Advertisement

ಮೂವರು ಮಾಜಿ ಶಾಸಕರ ನಿಧನ

12:30 AM Feb 21, 2019 | |

ರಾಮದುರ್ಗ: ರಾಮದುರ್ಗ ವಿಧಾನಸಭಾ ಕ್ಷೇತ್ರದ ಮೊದಲ ಮಹಿಳಾ ಶಾಸಕಿ ಹಾಗೂ ಮಾಜಿ ಶಾಸಕ ಅಶೋಕ ಪಟ್ಟಣ ಅವರ ಮಾತೋಶ್ರೀ ಶಾರದಮ್ಮ ಮಹಾದೇವಪ್ಪ ಪಟ್ಟಣ (97) ಬುಧವಾರ ನಿಧನರಾದರು.

Advertisement

ಅನಾರೋಗ್ಯದ ಸಮಸ್ಯೆ ಎದುರಿಸುತ್ತಿದ್ದ ಶಾರದಮ್ಮ ಅವರನ್ನು ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಗೆ ದಾಖಲಿಸಲಾಗಿತ್ತು. 1967ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಶಾರದಮ್ಮ ಕಾಂಗ್ರೆಸ್‌ ನಿಂದ ಸ್ಪ ರ್ಧಿಸಿ 1967-72ರವರೆಗೆ ಶಾಸಕಿಯಾಗಿ ಸೇವೆ ಸಲ್ಲಿಸಿದ್ದರು. ಪತಿ, ಸ್ವಾತಂತ್ರÂ ಹೋರಾಟಗಾರ, ಮಾಜಿ ಶಾಸಕ ಡಾ| ಮಹಾದೇವಪ್ಪ ಶಿವಬಸಪ್ಪ ಪಟ್ಟಣ ಅವರು ಸಹ ಇತ್ತೀಚೆಗಷ್ಟೆ ನಿಧನರಾಗಿದ್ದಾರೆ.

ಮಂಡ್ಯ ಜಿಲ್ಲೆಯ ಮೊದಲ ಮಹಿಳಾ ಶಾಸಕಿ
ಶ್ರೀರಂಗಪಟ್ಟಣ:
ಮಂಡ್ಯ ಜಿಲ್ಲೆಯ ಮೊದಲ ಮಹಿಳಾ ಶಾಸಕಿಯಾಗಿದ್ದ ದಮಯಂತಿ ಬೋರೇಗೌಡ (92) ಅನಾರೋಗ್ಯದಿಂದ ಬುಧವಾರ ನಿಧನರಾದರು. ಮೃತರು 1972 ರಿಂದ 1977 ಹಾಗೂ 1989 ರಿಂದ 1994ರ ಅವಧಿಯಲ್ಲಿ 2 ಬಾರಿ ಶ್ರೀರಂಗಪಟ್ಟಣ ವಿಧಾನ ಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಶಾಸಕಿಯಾಗಿ ಚುನಾಯಿತ ರಾಗಿದ್ದರು. ಕೊಳ್ಳೇಗಾಲ ತಾಲೂಕು ಕಾಮಗೆರೆ ಗ್ರಾಮದಲ್ಲಿ 1928ರಲ್ಲಿ ಜನಿಸಿದ್ದ ಇವರು, 1946ರಲ್ಲಿ ಶ್ರೀರಂಗಪಟ್ಟಣ ತಾಲೂಕು ಬೊಮ್ಮೂರು ಅಗ್ರಹಾರದ ಖ್ಯಾತ ವಕೀಲ ಬೋರೇಗೌಡ ಅವರನ್ನು ವಿವಾಹವಾಗಿದ್ದರು. 1957ರಲ್ಲೇ ಪಾಂಡವಪುರ ವಿಧಾನ ಸಭಾ ಕ್ಷೇತ್ರದಿಂದ ಒಮ್ಮೆ ಸ್ಪರ್ಧಿಸಿ ಕಡಿಮೆ ಅಂತರದಲ್ಲಿ ಪರಾಭವಗೊಂಡಿದ್ದರು.

ಬಸಗೌಡ ಅಪ್ಪಯ್ಯಗೌಡಾ ಪಾಟೀಲ
ಸಂಕೇಶ್ವರ: ವಿಧಾನ ಪರಿಷತ್‌ ಮಾಜಿ ಸದಸ್ಯ, ಶತಾಯುಷಿ, ಬಸಗೌಡ ಅಪ್ಪಯ್ಯಗೌಡಾ ಪಾಟೀಲ (101) ಬುಧವಾರ ನಿಧನರಾದರು. ಮಾಜಿ ಸಚಿವ ಎ.ಬಿ.ಪಾಟೀಲ ಅವರ ತಂದೆ ಹಾಗೂ ಹುಕ್ಕೇರಿ ತಾಲೂಕಿನ ಅಮ್ಮನಭಾವಿ ಗ್ರಾಮದವರಾದ ಇವರು ಶಿಕ್ಷಣ ಪ್ರೇಮಿ, ಸಹಕಾರಿ ಶಿಲ್ಪಿಯಾಗಿದ್ದರು.

ಸಂಕೇಶ್ವರ ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆಯ ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಮೃತರ ಅಂತ್ಯಕ್ರಿಯೆ ಗುರುವಾರ 12 ಗಂಟೆಗೆ ಸ್ವಗ್ರಾಮ ಅಮ್ಮಿನಭಾವಿಯಲ್ಲಿ ನಡೆಯಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next