್ಟ್‌ ಹಾಗೂ ಇಂದಿರಾ ಗಾಂಧಿ ಸ್ಮಾರಕ ಟ್ರಸ್ಟ್‌ಗಳಿಗೆ ಬಂದಿರುವ ಹಣವನ್ನು ಹಲವು ಕಾಯ್ದೆಗಳ ಅಡಿಯಲ್ಲಿ ತನಿಖೆ ನಡೆಸುವ ಅನಿವಾರ್ಯವಿದೆ. ಹಾಗಾಗಿ ಅಂತರ ಸಚಿವಾಲಯಗಳ ಮಟ್ಟದ ಸಮಿತಿ ರಚಿಸಲಾಗಿದೆ. ಜಾರಿ ನಿರ್ದೇಶನಾಲಯದ ಹೆಚ್ಚು ವರಿ ನಿರ್ದೇಶಕರು ಅದರ ಮುಖ್ಯಸ್ಥ ರಾಗ ಲಿದ್ದಾರೆ ಎಂದು ತಿಳಿಸಿದೆ.ಜೂ. 26ರಂದು ಕಾಂಗ್ರೆಸ್‌ ವಿರುದ್ಧ ಟೀಕೆ ಮಾಡಿದ್ದ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ, ಕಾಂಗ್ರೆಸ್‌ ನಾಯಕರು ಮುಖ್ಯಸ್ಥರಾಗಿರುವ ದತ್ತಿ ಸಂಸ್ಥೆಗಳಿಗೆ ವಿದೇಶಗಳಿಂದ ಅಕ್ರಮವಾಗಿ ಹಣ ಹರಿದುಬಂದಿದೆ.

ಈ ಹಣವನ್ನು ಕಾಂಗ್ರೆಸ್‌ ನಾಯಕರು ಏನು ಮಾಡಿದರು? ಯಾವ ಕಲ್ಯಾಣ ಕೆಲಸಗಳಿಗೆ ಖರ್ಚು ಮಾಡಿದರು ಎಂದು ಪ್ರಶ್ನಿಸಿದ್ದರು.

ದೇಣಿಗೆಗಳ ಬಗ್ಗೆ ವಿವರಣೆ ನೀಡಿದ್ದ ಅವರು, ರಾಜೀವ್‌ ಗಾಂಧಿ ದತ್ತಿ ಸಂಸ್ಥೆಗೆ ಚೀನ ಹಾಗೂ ಯೂರೋಪಿಯನ್‌ ಕಮಿಷನ್‌ನಿಂದ 2005-2009ರ ಅವಧಿಯಲ್ಲಿ ಪ್ರತಿ ವರ್ಷ ದೇಣಿಗೆ ನೀಡಲಾಗಿದೆ. ಲಕ್ಸೆಂಬರ್ಗ್‌ನಿಂದ 2006-09ರ ಅವಧಿಯಲ್ಲಿ ಪ್ರತಿ ವರ್ಷವೂ ದೇಣಿಗೆ ನೀಡಿದೆ. ಇದಲ್ಲದೆ ಹಲವು ವಿದೇಶಿ ಕಂಪೆನಿಗಳಿಂದ ಹೇರಳ ಹಣ ಬಂದಿದೆ ಎಂದು ಹೇಳಿದ್ದರು.

Advertisement

ಇದಕ್ಕೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಪ್ರತಿಕ್ರಿಯಿಸಿ, ಮೋದಿ ಇಡೀ ಪ್ರಪಂಚ ತಮ್ಮ ಹಾಗೇ ಇದೆ ಎಂದು ತಿಳಿದಿದ್ದಾರೆ. ಯಾರು ಸತ್ಯಕ್ಕಾಗಿ ಹೋರಾಡಿದ್ದಾರೋ ಅವರನ್ನು ಅವಮಾನಿಸುವುದು ಅಥವಾ ಬೆದರಿಸುವುದು ಒಳ್ಳೆಯ ಲಕ್ಷಣವಲ್ಲ ಎಂಬುದನ್ನು ಅರಿತಿಲ್ಲ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next