Advertisement

Jaipur: ಶ್ರೀ ಕೃಷ್ಣ ಬಲರಾಮ ಗೋ ಸೇವಾ ಟ್ರಸ್ಟ್‌ನಿಂದ ಪರಿಸರಸ್ನೇಹಿ ಗೋಮಯದಿಂದ 3 ಲಕ್ಷ ದೀಪ

11:42 PM Nov 12, 2023 | Team Udayavani |

ಜೈಪುರ: ರಾಜಸ್ಥಾನ ರಾಜಧಾನಿ ಜೈಪುರದ ಶ್ರೀ ಕೃಷ್ಣ ಬಲರಾಮ ಗೋ ಸೇವಾ ಟ್ರಸ್ಟ್‌ ದೀಪಾವಳಿಗಾಗಿ ಗೋಮಯ ಬಳಸಿ 3 ಲಕ್ಷಕ್ಕೂ ಅಧಿಕ ಪರಿಸರಸ್ನೇಹಿ ದೀಪಗಳನ್ನು ತಯಾರಿಸಿದೆ. ಹರೇ ಕೃಷ್ಣ ಮೂಮೆಂಟ್‌ ಅಡಿಯಲ್ಲಿ ಈ ಟ್ರಸ್ಟ್‌ ಕಾರ್ಯನಿರ್ವಹಿಸುತ್ತಿದೆ. ಜೈಪುರದ ಸಮೀಪವಿರುವ ಟ್ರಸ್ಟ್‌ನ ಹಿಂಗೋನಿಯಾ ಗೋಶಾಲೆಯಲ್ಲಿ 13,000ಕ್ಕೂ ಹೆಚ್ಚು ಗೋವುಗಳಿವೆ.

Advertisement

“ಹಿಟ್ಟು, ಮರದ ಪುಡಿ ಮತ್ತು ಬೆಲ್ಲದ ಪುಡಿಯನ್ನು ನಿರ್ದಿಷ್ಟ ಪ್ರಮಾಣದಲ್ಲಿ ಗೋಮಯದೊಂದಿಗೆ ಬೆರೆಸಿ ದೀಪಗಳನ್ನು ತಯಾರಿಸಲಾಗಿದೆ. ದೀಪಾವಳಿ ಅಂಗವಾಗಿ ನಮ್ಮ ಸ್ವಯಂ ಸೇವಕರು ಶ್ರಮವಹಿಸಿ, 3 ಲಕ್ಷಕ್ಕೂ ಅಧಿಕ ದೀಪಗಳನ್ನು ತಯಾರಿಸಿದ್ದಾರೆ” ಎಂದು ಹರೇ ಕೃಷ್ಣ ಮೂಮೆಂಟ್‌ನ ವಕ್ತಾರರು ತಿಳಿಸಿದ್ದಾರೆ.

“ಮಿಶ್ರಣಕ್ಕೆ ಹೈಡ್ರಾಲಿಕ್‌ ಸಹಾಯದಿಂದ ಕಾರ್ಯನಿರ್ವಹಿಸುವ ಯಂತ್ರದ ಸಹಾಯದಿಂದ ಸುಂದರವಾದ ಆಕಾರ ನೀಡಲಾಯಿತು. ಒಂದು ನಿಮಿಷಕ್ಕೆ ಸುಮಾರು 11 ದೀಪಗಳನ್ನು ಸಿದ್ಧಪಡಿಸಲಾಗಿದೆ. ಅವು ಗಳನ್ನು ಭಕ್ತರಿಗೆ, ಹಲವನ್ನು ರಿಯಾಯಿತಿ ಬೆಲೆಗೆ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಯಿತು” ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next