Advertisement

Tragedy: ಮಕ್ಕಳ ಕಳ್ಳರೆಂದು ಗಂಗಾಸಾಗರ ಮೇಳಕ್ಕೆ ತೆರಳುತ್ತಿದ್ದ ಮೂವರು ಸಾಧುಗಳ ಮೇಲೆ ಹಲ್ಲೆ

09:44 AM Jan 13, 2024 | Team Udayavani |

ಪಶ್ಚಿಮ ಬಂಗಾಳ: ಪಶ್ಚಿಮ ಬಂಗಾಳದ ಗಂಗಾಸಾಗರ ಮೇಳಕ್ಕೆ ತೆರಳುತ್ತಿದ್ದ ಉತ್ತರ ಪ್ರದೇಶದ ಮೂವರು ಸಾಧುಗಳನ್ನು ಗುಂಪೊಂದು ಗುರುವಾರ ಸಂಜೆ ಥಳಿಸಿದೆ. ಘಟನೆಯು ಬಂಗಾಳದ ಪುರುಲಿಯಾ ಜಿಲ್ಲೆಯಲ್ಲಿ ನಡೆದಿದ್ದು ಮಕ್ಕಳ ಕಳ್ಳರೆಂದು ಶಂಕಿಸಿ ಗುಂಪೊಂದು ಸಾಧುಗಳ ಮೇಲೆ ಹಲ್ಲೆ ನಡೆಸಿದೆ ಎನ್ನಲಾಗಿದೆ.

Advertisement

ಏನಿದು ಘಟನೆ: ಉತ್ತರ ಪ್ರದೇಶದ ಬರೇಲಿ ನಿವಾಸಿಗಳಾದ ವೃದ್ಧ ಸಂತ ಮತ್ತು ಇಬ್ಬರು ಯುವ ಸಂತರು ಬಾಡಿಗೆ ಕಾರಿನಲ್ಲಿ ಗಂಗಾಸಾಗರಕ್ಕೆ ಹೋಗುತ್ತಿದ್ದರು. ಬಂಕುರಾದಿಂದ ಕಾಶಿಪುರ-ಬಂಕೂರ ರಸ್ತೆ ಮೂಲಕ ಗಂಗಾಸಾಗರ ಕಡೆಗೆ ಹೋಗಬೇಕಿತ್ತು. ಕಾಶೀಪುರದ ಗೌರಂಗಡಿಯಲ್ಲಿ ಸಂತರಿಗೆ ಕೆಲವರು ಸ್ವಲ್ಪ ಹಣವನ್ನು ದಾನ ಮಾಡಿದ್ದಾರೆ. ಅದೇ ರೀತಿ ಮುಂದಿರುವ ಇಟ್ಟಿಗೆ ಕಾರ್ಖಾನೆ ಮಾಲೀಕರು ಹೆಚ್ಚಿನ ದಾನ ಧರ್ಮವನ್ನು ಮಾಡುತ್ತಾರೆ ಅಲ್ಲಿಗೆ ಹೋಗಿ ಎಂದು ಹೇಳಿದ್ದಾರೆ ಆದರೆ ವಿಳಾಸ ಸರಿಯಾಗಿ ಗೊತ್ತಿರದ ಕಾರಣ ರಸ್ತೆಯಲ್ಲಿ ಹೋಗುತಿದ್ದ ಯುವಕರಲ್ಲಿ ಇಟ್ಟಿಗೆ ಕಾರ್ಖಾನೆ ಎಲ್ಲಿ ಎಂದು ಹಿಂದಿಯಲ್ಲಿ ಕೇಳಿದ್ದಾರೆ ಆದರೆ ಅಲ್ಲಿಯ ಜನಕ್ಕೆ ಹಿಂದಿ ಬಾರದೇ ಇರುವುದರಿಂದ ತಪ್ಪಾಗಿ ಗ್ರಹಿಸಿದ ಯುವಕರು ಮಕ್ಕಳ ಕಳ್ಳರೆಂದು ಅನುಮಾನ ಪಟ್ಟು ಗ್ರಾಮದ ಜನರನ್ನು ಒಟ್ಟು ಮಾಡಿದ್ದಾರೆ.
ಈ ವೇಳೆ ಗ್ರಾಮಸ್ಥರು ಸಾಧುಗಳನ್ನು ಮಕ್ಕಳ ಕಳ್ಳರೆಂದು ಶಂಕಿಸಿ ಸಾಧುಗಳನ್ನು ಕಾಳಿ ದೇವಸ್ಥಾನದ ಬಳಿ ಕರೆದುಕೊಂಡು ಹೋಗಿ ಥಳಿಸಿದ್ದಾರೆ ಅಲ್ಲದೆ ವಾಹನವನ್ನೂ ಧ್ವಂಸಗೊಳಿಸಿದರು.

ಈ ನಡುವೆ ಆ ಗ್ರಾಮದ ಹಲವು ಯುವಕರು ಮೂವರು ಸಾಧುಗಳನ್ನು ರಕ್ಷಣೆ ಮಾಡಿ ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಇದಾದ ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಮೂವರು ಸಾಧುಗಳನ್ನು ರಕ್ಷಣೆ ಮಾಡಿ ಠಾಣೆಗೆ ಕರೆದುಕೊಂಡು ಹೋಗಿ ದಾಖಲೆಗಳನ್ನು ಪರಿಶೀಲನೆ ನಡೆಸಿದಾಗ ಅವರು ಗಂಗಾಸಾಗರ ಮೇಳಕ್ಕೆ ತೆರಳುತ್ತಿರುವುದು ಸತ್ಯವೆಂದು ತಿಳಿಯಲಾಗಿದೆ ಬಳಿಕ ಪೊಲೀಸರು ಗಾಯಗೊಂಡ ಸಾಧುಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಕಳುಹಿಸಿಕೊಟ್ಟಿದ್ದಾರೆ.

ಬಿಜೆಪಿ ಆಕ್ರೋಶ:
ಇತ್ತ ಸಾಧುಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ವಿಚಾರ ಗೊತ್ತಾಗುತ್ತಿದ್ದಂತೆ ಪಶ್ಚಿಮ ಬಂಗಾಳ ಸರಕಾರದ ವಿರುದ್ಧ ಕಿಡಿಕಾರಿದ್ದಾರೆ. ಟ್ವೀಟ್ ಮೂಲಕ ಮಮತಾ ಸರಕಾರದ ವಿರುದ್ಧ ಕಿಡಿಕಾರಿದ್ದು ಪಶ್ಚಿಮ ಬಂಗಾಳದ ಆಡಳಿತದಲ್ಲಿ ಷಹಜಹಾನ್ ಶೇಖ್‌ನಂತಹ ಭಯೋತ್ಪಾದಕರಿಗೆ ರಕ್ಷಣೆ ಸಿಗುತ್ತದೆ. ಇಲ್ಲಿ ಸಾಧುಗಳನ್ನು ಬಹಿರಂಗವಾಗಿ ಕೊಲ್ಲುವ ಪ್ರಯತ್ನಗಳು ನಡೆಯುತ್ತಿವೆ. ಪಶ್ಚಿಮ ಬಂಗಾಳದಲ್ಲಿ ಹಿಂದೂ ಆಗಿರುವುದೇ ದೊಡ್ಡ ಅಪರಾಧ ಎಂದು ಬರೆದುಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next