ವಿಜಯಪುರ: ರಾಜ್ಯದಲ್ಲಿ ಇದೀಗ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಸರ್ಕಾರ ಮುಂದಾಗಿದ್ದು ಗೋ ಸಂರಕ್ಷಣೆ ವಿಷಯವಾಗಿ ಒತ್ತಡ ಹೆಚ್ಚಲಿದೆ. ಆದರೆ ಬಸವನಾಡು ವಿಜಯಪುರ ಜಿಲ್ಲೆಯಲ್ಲಿ ಸ್ವಾತಂತ್ರ್ಯ ಪೂರ್ವದಲ್ಲೇ ಗೋ ಸಂರಕ್ಷಣೆಗೆ ಗೋಶಾಲೆ ತೆರೆದಿದ್ದು, ಸದ್ಯ ಮೂರು ಗೋ ಶಾಲೆಗಳಿದ್ದು ಸಾವಿರಕ್ಕೂ ಹೆಚ್ಚು ದೇಶಿ ಗೋವುಗಳ ಸಂರಕ್ಷಣೆ ಕಾರ್ಯ ನಡೆದಿದೆ.
1939ರಲ್ಲಿ ಜೈನ್ ಸಮುದಾಯದಿಂದ ನಗರದ ಹೊರ ವಲಯದಲ್ಲಿರುವ ಭೂತನಾಳ ಬಳಿ ದಿಕ್ಯಾಟಲ್ ಬ್ರಿàಡಿಂಗ್ ಡೇರಿ ಫಾರ್ಮಿಂಗ್ ಅಸೋಸಿಯೇಷನ್
ಹೆಸರಿನಲ್ಲಿ ಗೋಶಾಲೆ ಆರಂಭಗೊಂಡಿದೆ. 560 ಗೋವು, 80 ಎತ್ತು-ಹೋರಿ ಸೇರಿ ಸೇರಿದಂತೆ 640 ಜಾನುವಾರುಗಳಿದ್ದು, ಈ ಗೋವುಗಳ ಸಂರಕ್ಷಣೆಗೆ ನಿತ್ಯವೂ ಕನಿಷ್ಟ 30 ಸಾವಿರ ರೂ. ವೆಚ್ಚ ಮಾಡಲಾಗುತ್ತಿದೆ. ಗೋವುಗಳ ಸಂರಕ್ಷಣೆಗೆ ಸುಮಾರು 25 ಕಾರ್ಮಿಕರು, ಪಶು ವೈದ್ಯರು, ಔಷಧ ಸೇರಿ ಮಾಸಿಕ ಲಕ್ಷಾಂತರ ರೂ. ಖರ್ಚು ಮಾಡಲಾಗುತ್ತಿದೆ.
ಸದರಿ ಗೋಶಾಲೆ ಆಡಳಿತ ಮಂಡಳಿ ವರ್ಷಕ್ಕೆ ಸುಮಾರು 700 ಜಾನುವಾರುಗಳಿಗೆ ಬೇಕಾಗುವ ಕಡಲೆ, ತೊಗರಿ, ಹೆಸರು ಕಾಳುಗಳ ಹೊಟ್ಟು, ಜೋಳದ ಮೇವು ಸಂಗ್ರಹಿಸಿಕೊಳ್ಳುತ್ತದೆ. ಈ ಗೋಶಾಲೆಯ ಜಾನುವಾ ರ ಸಂರಕ್ಷಣೆ ಕಂಡು ಸರ್ಕಾರ 2015ರಿಂದ ಕಳೆದ 4 ವರ್ಷಗಳಲ್ಲಿ 32.19 ಲಕ್ಷ ರೂ. ಅನುದಾನ ನೀಡಿದೆ. 2007ರಲ್ಲಿ ಉತ್ತರಾ ಧಿ ಮಠದ ಸತ್ಯಾತ್ಮತೀರ್ಥರಿಂದ ಸ್ಥಾಪಿಸಲ್ಪಟ್ಟಿರುವ ಪ್ರಮೋದಾತ್ಮಕ ಗೋಸಂರಕ್ಷಣಾ ಕೇಂದ್ರ ನಿಡಗುಂದಿ ತಾಲೂಕಿನ ಯಲಗೂರು ಗ್ರಾಮದಲ್ಲಿ ಸಕ್ರೀಯವಾಗಿದೆ. ಇದೀಗ 40 ಹೋರಿ-ಎತ್ತು ಹಾಗೂ 264 ಗೋವುಗಳ ಸೇರಿದಂತೆ ಸುಮಾರು 300 ಗೋ ಸಂತತಿ ಸಂರಕ್ಷಣೆ ಮಾಡಲಾಗುತ್ತಿದೆ. ಇಲ್ಲಿರುವ ಸೌಲಭ್ಯಗಳು ಇನ್ನು ಕೇವಲ 30 ಜಾನುವಾರುಗಳಿಗೆ ಸರಿ ಹೋಗಲಿವೆ.
2010ರಿಂದ ಈವರೆಗೆ ಮೂರು ಬಾರಿ ಸರ್ಕಾರ ಅನುದಾನ ನೀಡಿದ್ದು 21.74 ಲಕ್ಷ ರೂ. ಅನುದಾನ ಪಡೆದಿದೆ. ಸಿದ್ದೇಶ್ವರ ಸಂಸ್ಥೆಯಿಂದ 2014ರಲ್ಲಿ ಕಗ್ಗೊàಡ ಗ್ರಾಮದಲ್ಲಿ ಸ್ಥಾಪನೆ ಆಗಿರುವ ರಾಮನಗೌಡ ಬಿ. ಪಾಟೀಲ ಯತ್ನಾಳ ಗೋಶಾಲೆಯೂ ಸುಸಜ್ಜಿತವಾಗಿ ನಡೆಯುತ್ತಿದೆ. ಕೇಂದ್ರದ ಮಾಜಿ ಸಚಿವರಾದ ವಿಜಯಪುರ ಹಾಲಿ ಶಾಸಕ ಬಸನಗೌಡ ಪಾಟೀಲ ಅವರ ಕನಸಿನ ಕೂಸಾದ ಈ ಗೋಶಾಲೆಯಲ್ಲಿ 130 ಹೋರಿ-ಎತ್ತು, 196 ಗೋವುಗಳು ಸೇರಿದಂತೆ 326 ಜಾನುವಾರುಗಳಿವೆ. ಸುಮಾರು 300 ಗೋವುಗಳ ಸಂರಕ್ಷಣೆಗೆ ಬೇಕಾದ ಸೌಲಭ್ಯಗಳು ಇಲ್ಲಿ ಲಭ್ಯ ಇವೆ. ಈ ಗೋಶಾಲೆ ನಿರ್ವಹಣೆಗೆ ಅಗತ್ಯ ಸಿಬ್ಬಂದಿ ಹಾಗೂ ಪಶು ವೈದ್ಯರ ಸೇವೆ ಇದೆ. ಶಾಸ್ತ್ರೋಕ್ತವಾಗಿ ಗೋ ಸೆಗಣೆಯಿಂದ ವಿಭೂತಿ ತಯಾರಿಕೆ ಘಟಕವನ್ನು ಸ್ಥಾಪಿಸಲಾಗಿದೆ. ಈ ಗೋಶಾಲೆ ಸುಮಾರು 61 ಎಕರೆ
ಪ್ರದೇಶದಲ್ಲಿದ್ದು, ಶಾಸಕ ಯತ್ನಾಳ ಸ್ವಂತ 10 ಎಕರೆ ಜಮೀನಿನಲ್ಲಿ ಮೇವು ಬೆಳೆದು ನೀಡುತ್ತಿದ್ದಾರೆ.
ಇದಲ್ಲದೇ ಇಂಡಿ ಬಳಿ ಸಿದ್ದೇಶ್ವರ ಸಂಸ್ಥೆಗೆ ಸೇರಿದ ಸುಮಾರು 20ಎಕರೆ ಜಮೀನಿನಲ್ಲಿ ಮೇವು ಬೆಳೆದು ಗೋಶಾಲೆಗಳ ಜಾನುವಾರು ಸಂರಕ್ಷಣೆ ಮಾಡಲಾಗುತ್ತಿದೆ. ಸರ್ಕಾರ ಈ ಗೋಶಾಲೆಯ ಕ್ರಿಯಾಶೀಲತೆಯಿಂದಾಗಿ ಕಳೆದ ಎರಡು ವರ್ಷಗಳಲ್ಲಿ 6.72 ಲಕ್ಷ ರೂ. ಅನುದಾನ ನೀಡಿದೆ.
ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಮಹತ್ವಾಕಾಂಕ್ಷೆಯ ನಮ್ಮ ಗೋಶಾಲೆ ರಾಜ್ಯದಲ್ಲೇ ಮಾದರಿ ಸೇವೆ ನೀಡುತ್ತಿದೆ. ಪಶುಗಳಿಗೆ ಆಹಾರದ ಕೊರತೆ ಆಗದಂತೆ ನೋಡಿಕೊಳ್ಳುವ ಜತೆಗೆ ತುರ್ತು ಆರೋಗ್ಯ ಸೇವೆಯೂ ಲಭ್ಯ ಇದೆ. ಡಾ|ಎಂ.ಸಿ. ಚಿಕ್ಕಮಠ,
ಪಶು ವೈದ್ಯರು, ಆರ್.ಬಿ. ಪಾಟೀಲ ಯತ್ನಾಳ ಗೋಶಾಲೆ, ಕಗ್ಗೊಡ
ಸ್ವಾತಂತ್ರ್ಯ ಪೂರ್ವದಲ್ಲೇ ಜೈನ ಸಮುದಾಯ ಸ್ಥಾಪಿಸಿರುವ ಗೋಶಾಲೆ ಈಗಲೂ ಯಶಸ್ವಿಯಾಗಿ ನಡೆಯುತ್ತಿದೆ. ನಿತ್ಯವೂ ಸುಮಾರು ಗೋಶಾಲೆ ನಿರ್ವಹಣೆಗೆ 30 ಸಾವಿರ ರೂ.ಗೂ ಹೆಚ್ಚಿನ ಖರ್ಚಾಗುತ್ತಿದೆ. ಸರ್ಕಾರವೂ ಆಗಾಗ ಕೊಂಚ ಆರ್ಥಿಕ ನೆರವು ನೀಡಿದೆ.
ತೇಜಸ್ ಹಾಗೂ ಗೋವಿಂದ ತೋಸ್ನಿವಾಲ್,
ಜೈನ ಸಮುದಾಯದ ಗೋಶಾಲೆ, ಭೂತನಾಳ
*ಜಿ.ಎಸ್. ಕಮತರ