Advertisement

Thomas Cup: ಬ್ಯಾಡ್ಮಿಂಟನ್‌; ಭಾರತದ ಆಟಕ್ಕೆ ತೆರೆ

10:59 PM May 02, 2024 | Team Udayavani |

 

Advertisement

ಚೆಂಗ್ಡು (ಚೀನ): ಥಾಮಸ್‌ ಕಪ್‌ ಮತ್ತು ಉಬೆರ್‌ ಕಪ್‌ ಬ್ಯಾಡ್ಮಿಂಟನ್‌ ಪಂದ್ಯಾವಳಿಯಲ್ಲಿ ಭಾರತದ ಆಟ ಕ್ವಾರ್ಟರ್‌ ಫೈನಲ್‌ನಲ್ಲಿ ಕೊನೆಗೊಂಡಿದೆ.

ಕಳೆದ ವರ್ಷ ಥಾಮಸ್‌ ಕಪ್‌ ಗೆದ್ದು ಇತಿಹಾಸ ನಿರ್ಮಿಸಿದ ಪುರುಷರ ತಂಡ ಆತಿಥೇಯ ಚೀನ ವಿರುದ್ಧ 1-3 ಅಂತರದ ಸೋಲುಂಡು ಹೊರ ಬಿತ್ತು. ಇದಕ್ಕೂ ಮುನ್ನ ಉಬೆರ್‌ ಕಪ್‌ನಲ್ಲಿ ವನಿತಾ ತಂಡ ಜಪಾನ್‌ ಕೈಯಲ್ಲಿ 0-3 ಅಂತರದ ಸೋಲನುಭವಿಸಿತು.

ಎಚ್‌.ಎಸ್‌. ಪ್ರಣಯ್‌, ಚಿರಾಗ್‌ ಶೆಟ್ಟಿ-ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ ಸೋಲನುಭವಿಸಿದ ಬಳಿಕ ಲಕ್ಷ್ಯ ಸೇನ್‌ ಭಾರತವನ್ನು ಹಳಿಗೆ ಏರಿಸಿದರು. ಅವರು 13-21, 21-8, 21-14ರಿಂದ ಲೀ ಶಿ ಫೆಂಗ್‌ ವಿರುದ್ಧ ಗೆದ್ದು ಬಂದರು. ಆದರೆ ಧ್ರುವ ಕಪಿಲ-ಸಾಯಿ ಪ್ರತೀಕ್‌ ಜೋಡಿ ಯಶಸ್ಸು ಕಾಣಲಿಲ್ಲ.

ಉಬೆರ್‌ ಕಪ್‌ನಲ್ಲಿ ಅಶ್ಮಿತಾ ಚಾಲಿಹಾ 11ನೇ ರ್‍ಯಾಂಕಿಂಗ್‌ನ ಅಯಾ ಒಹೊರಿ ವಿರುದ್ಧ ದಿಟ್ಟ ಹೋರಾಟ ನೀಡಿದ್ದೊಂದೇ ಭಾರತದ ಪಾಲಿನ ಸಮಾಧಾನಕರ ಸಂಗತಿ. ಇದನ್ನು ಅಶ್ಮಿತಾ 10-21, 22-20, 15-21ರಿಂದ ಕಳೆದುಕೊಂಡರು. 20 ವರ್ಷದ ಇಶಾರಾಣಿ ಮಾಜಿ ನಂ.1 ಆಟ ಗಾರ್ತಿ ನೊಜೊಮಿ ಒಕುಹಾರ ವಿರುದ್ಧ 15-21, 12-21 ಅಂತರದ ಸೋಲನುಭವಿಸಿದರು. ಡಬಲ್ಸ್‌ ನಲ್ಲಿ ರಾಷ್ಟ್ರೀಯ ಚಾಂಪಿಯನ್‌ಗಳಾದ ಪ್ರಿಯಾ ಕೆ.-ಶ್ರುತಿ ಮಿಶ್ರಾ 8-21, 9-21ರಿಂದ ವಿಶ್ವದ 4ನೇ ರ್‍ಯಾಂಕಿಂಗ್‌ ಜೋಡಿಯಾದ ನಾಮಿ ಮಟ್ಸುಯಾಮಾ- ಚಿಹಾರು ಶಿಡಾ ಅವರಿಗೆ ಶರಣಾದರು.

Advertisement

ಸಿಂಧು ಅವರ ಅನುಪಸ್ಥಿತಿಯ ಹೊರ ತಾಗಿಯೂ ಲೀಗ್‌ ಹಂತದಲ್ಲಿ ಕೆನಡಾ ಮತ್ತು ಸಿಂಗಾಪುರ ವಿರುದ್ಧ ಭಾರತ ಜಯ ಸಾಧಿಸಿತ್ತು. ಆದರೆ  ಚೀನಕ್ಕೆ ಅಂತಿಮ ಲೀಗ್‌ ಪಂದ್ಯದಲ್ಲಿ ಶರಣಾಗಿತ್ತು. ಭಾರತ ಈವರೆಗೆ ಕೇವಲ 3 ಸಲ ಉಬೆರ್‌ ಕಪ್‌ ಪಂದ್ಯಾವಳಿಯ ಸೆಮಿಫೈನಲ್‌ ತಲುಪಿದೆ. ಕೊನೆಯ ಸಲ ಉಪಾಂತ್ಯ ಕಂಡದ್ದು 2016ರಲ್ಲಿ. ಇದಕ್ಕೂ ಮುನ್ನ 1957 ಮತ್ತು 2014ರಲ್ಲಿ ಸೆಮಿಫೈನಲ್‌ ತನಕ ಸಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next