ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿರುವ ರಾಜ್ಯದ 3 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಮುಹೂರ್ತ ನಿಗದಿ ಪಡಿಸಲು ಚುನಾವಣ ಆಯೋಗ ಅಂತಿಮ ಹಂತದ ತಯಾರಿ ಮಾಡಿಕೊಂಡಿದ್ದು, ಈ ವಾರವೇ ವೇಳಾ ಪಟ್ಟಿ ಘೋಷಣೆಯಾಗುವ ಸಾಧ್ಯತೆ ಇದೆ.
ಈ ಮಧ್ಯೆ ರಾಜಕೀಯ ಪಕ್ಷಗಳು, ಆಕಾಂಕ್ಷಿಗಳಲ್ಲೂ ಹುರುಪು ಹೆಚ್ಚುತ್ತಿದೆ.ಕಳೆದ ಎಪ್ರಿಲ್-ಮೇ ತಿಂಗಳಲ್ಲಿ ನಡೆದ ಲೋಕಸಭಾ ಚುನಾವಣೆ ವೇಳೆ ಮಾಜಿ ಸಿಎಂಗಳಾದ ಎಚ್.ಡಿ.ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ ಹಾಗೂ ಶಾಸಕರಾಗಿದ್ದ ಇ. ತುಕಾರಾಂ ಅವರು ಗೆದ್ದು ಸಂಸದರಾಗಿದ್ದಾರೆ.
ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿರುವುದರಿಂದ ಚನ್ನಪಟ್ಟಣ, ಶಿಗ್ಗಾಂವಿ ಮತ್ತು ಸಂಡೂರು ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಬೇಕಿದೆ. ದಸರಾ ಅನಂತರ ವೇಳಾಪಟ್ಟಿ ಪ್ರಕಟಿಸಲು ಆಯೋಗ ತಯಾರಿ ಮಾಡಿಕೊಂಡಿದ್ದು, ರಾಜ್ಯ ಮುಖ್ಯ ಚುನಾವಣಾಧಿಕಾರಿಯಿಂದ ಈಗಾಗಲೇ ವರದಿ ಪಡೆದುಕೊಂಡಿದೆ.
ಇದೇ ವಾರ ಉಪ ಸಮರದ ವೇಳಾಪಟ್ಟಿ ಘೋಷಣೆಯಾ ಗುವ ಎಲ್ಲ ಸಾಧ್ಯತೆಗಳೂ ಇದ್ದು, ನವೆಂಬರ್ ತಿಂಗಳ ಕೊನೆಯ ವಾರದಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ. ಇದೇ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ದಕ್ಷಿಣದ ರಾಜ್ಯಗಳೊಂದಿಗೆ ತೆರಿಗೆ ಪಾಲಿನ ವಿಚಾರವಾಗಿ ನಡೆಸಬೇಕಿದ್ದ ಸಮ್ಮೇಳನವನ್ನೂ ಮುಂದೂಡುವ ಯೋಚನೆಯಲ್ಲಿದೆ ಎನ್ನಲಾಗಿದೆ. ಇದರ ಬೆನ್ನಲ್ಲೇ ರಾಜಕೀಯ ಪಕ್ಷಗಳಲ್ಲೂ ಬಿರುಸಿನ ಚಟುವಟಿಕೆ ಆರಂಭವಾಗಿದ್ದು, ತೆರೆಮರೆಯಲ್ಲೇ ಅಭ್ಯರ್ಥಿ ಆಯ್ಕೆಯ ಕಸರತ್ತುಗಳೂ ನಡೆದಿವೆ.
ನಾನೇ ಅಭ್ಯರ್ಥಿ:
ಎಚ್‌ಡಿಕೆ, ಡಿಕೆಶಿ!
ಮೈಸೂರು/ದಾವಣಗೆರೆ: ಚನ್ನಪಟ್ಟಣ ಉಪ ಚುನಾ ವಣೆಗೆ ಸಂಬಂಧಿಸಿ ಉಪ ಮುಖ್ಯ ಮಂತ್ರಿ ಡಿ.ಕೆ. ಶಿವ ಕುಮಾರ್ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರ ಸ್ವಾಮಿ ಅವರು “ನಾನೇ ಅಭ್ಯರ್ಥಿ’, “ನಾನೇ ಅಭ್ಯರ್ಥಿ’ ಎಂದು ಹೇಳುವ ಮೂಲಕ ಭಾವ ನಾತ್ಮಕ ಅಸ್ತ್ರ ಪ್ರಯೋಗಕ್ಕೆ ಮುಂದಾಗಿ ದ್ದಾರೆ. ಹೀಗಾಗಿ ಚನ್ನಪಟ್ಟಣ ಉಪಕದನದ ಅಭ್ಯರ್ಥಿ ಬಗ್ಗೆ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.