Advertisement
ಭಾರತೀಯ ದಂಡ ಸಂಹಿತೆ (ಐಪಿಸಿ)ಯ ಬದಲಿಗೆ ಭಾರ ತೀಯ ನ್ಯಾಯ ಸಂಹಿತೆ, ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಬದಲಿಗೆ ಭಾರ ತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಸಾಕ್ಷ್ಯ ಕಾಯ್ದೆಯ ಬದಲಿಗೆ ಭಾರತೀಯ ಸಾಕ್ಷ್ಯ ಅಧಿನಿಯಮ ಜಾರಿಗೆ ಬರಲಿವೆ.
ವಿಚಾರಣೆ ಮುಗಿದ 45 ದಿನಗಳ ಒಳಗೆ ಅಪರಾಧಿಗಳಿಗೆ ಶಿಕ್ಷೆ ಘೋಷಣೆ ಮಾಡಬೇಕು. ಅಲ್ಲದೆ ಮೊದಲ ವಿಚಾರಣೆ ನಡೆದ 60 ದಿನಗಳ ಒಳಗೆ ಆರೋಪಗಳನ್ನು ಪಟ್ಟಿ ಮಾಡಬೇಕು ಎಂಬುದನ್ನು ಹೊಸ ಕಾನೂನುಗಳಲ್ಲಿ ಸೇರ್ಪಡೆ ಮಾಡಲಾಗಿದೆ. ಇದು ತ್ವರಿತ ನ್ಯಾಯದಾನಕ್ಕೆ ಸಹಾಯಕವಾಗಲಿದೆ. ಜತೆಗೆ ಅತ್ಯಾಚಾರಕ್ಕೆ ತುತ್ತಾದ ಮಹಿಳೆಯ ಹೇಳಿಕೆಯನ್ನು ಮಹಿಳಾ ಪೊಲೀಸರೇ ದಾಖಲಿಸಬೇಕು ಎಂಬುದನ್ನು ಇದರಲ್ಲಿ ಸೇರಿಸಲಾಗಿದೆ. ಐಪಿಸಿಯಲ್ಲಿ ದಾಖಲಾದ ಅಪರಾಧಗಳಾದ ಮದುವೆಯಾಗುವುದಾಗಿ ಸುಳ್ಳು ಭರವಸೆ, ಅಪ್ರಾಪ್ತ ವಯಸ್ಸಿನವರ ಮೇಲೆ ಸಾಮೂಹಿಕ ಅತ್ಯಾಚಾರ, ಗುಂಪುಹಲ್ಲೆ ಮತ್ತು ಸರಗಳ್ಳತನಗಳನ್ನು ಅಪರಾಧಗಳ ಪಟ್ಟಿಯಲ್ಲಿ ಸೇರಿಸಲಾಗಿದೆ.
Related Articles
Advertisement
ಏನಿತ್ತು? ಏನಾಯಿತು?-ಭಾರತೀಯ ದಂಡ ಸಂಹಿತೆ – ಭಾರತೀಯ ನ್ಯಾಯ ಸಂಹಿತೆ
-ಅಪರಾಧ ಪ್ರಕ್ರಿಯಾ ಸಂಹಿತೆ – ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ
-ಸಾಕ್ಷ್ಯ ಕಾಯ್ದೆ – ಭಾರತೀಯ ಸಾಕ್ಷ್ಯ ಅಧಿನಿಯಮ ಏನೆಲ್ಲ ಹೊಸತು?
-ಶೂನ್ಯ ಎಫ್ಐಆರ್
-ಕಡ್ಡಾಯ ವೀಡಿಯೋ ಚಿತ್ರೀಕರಣ
-ಆನ್‌ಲೈನ್ ಮೂಲಕ ದೂರು ದಾಖಲು
-ಎಸ್‌ಎಂಎಸ್ ಮೂಲಕ ಸಮನ್ಸ್
-45 ದಿನಗಳ ಒಳಗೆ ಶಿಕ್ಷೆ ಘೋಷಣೆ
-60 ದಿನಗಳ ಒಳಗೆ ಆರೋಪಪಟ್ಟಿ ಸಲ್ಲಿಕೆ