ಕಾಶ್ಮೀರ: ಭದ್ರತಾ ಪಡೆಯ ಮಹತ್ವದ ಕಾರ್ಯಾಚರಣೆಯಲ್ಲಿ ಜೈಶ್ ಇ ಮೊಹಮ್ಮದ್ ಸಂಘಟನೆಯ ಮೂವರು ಉಗ್ರರನ್ನು ಹೊಡೆದುರುಳಿಸಿರುವ ಘಟನೆ ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಚಾಂದ್ ಗಾಮ್ ಗ್ರಾಮದಲ್ಲಿ ಬುಧವಾರ(ಜನವರಿ 05) ಬೆಳಗ್ಗೆ ನಡೆದಿದೆ.
ಇದನ್ನೂ ಓದಿ:ಭಾರತ;24ಗಂಟೆಯಲ್ಲಿ ಶೇ.53ರಷ್ಟು ಕೋವಿಡ್ ಹೆಚ್ಚಳ; 58,097 ಪ್ರಕರಣ ಪತ್ತೆ, 2,135 ಒಮಿಕ್ರಾನ್
ಪುಲ್ವಾಮಾದ ಚಾಂದ್ ಗಾಮ್ ನಲ್ಲಿ ಭದ್ರತಾ ಪಡೆಯ ಎನ್ ಕೌಂಟರ್ ನಲ್ಲಿ ಮೂವರು ಜೈಶ್ ಇ ಮೊಹಮ್ಮದ್ ಸಂಘಟನೆಯ ಮೂವರು ಉಗ್ರರು ಹತ್ಯೆಗೀಡಾಗಿದ್ದಾರೆ ಎಂದು ಕಾಶ್ಮೀರ ವಲಯದ ಐಜಿಪಿ ವಿಜಯ್ ಕುಮಾರ್ ತಿಳಿಸಿದ್ದಾರೆ.
ಮೂವರಲ್ಲಿ ಒಬ್ಬಾತ ಪಾಕಿಸ್ತಾನದ ಪ್ರಜೆಯಾಗಿದ್ದು, ಘಟನಾ ಸ್ಥಳದಲ್ಲಿ ಒಂದು ಎಕೆ 47 ರೈಫಲ್, ಶಸ್ತ್ರಾಸ್ತ್ರ, ಸ್ಫೋಟಕಗಳನ್ನು ವಶಪಡಿಸಿಕೊಂಡಿರುವುದಾಗಿ ವಿವರ ನೀಡಿದ್ದಾರೆ.
ಚಾಂದ್ ಗಾಮ್ ಗ್ರಾಮದಲ್ಲಿ ಉಗ್ರರು ಅಡಗಿದ್ದಾರೆಂಬ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಭದ್ರತಾಪಡೆ ಮತ್ತು ಪೊಲೀಸರು ಜಂಟಿಯಾಗಿ ಮಧ್ಯರಾತ್ರಿ ಕಾರ್ಯಾಚರಣೆ ನಡೆಸಲಾಗಿದ್ದು, ಈ ವೇಳೆ ಉಗ್ರರಿಗೆ ಶರಣಾಗಲು ಸೂಚಿಸಲಾಗಿತ್ತು. ಆದರೆ ಉಗ್ರರು ಗುಂಡಿನ ದಾಳಿ ನಡೆಸಿದ ಪರಿಣಾಮ ಪ್ರತಿಯಾಗಿ ಭದ್ರತಾಪಡೆ ದಾಳಿಗೆ ಮೂವರು ಉಗ್ರರು ಸಾವನ್ನಪ್ಪಿರುವುದಾಗಿ ಐಜಿಪಿ ತಿಳಿಸಿದ್ದಾರೆ.