ಅರಸೀಕೆರೆ: ಸಂಘದ ಸದಸ್ಯರ ಅಭಿಮಾನ, ಸಹಕಾರದಿಂದ 2019-20ನೇ ಸಾಲಿನಲ್ಲಿ ನಮ್ಮ ಸಂಘವು 3,45,372 ರೂ. ಲಾಭ ಗಳಿಸಿದೆ ಎಂದು ನಗರದ ಬಸವೇಶ್ವರ ಸಹಕಾರ ಸಂಘದ ಅಧ್ಯಕ್ಷ ಈರಯ್ಯ ತಿಳಿಸಿದರು.
ನಗರದ ವೀರಶೈವ ಸಮುದಾಯ ಭವನ ದಲ್ಲಿಭಾನುವಾರ ಏರ್ಪಡಿಸಿದ್ದ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಯಾವುದೇ ಸಹಕಾರ ಸಂಘ ಅಭಿವೃದ್ಧಿ ಆಗ ಬೇಕಾದರೆ ಸಾಲವನ್ನು ನಿಗದಿತ ಸಮಯದಲ್ಲಿ ಮರುಪಾವತಿ ಮಾಡುವುದು ಅಗತ್ಯವಾಗಿದೆ.ಜಾಮೀನುದಾರರು ಸಾಲಗಾರರಷ್ಟೆ ಸಂಘದ ಸಾಲಕ್ಕೆ ಜವಾಬ್ದಾರರಾಗಿರುತ್ತಾರೆ. ಸಂಘದ ಬಹುತೇಕ ಸದಸ್ಯರು ಅಭಿಮಾನದಿಂದ ನಿಯಮಿತ ಅವಧಿಯಲ್ಲಿ ಪಾವತಿ ಮಾಡುವ ಮೂಲಕ ಸಂಘವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಸಹಕಾರ ನೀಡಿದ್ದಾರೆ ಎಂದು ಹೇಳಿದರು.
ಸಂಘದ ಶೇ.30 ಮಂದಿ ಮಾತ್ರ ಸಾಲ ತೆಗೆದುಕೊಳ್ಳುತ್ತಿದ್ದು, ಎಲ್ಲಾ ಸದಸ್ಯರು ಸಾಲ ಸೌಲಭ್ಯವನ್ನು ಪಡೆದರೆ ಸಂಘದ ಅಭಿವೃದ್ಧಿಗೆಸಹಕಾರವಾಗುತ್ತದೆ. ಪ್ರತಿಯೊಬ್ಬ ಸದಸ್ಯ ಉಳಿತಾಯ ಖಾತೆ ಮಾಡಿಸುವ ಮೂಲಕ ಬ್ಯಾಂಕಿನಲ್ಲಿ ವ್ಯವಹರಿಸಬೇಕು, ಈಗ ಬ್ಯಾಂಕ್‌ಕಂಪ್ಯೂಟರೀಕರಣಗೊಂಡಿದ್ದು, ಇದರ ಸೌಲಭ್ಯವನ್ನು ಸದಸ್ಯರು ಪಡೆಯಬೇಕು. ಸ್ವತಃನಿವೇಶನದಲ್ಲಿ ಬ್ಯಾಂಕಿನ ನೂತನ ಕಟ್ಟಡನಿರ್ಮಿಸಲಾಗುತ್ತಿದ್ದು, ಇದರ ನಿರ್ಮಾಣಕ್ಕೆ ದಾನಿಗಳು ಹಾಗೂ ಸದಸ್ಯರು ಸಹಕಾರ ನೀಡಬೇಕೆಂದು ವಿನಂತಿಸಿದರು.
ಸಂಘದ ಮಾಜಿ ಅಧ್ಯಕ್ಷ ಶಿವಕುಮಾರ ಸ್ವಾಮಿ ಮಾತನಾಡಿ, ಸಂಘದಲ್ಲಿ ಒಟ್ಟು 997 ಸದಸ್ಯರಿದ್ದು, ಶೇರು ಬಂಡವಾಳ 10,54,530ರೂ., ಠೇವಣಿಣಾತಿ 1,18,62,729 ರೂ. ಸಂಗ್ರಹಣೆ ಮಾಡುವ ಮೂಲಕ ಪ್ರಗತಿಹೊಂದಿದ್ದು, ಸಂಘವು 39,80,000 ರೂ. ಸಾಲವನ್ನು ಸದಸ್ಯರಿಗೆ ನೀಡಿದೆ. ಈ ಪೈಕಿ39,11,499 ರೂ. ವಸೂಲಾಗಿದೆ. ವರ್ಷಾಂತ್ಯಕ್ಕೆ 70,85,127 ರೂ. ಬಾಕಿ ಉಳಿದಿದೆ ಎಂದು ವಿವರಿಸಿದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷೆ ಓ.ಜಿ.ಗೀತಾ, ನಿರ್ದೇಶಕರಾದಎಂ.ಜಿ.ಶಿಲ್ಪಾ ಸತೀಶ್, ತಿಪ್ಪೇಸ್ವಾಮಿ, ಮಂಜು ನಾಥ್ ಜವಳಿ, ಎಚ್.ಟಿ.ಕುಮಾರಸ್ವಾಮಿ, ಬಿ.ಎನ್.ರೇಣುಕಾ ಪ್ರಸಾದ್, ಪ್ರವೀಣ್ ಕುಮಾರ್, ಇನ್ನಿತರರು ಪಾಲ್ಗೊಂಡಿದ್ದರು.