Advertisement
ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ, ಕರ್ನಾಟಕ ಸರ್ಕಾರ ವತಿಯಿಂದ ರಾಜ್ಯದ ಸಾಹಸಿಗರನ್ನು ಮೌಂಟ್ ತುಳಿಯನ್ ಶಿಖರ ಏರಲು ಆಯ್ಕೆ ಮಾಡಿಕೊಂಡಿತ್ತು. ಶಿಖರದ ತುತ್ತ ತುದಿಯನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಸಾಹಸಿಗರು ಮೊದಲು ಪ್ರವೇಶಿಸಿದರಲ್ಲದೆ, ರಾಷ್ಟ್ರಧ್ವಜ ಮತ್ತು ನಾಡಧ್ವಜವನ್ನು ಹಾರಿಸಿ ಗಮನಸೆಳೆದಿದ್ದಾರೆ.
Related Articles
ಆ.26ರಂದು ವಿಮಾನ ಪ್ರಯಾಣ ಮಾಡಿ ಜಮ್ಮುವಿನ ಪಹಾಲ್ಗಮ್‌ನ ನಗರದ ಜವಾರ್ ಇನ್ಸ್ಟಿಟ್ಯೂಟ್ ಆಫ್ ಮೌಂಟೈನೇರಿಂಗ್ ಆ್ಯಂಡ್ ವಿನrರ್ ಸ್ಪೋರ್ಟ್ಸ್ ಸಂಸ್ಥೆ ಸಹಕಾರದಿಂದ ಆ.31ರಂದು ಮೌಂಟ್ ತುಳಿಯನ್ ಶಿಖರವನ್ನು ಸತತವಾಗಿ 22 ಗಂಟೆ ಒಳಗೆ ಸಂಪೂರ್ಣ ಯಶಸ್ವಿಗೊಳಿಸಿದ್ದಾರೆ.
Advertisement
ಸಾಕಷ್ಟು ಅಪಾಯ: 22 ಸಾಹಸಿಗರಲ್ಲಿ ಕೇವಲ 13 ಮಂದಿ ಮಾತ್ರ ಗುರಿ ತಲುಪಿದ್ದಾರೆ. ಅದರಲ್ಲಿ ಮೊಟ್ಟ ಮೊದಲಿಗೆ ಶಿಖರದ ತುದಿ ಸೇರಿಕೊಳ್ಳುವಲ್ಲಿ ಜಿಲ್ಲೆಯ ರಮೇಶ್ ಯಶಸ್ವಿ ಆಗಿದ್ದಾರೆ. ಶಿಖರವನ್ನು ಹತ್ತುವ ವೇಳೆ ಸಾಕಷ್ಟು ಅಪಾಯಗಳಿಂದ ತಪ್ಪಿಸಿಕೊಂಡ ಕೆಲವು ಘಟನೆಗಳನ್ನು ಸಾಹಸಿ ಸುನೀಲ್ ನಾಯಕ್ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
ಅಪಾಯದಿಂದ ಪಾರು: ಶಿಖರವನ್ನು ಏರುವ ವೇಳೆ ತಿನ್ನಲು ಆಹಾರದ ಸಮಸ್ಯೆ, ಉಸಿರಾಡಲು ಗಾಳಿಯ ಸಮಸ್ಯೆ ತಂಡದ ಕೆಲವರಿಗೆ ಉಂಟಾಗಿ ಸಾಕಷ್ಟು ತೊಂದರೆ ಆಗಿತ್ತು. ಅದೇ ರೀತಿ ದೊಡ್ಡ ಕಲ್ಲು ಬಂಡೆಗಳು ಶಿಖರದಿಂದ ಉರುಳಿ ಬಿದ್ದಿದ್ದು, ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದೇವೆ ಎಂದು ತಿಳಿಸಿದರು. ಸದ್ಯ ಮೌಂಟ್ ತುಳಿಯನ್ ಶಿಖರವನ್ನು ಏರಿದ ನಂತರ ತುದಿಯಲ್ಲಿ ನಾಡಧ್ವಜ ಹಾಗೂ ರಾಷ್ಟ್ರಧ್ವಜ ದೊಂದಿಗೆ ಪೋಸ್ ನೀಡಿರುವ ದೃಶ್ಯ ಹಾಗೂ ಶಿಖರವನ್ನು ಏರುತ್ತಿರುವ ಸಾಹಸ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ, ಅಪೂರ್ವ ಸಾಧನೆ ಮಾಡಿದ ಸುನೀಲ್ ನಾಯಕ್, ರಮೇಶ್, ಶಂಕರ್‌ನಾಗ್ ಅವರನ್ನು ಜಿಲ್ಲೆಯ ಜನತೆ ಅಭಿನಂದಿಸಿದ್ದಾರೆ.