Advertisement

ಚೆಂಬೂರು ಕರ್ನಾಟಕ ಸಂಘದಿಂದ 3 ದಿನಗಳ ನಾಗರಿಕ ತರಬೇತಿ

04:22 PM Feb 07, 2018 | Team Udayavani |

ಮುಂಬಯಿ: ಚೆಂಬೂರು ಕರ್ನಾಟಕ ಸಂಘದ ವತಿಯಿಂದ ಚೆಂಬೂರು ಕರ್ನಾಟಕ ಹೈಸ್ಕೂಲ್‌ನ ಕನ್ನಡ ಮಾಧ್ಯಮದ ಮಕ್ಕಳಿಗಾಗಿ ಮೂರು ದಿನಗಳ ನಾಗರಿಕ ತರಬೇತಿ ಶಿಬಿರವು ಇತ್ತೀಚೆಗೆ ಸಂಸ್ಥೆಯ ಸಭಾಂಗಣದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಆಯೋಜಿಸಲಾಗಿತ್ತು.

Advertisement

ಪ್ರಥಮ ದಿನದಂದು ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಸಂಘದ ಅಧ್ಯಕ್ಷ ನ್ಯಾಯವಾದಿ ಎಚ್‌. ಕೆ. ಸುಧಾಕರ ಆರಾಟೆ ಅವರು, ಈ ಶಿಬಿರದ ಸಂಪೂರ್ಣ ಲಾಭವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದರು.

ಸಂಘದ ಕೋಶಾಧಿಕಾರಿ ಟಿ. ಆರ್‌. ಶೆಟ್ಟಿ ಅವರು ಮಾತನಾಡಿ, ವಿದ್ಯಾರ್ಥಿಗಳು ತಮ್ಮಲ್ಲಿ ಅಡಗಿರುವ ಪ್ರತಿಭೆಗಳನ್ನು ಅನಾವರಣಗೊಳಿಸಲು ಸೂಕ್ತ ವೇದಿಕೆಯಾಗಿದೆ ಎಂದರು. ಸಂಘದ ಉಪಾಧ್ಯಕ್ಷ ಪ್ರಭಾಕರ ಬೋಳಾರ್‌ ಅವರು ಮಾತನಾಡಿ, ನಗುವಿನ ನಾಲ್ಕು ಪ್ರಕಾರ ಹಾಗೂ ಅದರ ಮಹತ್ವವನ್ನು ತಿಳಿಸಿದರು. ಸಂಘದ ಸದಸ್ಯ ವಿಶ್ವನಾಥ ಶೇಣವ ಅವರು ಯೋಗದ ಮಹತ್ವವವನ್ನು ವಿವರಿಸಿದರು.

ಸಂಘದ ಸದಸ್ಯರುಗಳಾದ ಗುಣಕರ ಹೆಗ್ಡೆ, ಮಧುಕರ ಬೈಲೂರು, ಯೋಗೇಶ್‌ ಗುಜರನ್‌ ಮೊದಲಾದವರು ಉಪಸ್ಥಿತರಿದ್ದರು. ಕನ್ನಡ ವಿಭಾಗ ಮುಂಬಯಿ ವಿವಿಯ ಸಹಾಯಕ ಶಿಕ್ಷಕಿ ಡಾ| ಪೂರ್ಣಿಮಾ ಎಸ್‌. ಶೆಟ್ಟಿ ಅವರು ಮಾತನಾಡಿ, ನಾವು ಕಂಡ ಕನ್ನಡ ಭಾಷೆಯ ಬಗ್ಗೆ ಹೆಮ್ಮೆ ಪಡಬೇಕು. ಕನ್ನಡ ಮಾಧ್ಯಮದಲ್ಲಿ ಕಲಿತು ಅನೇಕ ಸಾಧನೆಗಳನ್ನು ಮಾಡಬಹುದು ಎಂದರು.

ಏಕಪಾತ್ರಾಭಿನಯದ ಮಾಹಿತಿ 
ಶಾಲೆಯ ಹಳೆ ವಿದ್ಯಾರ್ಥಿ ಅನಿಲ್‌ ಶೆಟ್ಟಿ ಅವರು ಕತೆ, ಚುಟುಕು ಇತ್ಯಾದಿಗಳನ್ನು ಪ್ರಸ್ತುತಪಡಿಸಿ ಮಕ್ಕಳಿಗೆ ಅಧ್ಯಯನದ ರೀತಿಯನ್ನು ವಿವರಿಸಿದರು. ಎರಡನೇ ದಿನ ತುಳುಕೂಟ ಐರೋಲಿಯ ಮಾಜಿ ಅಧ್ಯಕ್ಷ ಪ್ರಕಾಶ್‌ ಆಳ್ವ ಅವರು ಆಗಮಿಸಿ ಮಕ್ಕಳಿಗೆ ಹಿತನುಡಿಗಳನ್ನಿತ್ತರು. ತುಳು ರಂಗಭೂಮಿಯ ನಟ, ನಿರ್ದೇಶಕ ಬಾಬಾ ಪ್ರಸಾದ್‌ ಅರಸ ಅವರು, ಮಕ್ಕಳಿಗೆ ಕಲೆ, ಭಾಷಣ ಹಾಗೂ ಏಕಪಾತ್ರಾಭಿನಯದ ಬಗ್ಗೆ ಮಾಹಿತಿ ನೀಡಿ ಸಹಕರಿಸಿದರು.

Advertisement

ಮೂರನೇ ದಿನ ಇಂಡಿಯನ್‌ ಎಕ್ಸ್‌ಪ್ರೆಸ್‌ ಪತ್ರಿಕೆಯ ವರದಿಗಾರ್ತಿ ಕು| ತಬಸ್ಸುಮ್‌ ಅವರು ಮಕ್ಕಳಿಗೆ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಮಾಹಿತಿ ನೀಡಿದರು. ಹಿರಿಯ ಪತ್ರಕರ್ತ ದಯಾಸಾಗರ್‌ ಚೌಟ ಅವರು ಮಕ್ಕಳಿಗೆ ಭಾಷಣ ಮತ್ತು ಅಭಿನಯದ ಬಗ್ಗೆ ಹೆಚ್ಚಿನ ಮಾರ್ಗದರ್ಶನ ನೀಡಿದರು. ಶಾಲೆಯ ಹಳೆವಿದ್ಯಾರ್ಥಿ ಭರತ್‌ ಶೆಟ್ಟಿ ಅವರು ತಮ್ಮ ಗಾಯನದ ಮೂಲಕ ವಿದ್ಯಾರ್ಥಿಗಳಿಗೆ ಮನರಂಜನೆ ನೀಡಿದರು.

ಗಾಯನ, ಬಹುಮಾನ ವಿತರಣೆ 
ಮುಲ್ಕಿ ಸುಂದರ್‌ರಾಮ್‌ ಶೆಟ್ಟಿ ಕಾಲೇಜಿನ ಹಳೆವಿದ್ಯಾರ್ಥಿ ಲಕ್ಷ್ಮೀ ಸತೀಶ್‌ ಶೆಟ್ಟಿ ಅವರಿಂದ ಗಾಯನ ನಡೆಯಿತು. ವಿದ್ಯಾರ್ಥಿಗಳಿಗೆ ಯೋಗದ ಬಗ್ಗೆ ಮಾಹಿತಿ ನೀಡಿ, ಆನಂತರ ರಸಪ್ರಶ್ನೆಗಳನ್ನು ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವೀಣಾ ವಿಜಯನಗರಿ ಮತ್ತು ಪ್ರಿಯಾ ಶೆಟ್ಟಿ ಅವರು ಬಹುಮಾನ ಮತ್ತು ಸಿಹಿತಿಂಡಿಯನ್ನು ವಿತರಿಸಿದರು.

ವಿದ್ಯಾರ್ಥಿಗಳಿಗೆ ಸ್ವರಚಿತ ಕವನ ವಾಚನ ಸ್ಪರ್ಧೆ ನಡೆದಿದ್ದು, ವಿಜೇತರಿಗೆ ಸಂಘದ ಉಪಾಧ್ಯಕ್ಷ ಪ್ರಭಾಕರ ಬೋಳಾರ್‌ ಅವರ ವತಿಯಿಂದ ಬಹುಮಾನ ವಿತರಿಸಲಾಯಿತು. ನ್ಯಾಯವಾದಿ ಎಚ್‌. ಕೆ. ಸುಧಾಕರ ಆರಾಟೆ, ಜಯಲಕ್ಷಿ¾à ಪೂಜಾರಿ, ಶ್ರೀರಾಮ್‌ ಮಹಾಜನ್‌, ಅನಿತಾ ಶೆಟ್ಟಿ, ಅಂಜಲಿ ಶಿಮೋರೆ, ಗೀತಾ ಭಂಡಾರಿ, ಡಾ| ಪೂರ್ಣಿಮಾ ಎಸ್‌. ಶೆಟ್ಟಿ, ಭಾರತಿ ಶೆಟ್ಟಿ, ಚರಣ್‌ಜೀತ್‌ ಕೌರ್‌, ಮನ್‌ಜಿàತ್‌ ಕೌರ್‌ ಅವರು ಬಹುಮಾನಗಳ ಪ್ರಾಯೋಜಕತ್ವ ವಹಿಸಿದ್ದರು.

ಬಹುಮಾನ ವಿತರಣ ಕಾರ್ಯಕ್ರಮದಲ್ಲಿ ಮಾಧ್ಯಮಿಕ ಶಾಲೆಯ ಮುಖ್ಯ ಶಿಕ್ಷಕಿ ಮನ್‌ಜಿàತ್‌ ಕೌರ್‌ ಶೈನಿ, ಸಂಘದ ಅಧ್ಯಕ್ಷ ನ್ಯಾಯವಾದಿ ಎಚ್‌. ಕೆ. ಸುಧಾಕರ ಆರಾಟೆ, ಉಪಾಧ್ಯಕ್ಷ ಪ್ರಭಾಕರ ಬೋಳಾರ್‌, ಜತೆ ಕಾರ್ಯದರ್ಶಿ ದೇವದಾಸ್‌ ಶೆಟ್ಟಿಗಾರ್‌, ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ದಯಾಸಾಗರ್‌ ಚೌಟ, ಮಧುಕರ ಬೈಲೂರು, ಅಶೋಕ್‌ ಸಾಲ್ಯಾನ್‌, ವಿಶ್ವನಾಥ ಶೇಣವ, ಯೋಗೇಶ್‌ ಗುಜರನ್‌ ಉಪಸ್ಥಿತರಿದ್ದರು.

ನಿವೃತ್ತ ಶಿಕ್ಷಕಿರುಗಳಾದ ಅಂಜಲಿ ಶಿಮೋರೆ, ವಾಣಿರಾಪ್‌, ಶಿಕ್ಷಕವೃಂದದವರಾದ ಜಯಲಕ್ಷಿ¾à ಪೂಜಾರಿ, ವಿಜೇತಾ ಸುವರ್ಣ, ಗೀತಾ ಭಂಡಾರಿ, ನಸೀಮ್‌ ಶೇಖ್‌, ಚರಣ್‌ಜೀತ್‌ ಕೌರ್‌, ಗೌರಿ ಶಿಂಧೆ, ಶೈಲೇಶ್‌ ಸಾಲ್ಯಾನ್‌, ಸುರೇಶ್‌ ಸುವರ್ಣ, ಭಾರತಿ ಶೆಟ್ಟಿ ಅವರು ಸಹಕರಿಸಿದರು. 

ಅನಿತಾ ಎಂ. ಶೆಟ್ಟಿ ಅವರು ಸಭಾ ಕಾರ್ಯಕ್ರಮ ನಿರ್ವಹಿಸಿದರು. ಬಹುಮಾನ ವಿತರಣೆಯ ಯಾದಿಯನ್ನು ವಿಜೇತ್‌ ಎಂ. ಸುವರ್ಣ ಓದಿದರು. ಶೈಲೇಶ್‌ ಸಾಲ್ಯಾನ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next