Advertisement

ಮಣಿಪುರ: ಪಿಎಲ್ ಎ ಉಗ್ರರ ದಾಳಿಗೆ 3 ಅಸ್ಸಾಂ ರೈಫಲ್ಸ್ ಯೋಧರು ಹುತಾತ್ಮ, ಐವರು ಗಂಭೀರ

01:28 PM Jul 30, 2020 | Nagendra Trasi |

ಇಂಫಾಲ್: ಮಯನ್ಮಾರ್ ಗಡಿ ಸಮೀಪದ ಮಣಿಪುರದ ಚಾಂಡೇಲ್ ಜಿಲ್ಲೆಯಲ್ಲಿ ಸ್ಥಳೀಯ ಉಗ್ರರು ನಡೆಸಿದ ದಾಳಿಯಲ್ಲಿ ಅಸ್ಸಾಂ ರೈಫಲ್ಸ್ ನ ಮೂವರು ಯೋಧರು ಹುತಾತ್ಮರಾಗಿದ್ದು, ಐವರು ಗಾಯಗೊಂಡಿರುವ ಘಟನೆ ನಡೆದಿರುವುದಾಗಿ ವರದಿ ತಿಳಿಸಿದೆ.

Advertisement

ಉಗ್ರರ ದಾಳಿಯಲ್ಲಿ ಗಾಯಗೊಂಡ ಯೋಧರ ಸ್ಥಿತಿ ಚಿಂತಾಜನಕವಾಗಿದೆ ಎಂದು ಮೂಲಗಳು ಹೇಳಿವೆ. ಎಎನ್ ಐ ವರದಿ ಪ್ರಕಾರ, ಇದೊಂದು ಪೂರ್ವನಿಯೋಜಿತ ದಾಳಿಯಾಗಿದೆ. ಅಸ್ಸಾಂನ ಪೀಪಲ್ಸ್ ಲಿಬರೇಶನ್ ಆರ್ಮಿ ಎಂಬ ಉಗ್ರಗಾಮಿ ಸಂಘಟನೆ ನಡೆಸಿರುವ ದಾಳಿ ಇದಾಗಿದೆ ಎಂದು ವಿವರಿಸಿದೆ.

ಭಯೋತ್ಪಾದಕರು ಮೊದಲು ಐಇಡಿಯನ್ನು ಸ್ಫೋಟಿಸಿದ್ದರು. ಬಳಿಕ ಗುಂಡಿನ ದಾಳಿ ನಡೆಸಿರುವುದಾಗಿ ವರದಿ ತಿಳಿಸಿದೆ. ಮಣಿಪುರ ರಾಜಧಾನಿ ಇಂಫಾಲದಿಂದ ನೂರು ಕಿಲೋ ಮೀಟರ್ ದೂರದಲ್ಲಿರುವ ಚಾಂಡೇಲ್ ಪ್ರದೇಶಕ್ಕೆ ಹೆಚ್ಚುವರಿ ಸೇನೆಯನ್ನು ಕಳುಹಿಸಿದ್ದು, ಶೋಧ ಕಾರ್ಯಾಚರಣೆ ನಡೆಯುತ್ತಿರುವುದಾಗಿ ವರದಿ ತಿಳಿಸಿದೆ.

ಪ್ರತ್ಯೇಕತವಾದಿ ಸಂಘಟನೆಗಳಿಗೆ ನಿರಂತರವಾಗಿ ಚೀನಾದಿಂದ ಶಸ್ತ್ರಾಸ್ತ್ರ ಮತ್ತು ಆರ್ಥಿಕ ನೆರವು ದೊರೆಯುತ್ತಿರುತ್ತದೆ. ಇದರಿಂದಾಗಿ ಈಶಾನ್ಯ ರಾಜ್ಯಗಳಲ್ಲಿ ಉಗ್ರ ಚಟುವಟಿಕೆಯ ಜಾಲವನ್ನು ಬಲಗೊಳಿಸಲು ನೆರವಾಗುತ್ತಿದೆ ಎಂದು ವರದಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next