ಶ್ರೀನಗರ: ಮೂವರು ಲಷ್ಕರ್ ಎ ತೋಯ್ಬಾದ ಉಗ್ರರನ್ನು ಭದ್ರತಾ ಪಡೆ ಸಿಬ್ಬಂದಿಗಳು ಎನ್ ಕೌಂಟರ್ ಮಾಡಿರುವ ಘಟನೆ ಜಮ್ಮು ಕಾಶ್ಮೀರದ ಶೋಪಿಯಾನ್ ನಲ್ಲಿ ಮಂಗಳವಾರ (ಡಿ.20 ರಂದು) ನಡೆದಿದೆ ಎಂದು ವರದಿಯಾಗಿದೆ.
ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಮುಂಜ್ ಮಾರ್ಗ್ ಪ್ರದೇಶದಲ್ಲಿ ಮಂಗಳವಾರ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಈ ಎನ್‌ಕೌಂಟರ್ ನಡೆದಿದೆ.
ಮೂವರರಲ್ಲಿ ಇಬ್ಬರನ್ನು ಗುರುತಿಸಲಾಗಿದ್ದು, ಶೋಪಿಯಾನ್ ಮೂಲದ ಉಗ್ರ ಕಾಶ್ಮೀರಿ ಪಂಡಿತ್ ಕೃಷ್ಣ ಪುರಾಣ ಅವರ ಹತ್ಯೆಯಲ್ಲಿ ಭಾಗಿಯಾದ ಲತೀಫ್ ಲೋನ್ ಮತ್ತೊಬ್ಬ ಅನಂತನಾಗ್‌ನ ಉಮರ್ ನಜೀರ್ ಎಂದು ಗುರುತಿಸಲಾಗಿದೆ. 1 ಎಕೆ 47 ರೈಫಲ್ ಮತ್ತು 2 ಪಿಸ್ತೂಲನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಕಾಶ್ಮೀರ ಎಡಿಜಿಪಿ ಹೇಳಿದ್ದಾರೆ.
ಉಗ್ರರು ಅಡಗಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಹುಡುಕಾಟ ಆರಂಭಿಸಲಾಗಿತ್ತು. ಬಳಿಕ ಹುಡುಕಾಟ ಕಾರ್ಯಚರಣೆ ಎನ್ ಕೌಂಟರ್ ಗೆ ತಿರುಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.