Advertisement

ಸಣ್ಣ ವಿಷಯಕ್ಕೆ 3 ದಿನ ಶೋಧ ಮಾಡಿ ನಮಗೆ ಕಿರುಕುಳ ಕೊಟ್ಟರು

09:25 PM Oct 12, 2019 | mahesh |

ಚಿಕ್ಕಬಳ್ಳಾಪುರ: ಸಣ್ಣ ವಿಷಯಕ್ಕೆಲ್ಲಾ ಮೂರು ದಿವಸ ನಮ್ಮ ಮನೆಯಲ್ಲಿ ಇದ್ದು ವಿಚಾರಣೆ ನಡೆಸಿದ್ದಾರೆ. ಬೇಕಾಗಿಯೇ ನಮಗೆ ಕಿರುಕುಳ ನೀಡುವ ದುರುದ್ದೇಶದಿಂದಲೇ ಐಟಿ ಅಧಿಕಾರಿಗಳು ನಮ್ಮ ಮನೆ ಮೇಲೆ ದಾಳಿ ನಡೆಸಿದ್ದಾರೆಂದು ಮಾಜಿ ಕೇಂದ್ರ ಸಚಿವ ಆರ್.ಎಲ್.ಜಾಲಪ್ಪ ಸಂಬಂದಿ ನಾಗರಾಜ್ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

Advertisement

ಆದಾಯಕ್ಕೂ ಮೀರಿ ಆಕ್ರಮ ಆಸ್ತಿ ಸಂಪಾದನೆ ಮಾಡಿದ್ದಾರೆಂಬ ಆರೋಪದಡಿ ಕಳೆದ ಗುರುವಾರ ಬೆಳ್ಳಂ ಬೆಳಗ್ಗೆ ನಗರದ ಪ್ರಶಾಂತ ನಗರದಲ್ಲಿರುವ ಮಾಜಿ ಕೇಂದ್ರ ಸಚಿವ ಆರ್.ಎಲ್,ಜಾಲಪ್ಪ ಸೋದರ ಅಳಿಯ ಜಿ.ಎಚ್.ನಾಗರಾಜ್ ಮನೆ ಮೇಲೆ ದಾಳಿ ನಡೆಸಿದ್ದ ಐಟಿ ಅಧಿಕಾರಿಗಳ ತಂಡ ಶನಿವಾರ ತನ್ನ ಕಾರ್ಯಾಚರಣೆಯನ್ನು ಅಂತ್ಯಗೊಳಿಸಿದೆ.

ಕೋಲಾರದಲ್ಲಿರುವ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ನಾಗರಾಜ್ ಕಾರ್ಯದರ್ಶಿಯಾಗಿದ್ದರೆ, ಜಾಲಪ್ಪ ಸ್ಥಾಪಿಸಿರುವ ದೇವರಾಜ ಅರಸು ವೈದ್ಯಕೀಯ ಕಾಲೇಜಿಗೆ ಖಜಾಂಚಿಯಾಗಿದ್ದಾರೆ. ಈ ಹಿನ್ನಲೆಯಲ್ಲಿ ಐಟಿ ಅಧಿಕಾರಿಗಳು ಕೋಲಾಟದ ಟಮಕ ಸಮೀಪ ಇರುವ ಜಾಲಪ್ಪ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜ್ ಮೇಲೆ ದಾಳಿ ಸಂದರ್ಭದಲ್ಲಿಯೆ ಚಿಕ್ಕಬಳ್ಳಾಪುರ ನಗರದಲ್ಲಿರುವ ನಾಗರಾಜ್ ಮನೆ ಮೇಲೆ ಕೂಡ ಐಟಿ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದರು.

ನಮ್ಮಲ್ಲಿ ಇದ್ದಿದ್ದು 12 ಲಕ್ಷ ಅಷ್ಟೆ:
ಮೂರು ದಿನಗಳ ಐಟಿ ಕಾರ್ಯಾಚರಣೆ ಮುಗಿದ ಬಳಿಕ ಶನಿವಾರ ಮದ್ಯಾಹ್ನ ಮನೆಯ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಎಲ್.ಜಾಲಪ್ಪ ಸಂಬಂಧಿಯಾಗಿರುವ ನಾಗರಾಜ್, ನಮ್ಮ ಮನೆಯಲ್ಲಿ ಇದ್ದಿದ್ದು ಬರೀ 12 ಲಕ್ಷ ರೂ, ಮಾತ್ರ. ಅದು ವ್ಯಾಪಾರದ ದುಡ್ಡು. ಅದಕ್ಕೆಲ್ಲಾ ನಾವು ಐಟಿ ಅಧಿಕಾರಿಗಳಿಗೆ ಅಕೌಂಟ್‌ಸ್ ತೋರಿದ್ದೇವೆ. ನಮ್ಮಲ್ಲಿರುವ ಎಲ್ಲ ಚಿನ್ನಾಭರಣ, ನಮಗೆ ಇರುವ ಜಮೀನು ಬಗ್ಗೆ ಎಲ್ಲ ಶೋ‘ನೆ ಮಾಡಿ ಅವರು ನಮಗೆ ಲೀಸ್‌ಟ್ ಬರೆದುಕೊಂಡಿದ್ದಾರೆಂದರು.

ಮಲಗಕ್ಕೂ ಬಿಡಲಿಲ್ಲ:
ನಮಗೆ ನ್ಯೂಸ್ ನೊಡಲಿಕ್ಕೆ ಸಹ ಅಧಿಕಾರಿಗಳು ಬಿಡಲಿಲ್ಲ. ಪೋನ್ ಮಾಡಲಿಕ್ಕೂ ಬಿಡಲಿಲ್ಲ. ರಾತ್ರಿ 10 , 11 ಗಂಟೆಯವರೆಗೂ ಶೋಧ ಕಾರ್ಯ ನಡೆಸಿದರು. ಸಾಮಾನ್ಯವಾಗಿ ನಾನು 9 ಗಂಟೆಗೆಲ್ಲಾ ಊಟ ಮುಗಿಸಿ ಮಲಗಿ ಬೆಳಗ್ಗೆ 6 ಗಂಟೆಗೆ ಎದ್ದೇಳುತ್ತಿದ್ದೆ. ಆದರ ಐಟಿ ಅಧಿಕಾರಿಗಳು ರಾತ್ರಿ 10 ಗಂಟೆಯಾದರೂ ನಮ್ಮನ್ನು ಮಲಗಕ್ಕೆ ಬಿಡಲಿಲ್ಲ ಎಂದರು. ಸಣ್ಣ ಕೆಲಸವನ್ನು ಒಂದು ದಿನದಲ್ಲಿ ಶೋಧ ಕಾರ್ಯ ಮುಗಿಸಬಹುದಿತ್ತು ಎಂದರು. ನಮಗೆ ಐಟಿ ದಾಳಿ ಹೊಸದೇನು ಅಲ್ಲ. ಸಾಕಷ್ಟು ಅನು‘ವ ಇದೆ. ಯಾವುದೇ ಐಟಿ ದಾಳಿಯನ್ನು ಒಂದು ದಿನದಲ್ಲಿ ಬೆಳಗ್ಗೆ ಬಂದು ಸಂಜೆಯೊಳಗೆ ಮುಗಿಸಿ ಹೋಗುತ್ತಿದ್ದರು ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next