Advertisement
ಬುಧವಾರ ರಾತ್ರಿಯಿಂದ ಅಸ್ಸಾಂ ರಾಜಧಾನಿ ಗೌಹಾತಿಯಲ್ಲಿ ವಿಧಿಸಲಾಗಿದ್ದ ಕರ್ಫ್ಯೂವನ್ನು ಉಲ್ಲಂಘಿಸಿ ಸಾವಿರಾರು ಪ್ರತಿಭಟನಾಕಾರರು ಮೆರವಣಿಗೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಭದ್ರತಾ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಘರ್ಷಣೆ ಸಂಭವಿಸಿ ಉದ್ರಿಕ್ತ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಗುಂಡು ಹಾರಿಸಿದ್ದಾರೆ. ಈ ಸಂದರ್ಭದಲ್ಲಿ ಮೂವರು ಪ್ರತಿಭಟನಾಕಾರರು ಸಾವನ್ನಪ್ಪಿ ಹಲವರು ಗಾಯಗೊಂಡಿದ್ದಾರೆಂದು ವರದಿ ತಿಳಿಸಿದೆ.
Related Articles
Advertisement
ಕಾಯ್ದೆಯ ತಿದ್ದುಪಡಿಯನ್ನು ವಿರೋಧಿಸಿ ವಿವಿಧ ವಿದ್ಯಾರ್ಥಿ ಸಂಘಟನೆಗಳು ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹ ಪ್ರಾರಂಭದಲ್ಲಿ ಶಾಂತಿಯುತವಾಗಿಯೇ ನಡೆಯುತ್ತಿತ್ತು ಆದರೆ ಉದ್ರಿಕ್ತ ಗುಂಪೊಂದು ಪ್ರತಿಭಟನಾಕಾರರನ್ನು ಸೇರಿಕೊಂಡ ಬಳಿಕ ಈ ಪ್ರತಿಭಟನೆ ಉಗ್ರ ಮತ್ತು ಹಿಂಸಾ ಸ್ವರೂಪ ತಾಳಿತು ಎಂಬ ಮಾಹಿತಿ ಇದೀಗ ಲಭ್ಯವಾಗಿದೆ.
ತಲಾ 70 ಯೋಧರನ್ನು ಒಳಗೊಂಡ ಐದು ತುಕುಡಿಗಳನ್ನು ಅಸ್ಸಾಂನಲ್ಲಿ ನಿಯೋಜಿಸಲಾಗಿದೆ. ಇದರಲ್ಲಿ ಎರಡು ತುಕುಡಿಗಳನ್ನು ಗೌಹಾತಿಯಲ್ಲಿ ನಿಯೋಜಿಸಲಾಗಿದೆ. ತಿನ್ ಸುಖಿಯಾ, ದಿಭ್ರುಗರ್ ಮತ್ತು ಜೊರ್ಹಾಟ್ ಜಿಲ್ಲೆಗಳಲ್ಲೂ ಸಹ ಸೇನಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.