Advertisement
ಗೆಲ್ಲುವ ಹಂತದಲ್ಲಿ ಸೋತ ಸೌರವ್: ಪುರುಷರ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಕೊನೆಯವರೆಗೆ ಜಿದ್ದಾಜಿದ್ದಿನ ಹೋರಾಟ ನಡೆದಿತ್ತು. ಸೌರವ್ ಘೋಷಾಲ್ ಅವರು ಹಾಂಕಾಂಗ್‌ನ ಚುನ್ ಮಿಂಗ್ ಆವ್ ಎದುರು 12-10, 13-11, 6-11, 6-11, 6-11 ಗೇಮ್‌ಗಳಿಂದ ಸೋತು ಹೋದರು. ಮೊದಲ ಗೇಮ್‌ನಲ್ಲಿ ಸೌರವ್ ಬಹಳ ಬಿರುಸಾಗಿದ್ದರು.
ಮಹಿಳಾ ಸಿಂಗಲ್ಸ್ ಸ್ಕ್ವಾಷ್‌ನಲ್ಲಿ ಭಾರತದ ತಾರಾ ಆಟಗಾರ್ತಿಯರಾದ ದೀಪಿಕಾ ಪಳ್ಳಿಕಲ್ ಮತ್ತು ಜೋತ್ಸಾ$° ಚಿನ್ನಪ್ಪ ಕೂಡ ಕಂಚಿನ ಪದಕ ಗೆದ್ದು ಸುಮ್ಮನಾದರು. ಮಲೇಶ್ಯದ ಅನುಭವಿ ಆಟಗಾರ್ತಿ ಡೇವಿಡ್ ನಿಕೋಲ್ ಎದುರು ಸೆಣಸಿದ ದೀಪಿಕಾ ಸುಲಭವಾಗಿ ಪಂದ್ಯವನ್ನು ಬಿಟ್ಟುಕೊಟ್ಟರು.
Related Articles
Advertisement
ಡಬಲ್ಸ್ ಗೆಲ್ಲುವುದು ಗುರಿ ಪಂದ್ಯ ಮುಗಿದ ಮೇಲೆ ಮಾತನಾಡಿದ ದೀಪಿಕಾ, ಆಕೆ ಅನುಭವಿ ಆಟಗಾರ್ತಿ, ಯಾವ ಸಂದರ್ಭವನ್ನು ಹೇಗೆ ನಿಭಾಯಿಸಬೇಕೆಂದು ಚೆನ್ನಾಗಿ ಗೊತ್ತಿದೆ. 10 ವರ್ಷಗಳ ಕಾಲ ಆಕೆ ವಿಶ್ವದ ನಂ.1 ಆಗಿದ್ದರು. ಈಗ ಸದ್ಯಕ್ಕೆ ಅವರದ್ದೇ ಆಟ. ನಮ್ಮ ಕಾಲಕ್ಕಾಗಿ ನಾವು ಕಾಯಬೇಕಾಗಿದೆ. ಸಿಂಗಲ್ಸ್ ಸೋಲಿನ ಬಗ್ಗೆ ನನಗೆ ಚಿಂತೆಯೇನಿಲ್ಲ. ಮುಂದೆ ಮಹಿಳಾ ಡಬಲ್ಸ್ ಹೋರಾಟವಿದೆ. ಅಲ್ಲಿ ಗೆಲ್ಲುವುದು ಸದ್ಯದ ಗುರಿ ಎಂದು ಹೇಳಿಕೊಂಡಿದ್ದಾರೆ. ಮತ್ತೂಂದು ಕಡೆ ಜೋತ್ಸಾ° ಚಿನ್ನಪ್ಪ ಕೂಡ ಸೆಮಿಫೈನಲ್‌ಗೆ ತಮ್ಮ ಹೋರಾಟ ಮುಗಿಸಿದರು. ಅವರೂ ಕೂಡ ಮಲೇಶ್ಯ ಎದುರಾಳಿಯ ವಿರುದ್ಧವೇ ಕೈಚೆಲ್ಲಿದರು. ಶಿವಸಂಗರಿ ಸುಬ್ರಮಣಿಯಮ್ 12-10, 6-11, 11-9 ಗೆದ್ದು ಫೈನಲ್‌ಗೇರಿದರು. ಸೋತ ಅನಂತರ ಜೋತ್ಸಾ$° ಅಂಪಾಯ ರಿಂಗ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. “ಅಂಪಾಯರಿಂಗ್ ಅಪ್ರಾಮಾಣಿಕವಾಗಿತ್ತು. ಈ ರೆಫ್ರಿ ಇದ್ದಾಗೆಲ್ಲ ನನಗೆ ಹೀಗೆಯೇ ಅನಿಸಿದೆ. ಅದೇನೆ ಇರಲಿ ಶಿವ ಚೆನ್ನಾಗಿ ಆಡಿದರು. ನಾನು ಈ ಪದಕಕ್ಕಾಗಿ ಬಹಳದೀರ್ಘ ಕಾಲ ಕಾದಿದ್ದೇನೆ. ಈ ಹಿಂದೆ 3 ಬಾರಿ ಏಶ್ಯನ್ ಗೇಮ್ಸ್‌ನಲ್ಲಿ ಆಡಿದ್ದರೂ ನನಗೆ ಪದಕ ಸಿಕ್ಕಿರಲಿಲ್ಲ’ ಎಂದು ಹೇಳಿದ್ದಾರೆ. ಕಾಲು ನೋವು ಸೌರವ್ ಸೋಲಿಗೆ ಕಾರಣ
ಆರಂಭದಲ್ಲಿ ಎರಡು ಗೇಮ್‌ಗಳಲ್ಲಿ ತೀವ್ರವಾಗಿ ಸೆಣಸಾಡಿ ಗೆದ್ದಿದ್ದ ಸೌರವ್ ಘೋಷಾಲ್ ಮುಂದಿನ 3 ಗೇಮ್‌ಗಳಲ್ಲಿ ಮಂಕಾದರು. ಅವರಲ್ಲಿ ಆ ತೀವ್ರತೆ, ಕೆಚ್ಚು ಕಾಣಲೇ ಇಲ್ಲ. ಇದಕ್ಕೆ ಕಾರಣವನ್ನು ಸ್ವತಃ ಸೌರವ್ ಪಂದ್ಯದ ಅನಂತರ ಬಿಟ್ಟುಕೊಟ್ಟರು. 2ನೇ ಗೇಮ್ ಮುಗಿದ ಅನಂತರ ಎಡಗಾಲು ವಿಪರೀತ ನೋಯತೊಡಗಿತು. ಆಡುವುದು ಅಸಾಧ್ಯ ಅನ್ನುವ ಮಟ್ಟಕ್ಕೆ ತಲುಪಿದ್ದೆ. ಆದರೆ ಇದನ್ನು ನನ್ನ ಸೋಲಿಗೆ ಕಾರಣವಾಗಿ ನೀಡುವುದಿಲ್ಲ. ಮೊದಲೆರಡು ಗೇಮ್ ಸೋತರೂ ಪಂದ್ಯವನ್ನು ತನ್ನ ಪರವಾಗಿಸಿಕೊಂಡ ಚುನ್ ಮಿಂಗ್ ಅದ್ಭುತ ಆಟವಾಡಿದ್ದಾರೆಂದು ಸೌರವ್ ಹೇಳಿಕೊಂಡಿದ್ದಾರೆ.