Advertisement

Job: 27 ವರ್ಷ ಒಂದೂ ರಜೆ ಪಡೆಯದ ವ್ಯಕ್ತಿಗೆ 3.5 ಕೋಟಿ ರೂ. ಬಹುಮಾನ!

12:04 AM Aug 18, 2023 | Team Udayavani |

ವಾಷಿಂಗ್ಟನ್‌: ಕಾಯಕವೇ ಕೈಲಾಸವೆಂದು ಸುದೀರ್ಘ‌ 27 ವರ್ಷಗಳ ಕಾಲ ಒಂದು ದಿನವೂ ಕೆಲಸಕ್ಕೆ ರಜೆ ಪಡೆಯದೇ ಕರ್ತವ್ಯ ನಿರ್ವಹಿಸಿದ ಅಮೆರಿಕದ ಬರ್ಗರ್‌ ಕಿಂಗ್‌ನ ಉದ್ಯೋಗಿ ಯೊಬ್ಬರಿಗೆ, ತಮ್ಮ ಶ್ರಮವೇ ವರವಾಗಿದೆ. ಅವರ ನಿಷ್ಠೆಗೆ ಪ್ರತಿಫ‌ಲವಾಗಿ 3.5 ಕೋಟಿ ರೂ.ಗಳ ಗೌರವ ಸಂದಿದೆ. ಹಾಗಂತ ಈ ಬಹುಮಾನವನ್ನು ಕೊಟ್ಟಿದ್ದು ಬರ್ಗರ್‌ ಕಿಂಗ್‌ ಸಂಸ್ಥೆ ಅಲ್ಲ!

Advertisement

ನೆವಾಡಾದ ಲಾಸ್‌ವೇಗಾಸ್‌ನ ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ಬರ್ಗರ್‌ ಕಿಂಗ್‌ನಲ್ಲಿ ಬಾಣಸಿಗರಾಗಿದ್ದ ಕೆವಿನ್‌ ಫೋರ್ಡ್‌ ನಿವೃತ್ತಿ ಹೊಂದುವಾಗ ಸಂಸ್ಥೆಯಿಂದ ಕೊಂಚ ಸಹಾಯ ಸಿಗಬಹುದು, ಮೊಮ್ಮಕ್ಕಳೊಂದಿಗೆ ನೆಮ್ಮದಿಯಾಗಿ ಮುಂದಿನ ದಿನಗಳನ್ನು ಕಳೆಯಬಹುದು ಎಂದುಕೊಂಡಿದ್ದರು. ಆದರೆ, ಸಂಸ್ಥೆ ಯಾವುದೇ ಹಣಕಾಸು ನೆರವನ್ನು ನೀಡದೆ ಸಣ್ಣ ಪುಟ್ಟ ಉಡುಗೊರೆಗಳೊಂದಿಗೆ ಬೀಳ್ಕೊಡುಗೆ ಮುಗಿಸಿಬಿಟ್ಟಿತು.

ಈ ವಿಚಾರದಿಂದ ಬೇಸರಗೊಂಡ ಕೆವಿನ್‌ ಅವರ ಮಗಳು ಜಾಲತಾಣದಲ್ಲಿ ತಮ್ಮ ತಂದೆಯ ಕರ್ತವ್ಯ ನಿಷ್ಠೆಯ ಬಗ್ಗೆ ಹೇಳಿಕೊಂಡು ವಿಡಿಯೋವೊಂದನ್ನು ಅಪ್ಲೋಡ್‌ ಮಾಡಿದ್ದರು. ಆ ಬಳಿಕ ಜಗತ್ತಿನಾದ್ಯಂತ ಹಲವಾರು ಮಂದಿ ಕೆವಿನ್‌ ಅವರ ಶ್ರದ್ಧೆ ಮೆಚ್ಚಿ ಹಣಕಾಸು ನೆರವು ನೀಡಲು ಮುಂದಾದರು. ಇದರ ಫ‌ಲವಾಗಿ ಅವರ ಖಾತೆಗೆ ಸಂದಾಯವಾದ ಒಟ್ಟು ಮೊತ್ತ ಬರೋಬ್ಬರಿ 3.5 ಕೋಟಿ ರೂ.! ಇದೀಗ ಕೆವಿನ್‌ ತಮ್ಮ ನಿವೃತ್ತ ಬದುಕನ್ನು ಮೊಮ್ಮಕ್ಕಳೊಂದಿಗೆ ತಮ್ಮದೇ ಸ್ವಂತ ಮನೆಯಲ್ಲಿ ಕಳೆಯುವಂತಾಗಿದ್ದು, ತಮಗಾಗಿ ಮಿಡಿದವರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಒಟ್ಟಾರೆ ಪ್ರತ್ಯಕ್ಷವಾಗಿಯೇ ಪರೋಕ್ಷವಾಗಿಯೋ ಪಟ್ಟ ಶ್ರಮಕ್ಕೆ ಪ್ರತಿ ಫ‌ಲ ಸಿಕ್ಕೇ ಸಿಗುತ್ತದೆಂಬ ಮಾತು ನಿಜವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next