Advertisement

Moon: ಚಂದ್ರನ ಮೇಲೆ 3 ಪುಟಾಣಿ ರೋವರ್‌ಗಳು

08:24 PM Aug 03, 2023 | Team Udayavani |

ವಾಷಿಂಗ್ಟನ್‌: ಚಂದ್ರಯಾನ-3 ಯೋಜನೆ ಮೂಲಕ ಭಾರತವು ಚಂದ್ರನ ಮೇಲೆ ಲ್ಯಾಂಡರ್‌ ಮತ್ತು ರೋವರ್‌ ಇಳಿಸಲು ಮುಂದಾಗಿದೆ. ಇದೇ ವೇಳೆ ಅಮೆರಿಕದ ನ್ಯಾಷನಲ್‌ ಏರೋನಾಟಿಕ್ಸ್‌ ಆ್ಯಂಡ್‌ ಸ್ಪೇಸ್‌ ಅಡ್ಮಿನಿಸ್ಟ್ರೇಶನ್‌(ನಾಸಾ) ತನ್ನ ರೊಬೊಟಿಕ್‌ ಪರಿಶೋಧನೆ ಯೋಜನೆ ಭಾಗವಾಗಿ, 2024ರಲ್ಲಿ ಚಂದ್ರನ ಮೇಲೆ ಮೂರು ಮಿನಿಯೇಚರ್‌ ರೋವರ್‌ಗಳನ್ನು ಇಳಿಸಲು ಯೋಜಿಸಿದೆ.

Advertisement

ರೊಬೋಟ್‌ಗಳು ಹೇಗೆ ಸ್ವಾಯತ್ತವಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ನೇರ ಮಾನವ ಹಸ್ತಕ್ಷೇಪವಿಲ್ಲದೆ ಪರಸ್ಪರ ಸಹಕರಿಸುತ್ತವೆ ಎಂಬುದನ್ನು ನಿರೂಪಿಸುವ ಗುರಿಯನ್ನು ಈ ಯೋಜನೆ ಹೊಂದಿದೆ. ಅಲ್ಲದೇ ಇದು ಭವಿಷ್ಯದ ಬಾಹ್ಯಾಕಾಶ ಕಾರ್ಯಾಚರಣೆಗಳ ದಕ್ಷತೆಯನ್ನು ಹೆಚ್ಚಿಸಲಿದೆ.

ಸೂಟ್‌ಕೇಸ್‌ ಗಾತ್ರದ ಮೂರು ರೋವರ್‌ಗಳನ್ನು ಚಂದ್ರನ ರೈನರ್‌ ಗಾಮಾ ಪ್ರದೇಶದಲ್ಲಿ ನಿಯೋಜಿಸಲಾಗುತ್ತದೆ. ಇದು ಚಂದ್ರನಲ್ಲಿ ಸುಮಾರು 14 ಭೂಮಿಯ ದಿನಗಳು ಕಾರ್ಯನಿರ್ವಹಿಸಲಿವೆ. ಅಲ್ಲಿ ರೋವರ್‌ಗಳ ಸಾಮರ್ಥ್ಯವನ್ನು ಪರೀಕ್ಷಿಸುವ ಪ್ರಯೋಗಕ್ಕೆ ಒಳಗಾಗಲಿದೆ ಎಂದು ನಾಸಾ ತಿಳಿಸಿದೆ.

“ಕಾರ್ಯವನ್ನು ಸ್ವಾಯತ್ತವಾಗಿ ಸಾಧಿಸಲು ಮೊಬೈಲ್‌ ರೋಬೋಟ್‌ಗಳ ನೆಟ್‌ವರ್ಕ್‌ ಒಟ್ಟಿಗೆ ಕೆಲಸ ಮಾಡಬಹುದು ಎಂಬುದನ್ನು ನಿರೂಪಿಸುವುದು ಈ ಯೋಜನೆಯ ಗುರಿಯಾಗಿದೆ. ಭವಿಷ್ಯದಲ್ಲಿ ಪರಿಶೋಧನೆಗಳಿಗೆ ಇದೊಂದು ಕ್ರಾಂತಿಯ ಹೆಜ್ಜೆಯಾಗಿದೆ. ಕಳುಹಿಸಬೇಕಾದ ರೋವರ್‌ಗಳ ಸಂಖ್ಯೆ ಮತ್ತು ಅವುಗಳ ಸಾಮೂಹಿಕ ಪಾತ್ರಗಳ ಬಗೆಗಿನ ಪ್ರಶ್ನೆಗಳಿಗೆ ಇದು ಉತ್ತರವಾಗಲಿದೆ’ ಎಂದು ನಾಸಾ ಜೆಟ್‌ ಪ್ರೊಪಲ್ಶನ್‌ ಪ್ರಯೋಗಾಲಯದ ಯೋಜನಾ ವ್ಯವಸ್ಥಾಪಕಿ ಶುಭಾ ಕೋಮಂದೂರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next