Advertisement

3 ವರ್ಷ ಅವಧಿಗೆ 3 ಕೋ. ರೂ. ಅಭಿವೃದ್ಧಿಗೆ ಬದ್ಧ : ಆಳ್ವ

12:09 PM Dec 08, 2017 | |

ಪಡುಬಿದ್ರಿ: ಪಲಿಮಾರು ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ 2017-18ನೇ ಸಾಲಿನಿಂದ ಆರಂಭಿಸಿ 3 ವರ್ಷಗಳ ಅವಧಿಯಲ್ಲಿ 3 ಕೋಟಿ ರೂ.ಗಳನ್ನು ಗ್ರಾಮಾಭಿವೃದ್ಧಿಗೆ ವ್ಯಯಿಸಲು ಒಡಂಬಡಿಕೆಯನ್ನು ಮಾಡಿಕೊಳ್ಳಲಾಗಿದೆ ಎಂದು ಅದಾನಿ ಯುಪಿಸಿಎಲ್‌ ಜಂಟಿ ಅಧ್ಯಕ್ಷ ಕಿಶೋರ್‌ ಆಳ್ವ ತಿಳಿಸಿದರು.

Advertisement

ಪಲಿಮಾರು ಗ್ರಾಮದ ಅಡ್ವೆ ಶ್ರೀ ಬ್ರಹ್ಮ ಬೈದರ್ಕಳ ಗರಡಿಯ ಹೊರಾಂಗಣಕ್ಕೆ ಯುಪಿಸಿಎಲ್‌ ತನ್ನ 10 ಲಕ್ಷ ರೂ.ಗಳ ಸಿಎಸ್‌ ಆರ್‌ ಅನುದಾನದಿಂದ ಕಾಂಕ್ರೀಟ್‌ ಹಾಸಿರುವುದನ್ನು ಡಿ.7ರಂದು ಉದ್ಘಾಟಿಸಿ ಅವರು ಮಾತನಾಡಿದರು.

2016-17ನೇ ಸಾಲಿನಲ್ಲಿ ಪಲಿಮಾರು ಗ್ರಾಮದಲ್ಲಿ 41 ಲಕ್ಷ ರೂ. ವೆಚ್ಚದ 3 ಕಾಮಗಾರಿಗಳನ್ನು ಈಗಾಗಲೇ ನಿರ್ವಹಿಸಲಾಗಿದೆ. ಪಲಿಮಾರು ಚರ್ಚ್‌ ಹಾಗೂ ಮಸೀದಿಯ ಅಭಿವೃದ್ಧಿಗೆ ಈಗಾಗಲೇ ಬೇಡಿಕೆ ಬಂದಿರುವುದಾಗಿಯೂ ಆಳ್ವ ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪಲಿಮಾರು ಗ್ರಾಮ ಪಂಚಾಯತ್‌ ಅಧ್ಯಕ್ಷ ಜಿತೇಂದ್ರ ಫುರ್ಟಾಡೊ, ಯುಪಿಸಿ
ಎಲ್‌ಗೆ ಅಭಿನಂದನೆ ಸಲ್ಲಿಸಿದರು. 2017-18ರಲ್ಲಿ ಸೂಚಿಸಿದ ಕಾಮಗಾರಿಗಳನ್ನು ಯುಪಿಸಿಎಲ್‌ಉತ್ತಮ ರೀತಿಯಲ್ಲಿ, ಕ್ಲಪ್ತ ಸಮಯದಲ್ಲಿ ನಡೆಸಿಕೊಡುವ ಭರವಸೆಯನ್ನು ನೀಡಿದೆ ಎಂದರು. 

ಈ ವೇಳೆ ಉಪಸ್ಥಿತರಿದ್ದ ಅಖೀಲ ಭಾರತ ಬಿಲ್ಲವರ ಯೂನಿಯನ್‌ ಅಧ್ಯಕ್ಷ ಜಯ ಸಿ. ಸುವರ್ಣ ಮಾತನಾಡಿ,
ಅದಾನಿ ಯುಪಿಸಿಎಲ್‌ನ ಸಿಎಸ್‌ ಆರ್‌ ಕಾರ್ಯಕ್ರಮಗಳು ದೇಶದೆಲ್ಲೆಡೆ ಪ್ರಸಿದ್ಧಿ ಪಡೆದಿವೆ. ಬ್ರಹ್ಮ ಬೈದರ್ಕಳ
ಗರಡಿಯ ಅಭಿವೃದ್ಧಿಗೆ ಸಹಕರಿಸಿದ ಅದಾನಿ ಸಂಸ್ಥೆ ಶ್ರೇಯೋಭಿವೃದ್ಧಿ ಹೊಂದಲಿ. ಸಾವಿರಾರು ಯುವಕರ
ನಿರುದ್ಯೋಗ ನೀಗಿಸುವ ಇಂಥ ಇನ್ನಷ್ಟು ಸಂಸ್ಥೆಗಳು ನಮ್ಮ ಪರಿಸರದಲ್ಲಿ ತಲೆ ಎತ್ತಲಿ ಎಂದರು.

Advertisement

ಅಡ್ವೆ ಬ್ರಹ್ಮ ಬೈದರ್ಕಳ ಸೇವಾ ಸಮಿತಿಯ ವತಿಯಿಂದ ಕಿಶೋರ್‌ ಆಳ್ವ ಅವರ ಸಾಮಾಜಿಕ ಕಳಕಳಿಯನ್ನು
ಗುರುತಿಸಿ ಗೌರವಿಸಲಾಯಿತು. ಗ್ರಾ.ಪಂ. ಸದಸ್ಯರಾದ ಸೂರಜ್‌, ವಿಜಯ ಶೆಟ್ಟಿ, ಜಯಂತಿ, ಅಬ್ದುಲ್ಲಾ,
ಎಪಿಎಂಸಿ ಸದಸ್ಯ ನವೀನ್‌ಚಂದ್ರ ಸುವರ್ಣ, ಗರಡಿಯ ಅಧ್ಯಕ್ಷ ಸುಂದರ್‌ ಎಂ. ಸುವರ್ಣ, ಅರ್ಚಕ ರಾಮ
ಪೂಜಾರಿ, ಯುಪಿಸಿಎಲ್‌ನ ಎಜಿಎಂ ಗಿರೀಶ್‌ ನಾವಡ, ಹಿರಿಯ ಪ್ರಬಂಧಕ ರವಿ ಜೀರೆ, ಅದಾನಿ ಫೌಂಡೇಶನ್‌ನ
ವಿನೀತ್‌ ಅಂಚನ್‌, ಅನುದೀಪ್‌ ಪೂಜಾರಿ, ಸುಕೇಶ್‌ ಸುವರ್ಣ, ಗರಡಿ ಮೇಲುಸ್ತುವಾರಿ ಸಮಿತಿಯ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next