Advertisement

Truck Terminal ಖಾತೆಯಿಂದ ವೀರಯ್ಯಗೆ 3 ಕೋಟಿ ವರ್ಗ?

12:44 AM Jul 17, 2024 | Team Udayavani |

ಬೆಂಗಳೂರು: ದೇವರಾಜ ಅರಸು ಟ್ರಕ್‌ ಟರ್ಮಿನಲ್‌ ಹಗರಣದಲ್ಲಿ ಬಂಧನಕ್ಕೊಳಗಾಗಿ­ರುವ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮಾಜಿ ಎಂಎಲ್‌ಸಿ ಡಿ.ಎಸ್‌.ವೀರಯ್ಯಗೆ ಜುಲೈ 30ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿ 42ನೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.

Advertisement

ಮತ್ತೊಂದೆಡೆ ಟ್ರಕ್‌ ಟರ್ಮಿನಲ್‌ನ ಬ್ಯಾಂಕ್‌ ಖಾತೆಯಿಂದ 3 ಕೋಟಿ ರೂ. ವೀರಯ್ಯಗೆ ಅಕ್ರಮವಾಗಿ ವರ್ಗಾವಣೆ ಆಗಿರುವುದು ಸಾಬೀತಾಗಿದೆ ಎಂದು ಸಿಐಡಿ ಮೂಲಗಳು ತಿಳಿಸಿವೆ. ಪ್ರಕರಣ ಸಂಬಂಧ ಜುಲೈ 12ರಂದು ವೀರಯ್ಯನನ್ನು ಬಂಧಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಐದು ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ಪಡೆಯಲಾಗಿತ್ತು. ಮಂಗಳವಾರ ಕಸ್ಟಡಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ಕೋರ್ಟ್‌ಗೆ ಹಾಜರು ಪಡಿಸಿ ನ್ಯಾಯಾಂಗ ಬಂಧನ ವಿಧಿಸುವಂತೆ ಕೋರ್ಟ್‌ಗೆ ತನಿಖಾ ತಂಡ ಮನವಿ ಮಾಡಿತ್ತು.

ಅದರಿಂದ ಕೋರ್ಟ್‌ ಆರೋಪಿಗೆ ಜುಲೈ 30ರವರೆಗೆ ನ್ಯಾಯಾಂಗ ಬಂಧನಕ್ಕೆ ವಿಧಿಸಿದೆ. 2021ರಿಂದ 2023ರವರೆಗೆ ಡಿ.ಎಸ್‌.ವೀರಯ್ಯ ಡಿ.ದೇವರಾಜ ಅರಸು ಟ್ರಕ್‌ ಟರ್ಮಿನಲ್‌ ನಿಗಮದ ಅಧ್ಯಕ್ಷರಾಗಿದ್ದು ಈ ಅವಧಿಯಲ್ಲೇ ಸುಮಾರು 47 ಕೋಟಿ ರೂ. ಅಕ್ರಮ ನಡೆದಿದೆ ಎಂಬುದು ಬೆಳಕಿಗೆ ಬಂದಿತ್ತು. ಟ್ರಕ್‌ ಟರ್ಮಿನಲ್‌ ನಿಗಮದ ಖಾತೆಯಿಂದ ವೀರಯ್ಯಗೆ 3 ಕೋಟಿ ರೂ. ವರ್ಗಾವಣೆ ಆಗಿರುವುದು ಸಾಬೀತಾಗಿದ್ದು, ಈ ಹಣದಲ್ಲೇ ಆರೋಪಿ ಕೆಂಗೇರಿ ಸಮೀಪ 4 ನಿವೇಶನ ಖರೀದಿಸಿರುವುದು ಸಿಐಡಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

 

Advertisement

Udayavani is now on Telegram. Click here to join our channel and stay updated with the latest news.

Next