Advertisement

ಸೋಂಕಿಗೆ ಮಹಿಳೆ ಬಲಿ: 503ಕ್ಕೇರಿದ ರಾಜ್ಯದ ಸೋಂಕಿತರ ಸಂಖ್ಯೆ

08:24 AM Apr 27, 2020 | Hari Prasad |

ಬೆಂಗಳೂರು: ರಾಜ್ಯದಲ್ಲಿ ಕೋವಿಡ್-19 ಸೋಂಕಿನ ಕಾರಣ ಮತ್ತೊಂದು ಸಾವಾಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ 45 ವರ್ಷದ ಮಹಿಳೆಯೋರ್ವರು ಮೃತಪಟ್ಟಿದ್ದಾರೆ.

Advertisement

ಸೋಂಕಿತ ಸಂಖ್ಯೆ 465 ಆಗಿದ್ದ ಈ ಮಹಿಳೆ ಕಳೆದ 24ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಏಪ್ರಿಲ್ 25ರಂದು ಐಸಿಯು ಗೆ ಶಿಫ್ಟ್ ಮಾಡಿ ಚಿಕಿತ್ಸೆ ಕೊಡಲಾಗುತ್ತಿತ್ತು.

ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಇಂದು ಮೃಪಟ್ಟಿದ್ದಾರೆ. ಇದಿರಂದ ರಾಜ್ಯದಲ್ಲಿ ಕೋವಿಡ್-19 ಸೋಂಕಿನ ಕಾರಣದಿಂದ ಸಾವನ್ನಪ್ಪಿದ್ದವರ ಸಂಖ್ಯೆ 19ಕ್ಕೆ ಏರಿಕೆಯಾಗಿದೆ.

503ಕ್ಕೇರಿದ ಸೋಂಕಿತರ ಸಂಖ್ಯೆ

ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ ಒಟ್ಟು ಮೂರು ಹೊಸ ಕೋವಿಡ್-19 ಸೋಂಕು ಪ್ರಕರಣಗಳು ದೃಢವಾಗಿದೆ. ಮೊದಲ ಪ್ರಕರಣ ದಕ್ಷಿಣ ಕನ್ನಡದಲ್ಲಿ ದೃಢವಾಗಿದ್ದರೆ, ಉಳಿದೆರಡು ಸೋಂಕು ಪ್ರಕರಣಗಳು ಕಲಬುರಗಿಯಲ್ಲಿ ದೃಢವಾಗಿದೆ.

Advertisement

ಸೋಂಕಿತ ಸಂಖ್ಯೆ 422ರ ಸಂಪರ್ಕದಿಂದ 65 ವರ್ಷದ ಮಹಿಳೆಗೆ ಸೋಂಕು ತಾಗಿದ್ದರೆ, ಸೋಂಕಿತ ಸಂಖ್ಯೆ 425ರ ದ್ವಿತೀಯ ಸಂಪರ್ಕದಿಂದ ಏಳು ವರ್ಷದ ಮಗುವಿಗೆ ಸೋಂಕು ದೃಢವಾಗಿದೆ.

ಇದರಿಂದ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 503ಕ್ಕೆ ಏರಿಕೆಯಾಗಿದೆ. ಅವರಲ್ಲಿ 19 ಸೋಂಕಿತರು ಸಾವನ್ನಪ್ಪಿದರೆ, 182 ಮಂದಿ ಗುಣಮುಖರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next