Advertisement

ಕನ್ನಡ ಕಲಾ ಭವನಕ್ಕೆ 3 ಕೋಟಿ ರೂ. ವೆಚ್ಚ: ಶಾಸಕ

04:04 PM Jul 05, 2019 | Team Udayavani |

ಕುಣಿಗಲ್: ಕುಣಿಗಲ್ನಲ್ಲಿ ಒಂದು ಎಕರೆ ಜಾಗದಲ್ಲಿ 3 ಕೋಟಿ ರೂ., ವೆಚ್ಚದಲ್ಲಿ ಕನ್ನಡ ಕಲಾ ಭವನ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗಿದ್ದು ಈ ನಿಟ್ಟಿನಲ್ಲಿ ಕಟ್ಟಡ ನಿರ್ಮಾಣಕ್ಕೆ ಸೂಕ್ತ ಜಾಗ ಗುರುತಿಸುವಂತೆ ಶಾಸಕ ಡಾ.ಎಚ್.ಡಿ. ರಂಗನಾಥ್‌ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ 20 ಲಕ್ಷ ರೂ., ವೆಚ್ಚದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ತಾಲೂಕು ಘಟಕದ ವತಿಯಿಂದ ನಿರ್ಮಿಸಿರುವ ನೂತನ ಕನ್ನಡ ಭವನದ ಕಟ್ಟಡ ಉದ್ಘಾಟಿಸಿ ಮಾತನಾಡಿದರು.

ತಾಲೂಕಿನಲ್ಲಿ ಅನೇಕ ಕಲಾವಿದರು, ಸಾಹಿತಿಗಳು, ಲೇಖಕರು ಕನ್ನಡ ಅಭಿಮಾನಿಗಳು ಇದ್ದು ರಾಜ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಆದರೆ ಕಲಾ ವಿದರು ಸಾಹಿತಿಗಳು ಸಭೆ ಸಮಾರಂಭ, ನಾಟಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಭವನ ಇಲ್ಲದಿರುವುದನ್ನು ಗಮನಿಸಿ ಈ ಸಂಬಂಧ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಡಿ.ಕೆ.ಶಿವ ಕುಮಾರ್‌ ಅವರಿಗೆ ತಾಲೂಕಿನಲ್ಲಿ ಕನ್ನಡ ಕಲಾ ಭವನ ನಿರ್ಮಾಣಕ್ಕೆ ಅನುದಾನ ನೀಡುವಂತೆ ಮನವಿ ಸಲ್ಲಿಸಲಾಗಿದೆ. ಇದಕ್ಕೆ ಸಚಿವರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಹಾಗಾಗಿ ಅಧಿಕಾರಿಗಳು ಆದಷ್ಟು ಬೇಗ ಜಾಗವನ್ನು ಗುರು ತಿಸಬೇಕೆಂದು ಸೂಚಿಸಿದರು.

ಹೋಬಳಿ ಮಟ್ಟದಲ್ಲಿ ಗ್ರಂಥಾಲಯ: ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯದ ಮಹತ್ವವನ್ನು ಯುವ ಜನರಲ್ಲಿ ಅರಿವು ಮೂಡಿಸಲು, ಪ್ರತಿ ಹೋಬಳಿ ಮಟ್ಟದಲ್ಲಿ ತಲಾ 5 ಲಕ್ಷ ರೂ., ವೆಚ್ಚದಲ್ಲಿ ಸಾರ್ವಜನಿಕರ ಗ್ರಂಥಾಲಯ ಪ್ರಾರಂಭಿಸಲು ಉದ್ದೇಶಿಸಲಾಗಿದೆ. ಈ ದಿಸೆಯಲ್ಲಿ ತಾಲೂಕು ಕಸಾಪ ಪದಾಧಿಕಾರಿಗಳು ಪ್ರತಿ ಹೋಬಳಿ ಮಟ್ಟದಲ್ಲಿ ಯುವ ಜನಾಂಗ ಹಾಗೂ ಹಿರಿಯರನ್ನು ಒಗ್ಗೂಡಿಸಿ ಕನ್ನಡ ಭಾಷೆಯ ಬಗ್ಗೆ ಅರಿವು ಮೂಡಿಸಬೇಕು ಎಂದು ತಿಳಿಸಿದರು.

ಅಲ್ಲದೆ, ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳುವ ಬಗ್ಗೆ ಅರಿವು ಮೂಡಿಸುವಂತಹ ಕೆಲಸ ಮಾಡಬೇಕು. ಇನ್ನು ನೂತನವಾಗಿ ಕಸಾಪ ಭವನದ ಗ್ರಂಥಾಲಯಕ್ಕೆ ಪುಸ್ತಕವನ್ನು ಖರೀದಿಸಲು ತನ್ನ ಸ್ವಂತಿಕೆಯಿಂದ ಧನ ಸಹಾಯ ಮಾಡುವುದಾಗಿ ಹೇಳಿದರು.

Advertisement

ಮೂಢನಂಬಿಕೆ ಅಪಾಯಕಾರಿ: ಕಾಲು ಕೈ ಮುರಿದು ಕೊಳ್ಳುವವರು ವ್ಯಕ್ತಿಗಳಿಂದ ಕಟ್ಟು ಹಾಕಿಸಿ ಕೊಳ್ಳುತ್ತಿದ್ದಾರೆ. ಹಾವು ಕಚ್ಚಿದರೆ ವೈದ್ಯರಿಂದ ಔಷಧಿ ತೆಗೆದು ಕೊಳ್ಳದೆ, ನಾಟಿ ಔಷಧಿ ತೆಗೆದುಕೊಂಡು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹಲವರು ದೇವರ ಮೊರೆ ಹೋಗುತ್ತಿದ್ದಾರೆ, ಇದು ಮೂಢನಂಬಿಕೆ, ಕಂದಾ ಚಾರವಾಗಿದೆ ಈ ಸಂಬಂಧ ಜನರಲ್ಲಿ ಜಾಗೃತಿ ಮೂಡಿಸಲು ಭಾನುವಾರ ಯಡಿಯೂರಿನಲ್ಲಿ ನಡೆಯುವ ಉಚಿತ ಆರೋಗ್ಯ ಶಿಬಿರದಲ್ಲಿ ಪ್ರತ್ಯೇಕ ವಾಗಿ ಅರಿವು ಜಾಗೃತಿ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿದೆ ಎಂದು ಹೇಳಿದರು.

ಗ್ರಂಥಾಲಯ ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ಡಿ.ನಾಗರಾಜಯ್ಯ, ಕಳೆದ 20 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಭವನದ ಕಟ್ಟಡವನ್ನು ಪೂರ್ಣ ಗೊಳಿಸಿರುವುದು ಶ್ಲಾಘನೀಯ. ಹಾಲಿ ಕಟ್ಟಡದ ಮೇಲೆ ಮತ್ತೂಂದು ಕಟ್ಟಡ ನಿರ್ಮಾಣಕ್ಕೆ ಜಿಲ್ಲೆಯ ನಮ್ಮ ಪಕ್ಷದಿಂದ ಆಯ್ಕೆಯಾಗಿರುವ ಜಿಲ್ಲೆಯ ಮೂರು ಮಂದಿ ಎಂಎಲ್ಸಿ ಅವರ ಅನುದಾನದಲ್ಲಿ ತಲಾ 5 ಲಕ್ಷ ರೂ., ನಂತೆ 15 ಲಕ್ಷ ರೂ., ಹಣ ಬಿಡು ಗಡೆ ಮಾಡಿಸಿಕೊಡುವುದಾಗಿ ಭರವಸೆ ನೀಡಿದರು.

ಕನ್ನಡ ಭಾಷೆ ಉಳಿಸಿ:ಜಿಲ್ಲಾ ಕಸಾಪ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಮಾತನಾಡಿ, ಕುಣಿಗಲ್ನಲ್ಲಿ ಜಿಲ್ಲಾ ಮಟ್ಟದ ಸಮ್ಮೇಳನಕ್ಕೆ ಸಹಕಾರ ನೀಡಲು ಮುಂದಾಗಿರುವ ಶಾಸಕರನ್ನು ಅಭಿನಂದಿಸಿದರು. ಕನ್ನಡ ಕಾರ್ಯ ಕ್ರಮಗಳು ವಯೋ ವಯೋವೃದ್ಧರಿಗೆ ಮಾತ್ರ ಸೀಮಿತವಾಗಿದೆ. ಬದುಕಿನ ಭಾಷೆ ಇಂಗ್ಲಿಷ್‌ ಆಗಲಿ, ಆದರೆ, ಉಸಿರಿನ ಭಾಷೆ ಕನ್ನಡವಾಗಲಿ, ಕನ್ನಡ ಭಾಷೆ ನಿತ್ಯ ಬಳಕೆಯಾದರೆ ಮಾತ್ರ ಉಳಿಸಿ ಬೆಳೆಸಿದಂತೆ ಆಗುತ್ತದೆಂದರು.

ಜಿಲ್ಲೆಯಲ್ಲಿ ಆರು ಕಡೆ ಮಾತ್ರ ಕನ್ನಡ ಭವನವಿದೆ ಉಳಿದ ತಾಲೂಕುಗಳಲ್ಲಿ ಶೀಘ್ರದಲ್ಲಿ ಭವನ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗುವುದೆಂದರು.

ಅಧ್ಯಕ್ಷತೆಯನ್ನು ತಾಲೂಕು ಕಸಾಪ ಅಧ್ಯಕ್ಷ ಕ.ಚ.ಕೃಷ್ಣಪ್ಪ ವಹಿಸಿದ್ದರು. ತಾಪಂ ಅಧ್ಯಕ್ಷ ಹರೀಶ್‌ನಾಯ್ಕ, ಇಒ ಶಿವರಾಜಯ್ಯ, ಡಿವೈಎಸ್‌ಪಿ ರಾಮಲಿಂಗೇಗೌಡ, ಪುರಸಭಾ ಮುಖ್ಯಾಧಿಕಾರಿ ಆರ್‌.ರಮೇಶ್‌, ಸದಸ್ಯರಾದ ರಂಗಸ್ವಾಮಿ, ಬಿ.ಎನ್‌.ಅರುಣ್‌ಕುಮಾರ್‌, ರಾಮು, ಮಂಜುಳಾ, ನಾಗರಾಜು, ಕೃಷ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ತಿಮ್ಮರಾಜು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವೆಂಕಟೇಶ್‌, ಕಸಾಪ ಪದಾಧಿಕಾರಿಗಳಾದ ಜಿ.ಕೆ.ನಾಗಣ್ಣ, ಕೋಟೆ ಶ್ರೀನಿವಾಸ್‌, ಜೀವಂದರ್‌ಕುಮಾರ್‌, ವರದರಾಜು, ದಲಿತ್‌ನಾರಾಯಣ್‌, ಕೆ.ಆರ್‌.ರಂಗನಾಥ್‌, ವೈ.ಜಿ.ವೆಂಕಟೇಶಯ್ಯ, ಗುರುಚರಣ್‌ಸಿಂಗ್‌, ಬಿ.ಎಂ.ತೋಪಯ್ಯ, ನಿಡಸಾಲೆ ಪ್ರಸಾದ್‌ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next