Advertisement

ಗಡಿಯಲ್ಲಿ ಇಂದು ಕೂಡ ಗುಂಡಿನ ಮೊರೆತ: ಮೂವರು ಉಗ್ರರನ್ನು ಹೊಡೆದುರುಳಿಸಿದ ಭದ್ರತಾಪಡೆಗಳು

12:59 PM Jul 18, 2020 | Mithun PG |

ಜಮ್ಮು ಕಾಶ್ಮೀರ: ಗಡಿಯಲ್ಲಿ ಇಂದು ಕೂಡ ಗುಂಡಿನ ಮೊರೆತ ಕೇಳಿಬಂದಿದ್ದು ಶೋಪಿಯಾನ್ ಜಿಲ್ಲೆಯ ಗ್ರಾಮವೊಂದರಲ್ಲಿ ಮೂವರು ಉಗ್ರರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ.

Advertisement

ಶನಿವಾರ (ಇಂದು) ಮುಂಂಜಾನೆ ಅಂಶಿಪೋರಾ ಪ್ರದೇಶದಲ್ಲಿ ಈ ಎನ್ ಕೌಂಟರ್ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಉಗ್ರರು ಅಡಗಿರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಭದ್ರತಾ ಪಡೆಗಳ ಮೇಲೆ ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಪರಿಣಾಮವಾಗಿ  ಎನ್’ಕೌಂಟರ್ ಆರಂಭವಾಗಿದ್ದು, ಇದೀಗ ಮೂವರು ಉಗ್ರರನ್ನು ಹತ್ಯೆ ಮಾಡಿದೆ ಎಂದು ವರದಿಗಳು ತಿಳಿಸಿವೆ.

ಪ್ರಸ್ತುತ ಸ್ಥಳದಲ್ಲಿ ಕಾರ್ಯಾಚರಣೆ ಮುಂದುವರೆದಿದ್ದು, ಮತ್ತಷ್ಟು ಉಗ್ರರು ಅಡಗಿ ಕುಳಿತಿರುವ ಶಂಕೆಗಳು ವ್ಯಕ್ತವಾಗಿವೆ.

ಶುಕ್ರವಾರವೂ ಕೂಡ ದಕ್ಷಿಣ ಕಾಶ್ಮೀರದ ಕುಲ್ಗಾಂ ಜಿಲ್ಲೆಯಲ್ಲಿ ಮೂವರು ಉಗ್ರರರನ್ನು ಎನ್ ಕೌಂಟರ್ ಮೂಲಕ ಸದೆಬಡಿಯಲಾಗಿತ್ತು. ಇದರಲ್ಲಿ ಐಇಡಿ ಸ್ಪೋಟಕ ತಯಾರಿಕೆಯಲ್ಲಿ ಪರಿಣಿತನಾಗಿದ್ದ ಜೈಷೇ ಏ ಮೊಹಮ್ಮದ್ ಸಂಘಟನೆಯ ಕಮಾಂಡರ್ ಕೂಡ ಹತನಾಗಿದ್ದ.

ಭದ್ರತಾ ಪಡೆಗಳು ಕೆಲವು ಉಗ್ರರ ಪಟ್ಟಿಯನ್ನು ಸಿದ್ದಪಡಿಸಿದ್ದು ಮುಂದಿನ ದಿನಗಳಲ್ಲಿ ಇವರನ್ನು ಕೂಡ ಪತ್ತೆಹಚ್ಚಲಾಗುವುದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

ಜೂನ್ ತಿಂಗಳಿನಿಂದ ಭದ್ರತಾ ಪಡೆಗಳು 48 ಉಗ್ರರನ್ನು ಎನ್ ಕೌಂಟರ್ ಮೂಲಕ ಹತ್ಯೆ ಮಾಡಿದ್ದು ಇವರಲ್ಲಿ ಅನೇಕರು ದಕ್ಷಿಣ ಕಾಶ್ಮೀರದಲ್ಲಿ ಅಡಗಿದ್ದರು ಎಂದು ತಿಳಿದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next