Advertisement

ನಿರಂತರ 3ನೇ ಬಾರಿ ಶ್ರೀಕಾಂತ್‌ ಆಸ್ಟ್ರೇಲಿಯ ಸೂಪರ್‌ ಸೀರಿಸ್‌ ಫೈನಲಿಗೆ

10:43 AM Jun 24, 2017 | udayavani editorial |

ಸಿಡ್ನಿ : ಭಾರತದ ಮುಂಚೂಣಿಯ ಶಟ್ಲರ್‌ ಕೆ ಶ್ರೀಕಾಂತ್‌ ಅವರಿಂದು ನಿರಂತರ ಮೂರನೇ ಬಾರಿಗೆ ಆಸ್ಟ್ರೇಲಿಯನ್‌ ಓಪನ್‌ ಸೂಪರ್‌ ಸೀರಿಸ್‌ ಫೈನಲ್‌ ಪ್ರವೇಶಿಸುವ ಮೂಲಕ ಹ್ಯಾಟ್ರಿಕ್‌ ಸಾಧಿಸಿದ್ದಾರೆ. 

Advertisement

ಸೆಮಿಫೈನಲ್‌ ಪಂದ್ಯದಲ್ಲಿ ಶ್ರೀಕಾಂತ್‌ ಅವರು ಯೂಕಿ ಶೀ ಅವರನ್ನು 21-10, 21-14 ಸೆಟ್ಟುಗಳ ಅಂತರದಲ್ಲಿ  ಸೋಲಿಸಿದರು. 

ಶ್ರೀಕಾಂತ್‌ ಅವರು ಕೇವಲ 27 ನಿಮಿಷಗಳ ಒಳಗೆ ತಮ್ಮ ಈ ಸೆಮಿ ಫೈನಲ್‌ ಪಂದ್ಯವನ್ನು ಜಯಿಸಿರುವುದು ಇನ್ನೊಂದು ಸಾಧನೆಯಾಗಿದೆ. ಶ್ರೀಕಾಂತ್‌ ಅವರು ಈ ಹಿಂದೆ ಸಿಂಗಾಪುರ ಓಪನ್‌ ಮತ್ತು ಇಂಡೋನೇಶ್ಯ ಓಪನ್‌ನ ಫೈನಲ್‌ ತಲುಪಿದ ಸಾಧನೆ ಮಾಡಿದ್ದರು. ಸಿಂಗಾಪುರದಲ್ಲಿ ಅವರು ರನ್ನರ್‌ ಅಪ್‌ ಆಗಿದ್ದರೆ ಇಂಡೋನೇಶ್ಯದಲ್ಲಿ ಪ್ರಶಸ್ತಿ ಗೆದ್ದಿದ್ದರು. 

ಶ್ರೀಕಾಂತ್‌ ಅವರ ಈ ಹಿಂದಿನ ಉತ್ಕೃಷ್ಟತೆ ಎಂದರೆ 2016ರ ಸೆಮಿ ಫೈನಲ್‌ ಪ್ರವೇಶ. 

ಶ್ರೀಕಾಂತ್‌ ಅವರು ಅರ್ಹತಾ ಆಟಗಾರ ಶಾವೋ ಯೂ ಅವರನ್ನು ಸೋಲಿಸಿದ ಬಳಿಕ ವಿಶ್ವದ ನಂಬರ್‌ 1 ಆಟಗಾರ ಸನ್‌ ವಾನ್‌ ಹೋ ಅವರನ್ನು ಮತ್ತು ಪ್ರಣೀತ್‌ ಅವರನ್ನು ಅನುಕ್ರಮವಾಗಿ ಸೋಲಿಸಿದ್ದರು. 

Advertisement

ಶ್ರೀಕಾಂತ್‌ ಅವರು ಈಗಿನ್ನು ಫೈನಲ್‌ ಪಂದ್ಯದಲ್ಲಿ ಚೀನದ ಚೆನ್‌ ಲಾಂಗ್‌ ಮತ್ತು ಕೊರಿಯದ ಲೀ ಹ್ಯೂನ್‌ ಇಲ್‌ ನಡುವಿನ ಸೆಮಿ ಫೈನಲ್‌ ಪಂದ್ಯದ ವಿಜೇತರನ್ನು ಎದುರಿಸುವರು. 

Advertisement

Udayavani is now on Telegram. Click here to join our channel and stay updated with the latest news.

Next