Advertisement

ಭಾರತೀಯ ಆ್ಯತ್ಲೆಟಿಕ್ಸ್‌ಗೆ 3 ವಿದೇಶಿ ಕೋಚ್‌ಗಳು

12:30 AM Feb 07, 2019 | Team Udayavani |

ಹೊಸದಿಲ್ಲಿ: ಭಾರತೀಯ ಆ್ಯತ್ಲೆಟಿಕ್ಸ್‌ ಫೆಡರೇಶನ್‌ (ಎಎಫ್ಐ) 3 ವಿದೇಶಿ ಕೋಚ್‌ಗಳನ್ನು ನೇಮಕ ಮಾಡಿದೆ. ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್‌) ಟ್ವಿಟರ್‌ನಲ್ಲಿ ಇದನ್ನು ತಿಳಿಸಿದೆ.

Advertisement

ರಾಷ್ಟ್ರೀಯ ಜಾವೆಲಿನ್‌ ಎಸೆತಗಾರರಿಗೆ ಸಹಾಯಕ ಕೋಚ್‌ ಆಗಿ ಜರ್ಮನಿಯ ಬಯೋ ಮೆಕ್ಯಾನಿಕ್‌ ತಜ್ಞ ಡಾ| ಕ್ಲಾಸ್‌ ಬರ್ಟೊನೀಝ್ ಅವರನ್ನು ನೇಮಿಸಿದೆ. ವಿ ಹೊನ್‌ ಪ್ರಧಾನ ಕೋಚ್‌ ಆಗಿ ಉಳಿದುಕೊಂಡಿದ್ದಾರೆ. ಅವರಿಗೆ ಸಹಾಯಕರಾಗಿ ಕ್ಲಾಸ್‌ ಕೆಲಸ ಮಾಡಲಿದ್ದಾರೆ. ಬಹ್ರೈನ್‌ ರಿಲೇ ತಂಡದ ಸಹಾಯಕ ಕೋಚ್‌ ಆಗಿದ್ದ ರಶ್ಯದ ವ್ಯಾಲೆರಿ ಸತ್‌ಶುಕ್‌ ಅವರನ್ನು, 400 ಮೀ. ವಿಭಾಗದ ಮುಖ್ಯ ಕೋಚ್‌ ಗ್ಯಾಲಿನ ಬುಕರಿನ ಅವರಿಗೆ ಸಹಾಯಕರಾಗಿ ನೇಮಕ ಮಾಡಲಾಗಿದೆ.ಬೆಲರೂಸ್‌ನ ಆ್ಯಂಡ್ರಿ ಫಿಲಿಮೊನು ಅವರನ್ನು ಎಎಫ್ಐ ಮತ್ತೆ ಕರೆಸಿಕೊಂಡಿದೆ. 2012ರ ಲಂಡನ್‌ ಒಲಿಂಪಿಕ್ಸ್‌ ಹಾಗೂ 2016ರ ರಿಯೋ ಒಲಿಂಪಿಕ್ಸ್‌ ವೇಳೆ ಅವರು ಭಾರತ ತಂಡದಿಂದ ಬೇರ್ಪಟ್ಟಿದ್ದರು.

ಕ್ಲಾಸ್‌ ಬರ್ಟೊನಿಯೆಟ್‌ ಅವರನ್ನು ಜಾವೆಲಿನ್‌ ಸಹಾಯಕ ಕೋಚ್‌ ಆಗಿ ನೇಮಕ ಮಾಡಿರುವುದು ಪ್ರಮುಖ ಕೋಚ್‌ ವಿ ಹೊನ್‌ ಅವರಿಗೆ ಒತ್ತಡ ಕಡಿಮೆಯಾಗಲಿದ್ದು, ಅವರು ನೀರಜ್‌ ಚೋಪ್ರಾ ಅವರ ಪ್ರದರ್ಶನದ ಮೇಲೆ ಗಮನ ಕೇಂದ್ರೀಕರಿಸಬಹುದಾಗಿದೆ. ಹಿಮಾ ದಾಸ್‌ ಅವರ ತರಬೇತಿಗೆ ಸತ್‌ಶುಕ್‌ ಆಗಮನ ನೆರವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next