Advertisement

ಕೋವಿಡ್ ಅವಧಿಯಲ್ಲಿ 3 ಕೋಟಿ ಹೊಸ ಜನ್‌ಧನ್‌ ಖಾತೆ; ಶೇ. 60 ಏರಿಕೆ

07:56 PM Oct 27, 2020 | Karthik A |

ಮಣಿಪಾಲ: ಕೋವಿಡ್‌ ಸಾಂಕ್ರಾಮಿಕ ಸಮಯದಲ್ಲಿ ಜನ್‌ಧನ್ ಬ್ಯಾಂಕ್ ಖಾತೆಗಳನ್ನು ತೆರೆದವರ ಸಂಖ್ಯೆ ಹೆಚ್ಚಾಗಿದೆ.

Advertisement

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ನಡೆಸಿದ ಅಧ್ಯಯನ ಪ್ರಕಾರ, ಕೋವಿಡ್‌ ಸಾಂಕ್ರಾಮಿಕ ಸಮಯದಲ್ಲಿ ಜನ ಧನ್ ಖಾತೆ ತೆರೆಯುವ ಪ್ರಮಾಣವು ಶೇ. 60 ಹೆಚ್ಚಾಗಿದೆ.

ಎಪ್ರಿಲ್ 1 ಮತ್ತು ಅಕ್ಟೋಬರ್ 14ರ ನಡುವೆ ಸುಮಾರು 3 ಕೋಟಿ ಹೊಸ ಖಾತೆಗಳನ್ನು ತೆರೆಯಲಾಗಿದೆ. ಠೇವಣಿ 11,600 ಕೋಟಿ ರೂ. ಇರಿಸಲಾಗಿದೆ. ಇದರೊಂದಿಗೆ ಒಟ್ಟು ಜನ ಧನ್ ಖಾತೆಗಳ ಸಂಖ್ಯೆ 41.05 ಕೋಟಿಗೆ ಏರಿಕೆಯಾಗಿದೆ. ಈ ಖಾತೆಗಳಲ್ಲಿ ಒಟ್ಟು 1.31 ಲಕ್ಷ ಕೋಟಿ ರೂ. ಇದೆ.

ಎಸ್‌ಬಿಐ ಇಕೋರಾಪ್ ಸಂಶೋಧನಾ ವರದಿಯ ಪ್ರಕಾರ, ಜನ್ ಧನ್ ಎಪ್ರಿಲ್‌ನಲ್ಲಿ ಸರಾಸರಿ 3,400 ರೂ. ಉಳಿತಾಯ ಇತ್ತು. ಇದು ಸೆಪ್ಟೆಂಬರ್‌ನಲ್ಲಿ 3,168 ರೂ.ಗೆ ಇಳಿಕೆಯಾಗಿದೆ. ಆದರೆ ಬಳಿಕ ಅಕ್ಟೋಬರ್‌ನಲ್ಲಿ ಮತ್ತೆ ಸ್ವಲ್ಪ ಹೆಚ್ಚಳದೊಂದಿಗೆ ಸರಾಸರಿ ಉಳಿತಾಯ 3185 ರೂ.ಗೆ ಏರಿಕೆಯಾಗಿದೆ.

ಪ್ರಧಾನ್ ಮಂತ್ರಿ ಧನ್ ಯೋಜನೆ (PMJDY) ಅನ್ನು ಆಗಸ್ಟ್ 2014ರಲ್ಲಿ ಪ್ರಾರಂಭಿಸಲಾಯಿತು.ಯೋಜನೆಯಡಿ ಪ್ರತಿ ಕುಟುಂಬದಿಂದ ಖಾತೆ ತೆರೆಯುವ ಗುರಿಯನ್ನು ನಿಗದಿಪಡಿಸಲಾಗಿದೆ. ಈ ಖಾತೆಗಳಲ್ಲಿ 10,000 ರೂ. ಓವರ್‌ಡ್ರಾಫ್ಟ್ ಸೌಲಭ್ಯ ಲಭ್ಯವಿದೆ.

Advertisement

2.5 ಮಿಲಿಯನ್ ಹೊಸ ಇಪಿಎಫ್ ಚಂದಾದಾರರು
ಹೆಚ್ಚುವರಿಯಾಗಿ ಎಪ್ರಿಲ್-ಆಗಸ್ಟ್ ಅವಧಿಯಲ್ಲಿ, 2.5 ಮಿಲಿಯನ್ ಹೊಸ ಇಪಿಎಫ್ ಚಂದಾದಾರರು ಸೇರಿಕೊಂಡಿದ್ದಾರೆ. ಅದರಲ್ಲಿ 12.4 ಲಕ್ಷ ಜನರು ಮೊದಲ ಬಾರಿ ಪೇರೋಲ್‌ ಪಡೆಯುತ್ತಿರುವವರಾಗಿದ್ದಾರೆ. ಎಸ್‌ಬಿಐ ವರದಿಯು ಮೂರನೇ ಹಣಕಾಸಿನ ಉತ್ತೇಜನ (ಪರಿಹಾರ ಪ್ಯಾಕೇಜ್) ನಂತಹ ಖಾತೆಗಳಿಗೆ ಹೆಚ್ಚಿನ ಹಣವನ್ನು ಸೇರಿಸಲು ಸರಕಾಕ್ಕೆ ಸೂಚಿಸಿದೆ. ಉದಾಹರಣೆಗೆ, NREGA ಯೋಜನೆಯನ್ನು ಮತ್ತಷ್ಟು ಹೆಚ್ಚಿಸಬೇಕು. ಅಲ್ಲದೆ ನಗರದಲ್ಲಿ ವಾಸಿಸುವ ಬಡ ಜನರಿಗೆ ಹೊಸ ಯೋಜನೆಗಳನ್ನು ಪ್ರಾರಂಭಿಸಬೇಕು ಎಂದು ಸಲಹೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next