Advertisement

Jammu Kashmir: 27 ಗಂಟೆ ಕಾರ್ಯಾಚರಣೆ ಸೇನಾ ವಾಹನದ ಮೇಲೆ ದಾಳಿ ನಡೆಸಿದ 3 ಉಗ್ರರ ಹ*ತ್ಯೆ

12:26 PM Oct 29, 2024 | Team Udayavani |

ಶ್ರೀನಗರ(Srinagar):ಜಮ್ಮು-ಕಾಶ್ಮೀರದ ಅಖ್ನೂರ್‌ ಸೆಕ್ಟರ್‌ ನಲ್ಲಿ ಸೋಮವಾರ ಸೇನಾ ವಾಹನದ ಮೇಲೆ ದಾಳಿ ನಡೆಸಿದ್ದ ಭಯೋತ್ಪಾದಕರ ವಿರುದ್ಧ ಭಾರತೀಯ ಸೇನೆ 27 ಗಂಟೆಗಳ ಕಾಲ ತೀವ್ರ ಕಾರ್ಯಾಚರಣೆ ನಡೆಸಿ, ದಾಳಿ ಮಾಡಿದ್ದ ಮೂವರು ಉ*ಗ್ರರನ್ನು ಹೊಡೆದುರುಳಿಸುವ ಮೂಲಕ ಪ್ರತೀಕಾರ ತೀರಿಸಿಕೊಂಡಿದೆ.

Advertisement

ಸೋಮವಾರ ಭಯೋತ್ಪಾದಕರು ಸೋಮವಾರ (ಅ.28) ಗಡಿ ನಿಯಂತ್ರಣ ರೇಖೆ ಸಮೀಪ ಸೇನಾ ಬೆಂಗಾವಲು ಪಡೆಯ ಆಂಬುಲೆನ್ಸ್‌ ಮೇಲೆ  ಗುಂಡಿನ ದಾಳಿ ನಡೆಸಿದ್ದ ನಂತರ ಎನ್‌ ಕೌಂಟರ್‌ ಆರಂಭವಾಗಿತ್ತು. ಸೇನೆಯ ತೀವ್ರ ಕಾರ್ಯಾಚರಣೆಯಲ್ಲಿ ಸಂಜೆ ವೇಳೆ ಓರ್ವ ಉ*ಗ್ರ ಹತನಾಗಿದ್ದ. ಇನ್ನುಳಿದ ಇಬ್ಬರು ಭ*ಯೋತ್ಪಾದಕರನ್ನು ಮಂಗಳವಾರ ಜೋಗ್ವಾನ್‌ ಗ್ರಾಮದ ಅಸ್ಸಾನ ದೇವಸ್ಥಾನದ ಬಳಿ ಗುಂಡಿನ ದಾಳಿಗೆ ಬಲಿಯಾಗಿರುವುದಾಗಿ ವರದಿ ವಿವರಿಸಿದೆ.

ಸೇನೆ ಮತ್ತು ಪೊಲೀಸರ ಜಂಟಿ ಕಾರ್ಯಾಚರಣೆ ವೇಳೆ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಸತತ 2ಗಂಟೆಗಳ ಕಾಲದ ಗುಂಡಿನ ಚಕಮಕಿಯ ನಂತರ ಇಬ್ಬರು ಉ*ಗ್ರರನ್ನು ಹೊಡೆದುರುಳಿಸಲಾಗಿದೆ ಎಂದು ಸೇನೆ ತಿಳಿಸಿದೆ.

ಉ*ಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ವಿಶೇಷ ಪಡೆ, ನ್ಯಾಷನಲ್‌ ಸೆಕ್ಯುರಿಟಿ ಗಾರ್ಡ್‌(NSG)‌ ಕಮಾಂಡೋಸ್ ಜತೆಗೆ ವಿಮಾನ, ಹೆಲಿಕಾಪ್ಟರ್‌ ಮತ್ತು ಡ್ರೋನ್‌ ಬಳಕೆ ಮಾಡಲಾಗಿತ್ತು ಎಂದು ವರದಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next