Advertisement
ಜಿಲ್ಲಾಡಳಿತದ ಮಧ್ಯಸ್ಥಿಕೆಯಲ್ಲಿ ಟ್ರಾನ್ಸ್‌ಫೋರ್ಟ್ ಪದಾಧಿಕಾರಿಗಳು, ಟ್ಯಾಂಕರ್ ಮಾಲಕರು ಸೇರಿ ಬಿಪಿಸಿಎಲ್ ಅಧಿಕಾರಿಗಳ ಜತೆ ಸುದೀರ್ಘ ಮಾತುಕತೆ ನಡೆಸಿದರು. ಮಂಗಳವಾರ ಜಿಲ್ಲಾಧಿಕಾರಿಯ ಪ್ರತಿನಿಧಿಯಾಗಿ ಬಂದಿರುವ ಅಧಿಕಾರಿ ಗೋಕುಲ್‌ದಾಸ್ ನಾಯಕ್ ಅವರು ಮಾತುಕತೆ ನಡೆಸಿ, ಟ್ಯಾಂಕರ್ ಚಾಲಕರ ಸಮಸ್ಯೆಗಳಿಗೆ ಪರಿಹಾರ ದೊರಕಿಸುವಲ್ಲಿ ಪ್ರಯತ್ನವಾಗಿದೆ.
ಹಲವು ಸಂದರ್ಭಗಳಲ್ಲಿ ಸಂಸ್ಥೆಯ ನಿಗದಿತ ಅವಧಿಗಿಂತ ಹೆಚ್ಚು ಸಮಯ ಅನಿವಾರ್ಯವಾಗಿ ಟ್ಯಾಂಕರ್‌ಗಳನ್ನು ನಿಲ್ಲಿಸಿದ ಸಂದರ್ಭ ಜಿಪಿಎಸ್ ಲಾಕ್ ಸಿಸ್ಟಮ್ ತೆರವು ಮಾಡಲು ಹೇಳಿದರೆ ಇಲ್ಲಿನ ಡಿಪೋದ ಅಧಿಕಾರಿಗಳು ಸರಿಯಾದ ಸ್ಪಂದಿಸುತ್ತಿಲ್ಲ. ಜತೆಗೆ ಚಾಲಕರ ವಿಶ್ರಾಂತಿ ಕೊಠಡಿಯಲ್ಲಿ ಕುಡಿಯುವ ನೀರು, ಶೌಚಾಲಯ ಮತ್ತಿತರ ಸಮಸ್ಯೆಗಳು ಇವೆ. ಇದನ್ನು ಕೂಡ ಬಗೆಹರಿಸಬೇಕು ಎಂದು ಆಗ್ರಹಿಸಿದರು.
Related Articles
ಟ್ಯಾಂಕರ್ ಚಾಲಕರ ಬೇಡಿಕೆಗೆ ಸ್ಪಂದಿಸಿರುವ ಅಧಿಕಾರಿಗಳು ನಿಗದಿತ ಸಮಯದಲ್ಲಿ ಈಡೇರಿಸಲಾಗುವುದು ಎಂದು ಬಿಪಿಸಿಎಲ್ ಭರವಸೆ ನೀಡಿದ ಬಳಿಕ ತೈಲ ಲೋಡಿಂಗ್ ಆರಂಭಿಸಲಾಯಿತು. ತೈಲ ಸಾಗಾಟ ಟ್ಯಾಂಕರ್ ಮಾಲಕರ ವತಿಯಿಂದ ಸುಜಿತ್ ಆಳ್ವ, ಇಕ್ಬಾಲ್, ಬಿಪಿಸಿಎಲ್‌ನ ಹಿರಿಯ ಅಧಿಕಾರಿ ನೀರಜ್ ಅಗರ್ವಾಲ್ ಮೊದಲಾದವರು ಉಪಸ್ಥಿತರಿದ್ದರು.
Advertisement