ಮಂಡ್ಯ: ಕಾರೊಂದು ವಿದ್ಯುತ್ ಕಂಬಕ್ಕೆ ಅಪ್ಪಳಿಸಿ ಅವಘಡ ಸಂಭವಿಸಿದ್ದು, ಈ ವೇಳೆ ರಕ್ಷಣೆಗೆಂದು ಧಾವಿಸಿ ಬಂದ ಮೂವರು ದಾರುಣವಾಗಿ ವಿದ್ಯುತ್ ಶಾಕ್‌ಗೆ ಬಲಿಯಾದ ಘಟನೆ ಮದ್ದೂರಿನ ಮಣಿಗೆರೆ ಬಳಿ ಬುಧವಾರ ರಾತ್ರಿ ನಡೆದಿದೆ.
ಮೃತ ದುರ್‌ದೈವಿಗಳು ಮಣಿಗೆರೆ ಗ್ರಾಮದ ದೇವರಾಜ್(31) ಬಿದರಹೊಸಳ್ಳಿಯ ಪ್ರಸನ್ನ (45) ಮತ್ತು ಪ್ರದೀಪ್ (25) ಎನ್ನುವವರಾಗಿದ್ದಾರೆ.
ಅಪಘಾತದಬಳಿಕ ಗಾಯಾಳುಗಳ ಚೀರಾಟ ಕೇಳಿ ರಕ್ಷಣೆಗೆ ಧಾವಿಸಿದ್ದಾರೆ, ಕತ್ತಲು ಆವರಿಸಿಕೊಂಡಿದ್ದರಿಂದ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಸ್ಥಳದಲ್ಲೆ ದಾರುಣವಾಗಿ ಸಾವನ್ನಪ್ಪಿದ್ದಾರೆ.
ಘಟನೆ ನಡೆದ ಬಳಿಕ ಸೆಸ್ಕಾಂಗೆ ವಿಚಾರ ತಿಳಿಸಿ ವಿದ್ಯುತ್ ಸರಬರಾಜು ಸ್ಥಗಿತ ಗೊಳಿಸಿ ಕಾರಿನಲ್ಲಿದ್ದ ಗಾಯಾಳುಗಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.